Karnataka: ಸಂಪನ್ಮೂಲ ಕ್ರೋಡೀಕರಣಕ್ಕೆ ಡಿಕೆಶಿ ಸೂಚನೆ

5 ವರ್ಷದಲ್ಲಿ 2 ಲಕ್ಷ ಕೋಟಿ ರೂ. ನೀರಾವರಿ ಯೋಜನೆಗಳ ಅನುಷ್ಠಾನ

Team Udayavani, May 31, 2023, 7:40 AM IST

D K SHIVAKUMAR

ಬೆಂಗಳೂರು: ಮುಂದಿನ ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂ. ಮೌಲ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇವೆಂದು ರಾಜ್ಯದ ಜನತೆಗೆ ಭರವಸೆ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆ ಅಧಿ ಕಾರಿಗಳ ಜತೆಗೆ ಮಂಗಳವಾರ ಸಭೆ ನಡೆಸಿದ ಅವರು, ಕೇಂದ್ರದಿಂದ ಕರ್ನಾಟಕದ ನೀರಾವರಿ ಯೋಜನೆ ಗಳಿಗೆ ಅನುಮತಿ ತರುವುದೇ ನಾನು ನಿಮಗೆ ನೀಡುತ್ತಿರುವ ಪ್ರಧಾನ ಗುರಿಯಾಗಿದೆ. ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಜಲವಿವಾದ ಪರಿಹಾರ, ಬಾಕಿ ಯೋಜನೆ ಪೂರ್ಣಗೊಳಿಸುವುದು, ನೀರಾವರಿ ಯೋಜನೆಗಳಿಗೆ ಸಂಪ ನ್ಮೂಲ ಕ್ರೋಡೀಕರಣ, ಕೇಂದ್ರ ದಿಂದ ಅನುದಾನ ತರುವುದು ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು. ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 2 ಲಕ್ಷ ಕೋಟಿ ರೂ. ವಿನಿಯೋಗಿಸುತ್ತೇವೆಂದು ಮಾತು ಕೊಟ್ಟಿದ್ದೇವೆ. ಸರಕಾರ, ಸಂಸ್ಥೆಗಳು, ಕೇಂದ್ರದ ಅನುದಾನದ ಮೂಲಕ ಸಂಪನ್ಮೂಲ ಒಟ್ಟುಗೂಡಿಸಬೇಕು ಎಂದು ಸೂಚಿಸಿದರು.

ಶೇಖಾವತ್‌ ಒಳ್ಳೆಯವರು
ಕೇಂದ್ರ ಜಲಶಕ್ತಿ ಸಚಿವ ಶೇಖಾವತ್‌ ಉತ್ತಮ ವ್ಯಕ್ತಿ. ರಾಜ್ಯದ ಕೆಲಸಗಳಿಗೆ ಅವರ ಸಹಕಾರ ಪಡೆಯೋಣ. ಬಾಕಿ ಯೋಜನೆಗಳಿಗೆ ಭೂಸ್ವಾಧೀನ ತ್ವರಿತಗತಿಯಲ್ಲಿ ಮಾಡಿ. ಗುಣಮಟ್ಟದಲ್ಲಿ ರಾಜಿ ಇಲ್ಲ. ಬರೀ ಎಲ…ಒಸಿ, ಟೆಂಡರ್‌, ಗುತ್ತಿಗೆ ಹಂಚಿಕೆ, ಬಿಲ್‌ ಮಾಡುವ ಕೆಲಸಕ್ಕೆ ನಿಮ್ಮ ಶ್ರಮ ವಿನಿಯೋಗ ಆಗಬಾರದು. ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ನಿಷ್ಠೆ, ಪ್ರಾಮಾಣಿಕತೆಗೆ ಮಾತ್ರ ಪ್ರೋತ್ಸಾಹ. ಜಾತೀಯತೆ ಬೇಡ. ಮಾನವೀಯತೆ ಇರಲಿ ಎಂದು ಕಿವಿ ಮಾತು ಹೇಳಿದರು.

ಎಚ್ಚರಿಕೆಯಿಂದ ಕೆಲಸ ಮಾಡಿ
ಮೇಕೆದಾಟು ಯೋಜನೆಗೆ ಮೀಸಲಿಟ್ಟ 1,000 ಕೋಟಿ ರೂ. ಅನುದಾನವನ್ನು ಭೂಸ್ವಾಧೀನದಂತಹ ಪೂರ್ವಸಿದ್ಧತೆ ಕೆಲಸಗಳಿಗೆ ಬಳಕೆ ಮಾಡಬಹುದಿತ್ತು. ಆದರೆ ನೀವು ಯಾಕೆ ಮಾಡಿಲ್ಲ? ಹಾಗಾದರೆ ಹಣ ಇಟ್ಟಿದ್ದಾದರೂ ಏಕೆ? ನನಗೆ ಯಾವುದೇ ದ್ವೇಷ ಇಲ್ಲ. ಕೆಲಸ ಆಗಬೇಕು ಅಷ್ಟೇ ಎಂದು ಎಚ್ಚರಿಕೆ ನೀಡಿದರು. ನೀವು ಸರಕಾರಕ್ಕೆ ನಿಷ್ಠಾರಾಗಿರಬೇಕೇ ಹೊರತು ನಿಮಗೆ ಪೋಸ್ಟಿಂಗ್‌ ಕೊಟ್ಟವರಿಗಲ್ಲ. ಅಂತವರನ್ನು ಸಹಿಸುವುದಿಲ್ಲ. ನನಗೂ 33 ವರ್ಷ ಅನುಭವ ಇದೆ. ನಿಮ್ಮ ಕೈಯಲ್ಲಿ ಮಾಡಬಾರದ್ದು ಮಾಡಿಸಲ್ಲ. ದಾರಿ ತಪ್ಪಬೇಡಿ. ಎಚ್ಚರಿಕೆಯಿಂದ ಕೆಲಸ ಮಾಡಿ. ಬದಲಾವಣೆ ತನ್ನಿ ಎಂದರು.

ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ
ನೆರೆಯ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಕ್ಕೆ ಎಷ್ಟು ಯೋಜನೆಗಳು ಬಂದಿವೆ, ನಮ್ಮ ರಾಜ್ಯಕ್ಕೆ ಎಷ್ಟು ಬಂದಿವೆ ಎಂದು ನೀವೇ ಹೋಲಿಕೆ ಮಾಡಿ. ನೀವು ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದೀರಿ ಎಂದು ಗೊತ್ತಾಗುತ್ತದೆ. ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ. ನಾವು ಕರ್ನಾಟಕದ ಎಂಪಿಗಳ ಜತೆ ಸಭೆ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ. ಪ್ರಧಾನಿಗಳು, ಕೇಂದ್ರದ ಜಲ ಸಂಪನ್ಮೂಲ ಸಚಿವರು ಸೇರಿದಂತೆ ಅಗತ್ಯ ಇರುವ ಎಲ್ಲರನ್ನೂ ಭೇಟಿ ಮಾಡೋಣ. ಕೇಂದ್ರದಿಂದ ಯೋಜನೆಗಳನ್ನು ತರುವ ಗುರಿಯನ್ನು ನಿಮಗೆ ನೀಡುತ್ತಿದ್ದೇನೆ. ಕೇಂದ್ರಕ್ಕೆ ಮನವರಿಕೆ ಮಾಡಿ ಯೋಜನೆ ತರುವುದೇ ನಿಮ್ಮ ಕೆಲಸ. ಕೆಲಸ ಮಾಡಿದರೆ ನೀವು ಇಲ್ಲಿರುತ್ತೀರಿ. ಇಲ್ಲದಿದ್ದರೆ ನಿಮ್ಮ ಜಾಗದಲ್ಲಿ ಬೇರೆಯವರು ಇರುತ್ತಾರೆ ಎಂದು ಡಿಕೆಶಿ ಎಚ್ಚರಿಕೆ ನೀಡಿದರು.

ಕಾಲ ಕಾಲಕ್ಕೆ ವರದಿ ಕೊಡಿ
ಇಲಾಖೆಯ ಕಾರ್ಯವೈಖರಿ ಬಗ್ಗೆ ಕಾಲ ಕಾಲಕ್ಕೆ ವರದಿ ಕೊಡಬೇಕು. ಯಾವ ಯಾವ ಯೋಜನೆಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ವೀಡಿಯೋ, ಫೋಟೋ ದಾಖಲೆ ಒದಗಿಸಬೇಕು.ಯೋಜನೆಗಳು ಕುಂಠಿತಗೊಳ್ಳಲು ಕಾರಣಗಳನ್ನು ಸಾಕ್ಷಿ ಸಮೇತ ನೀಡಬೇಕು. ಕತೆ, ಕಟ್ಟು ಕತೆ ಕೇಳುವುದಿಲ್ಲ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೆೆ ಎನ್ನುವುದಕ್ಕಿಂತ ಎಷ್ಟು ಕೆಲಸ ಮಾಡಿದೆ ಎಂಬುದೇ ಮುಖ್ಯವಾಗಬೇಕು. ಯಾವುದೇ ಯೋಜನೆ ಮಾಡಿದರೂ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹೇಳಿದರು.

ಟಾಪ್ ನ್ಯೂಸ್

Panemangalore  Bridge: ಬಸ್‌ ಕೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Panemangalore Bridge: ಬಸ್‌ ಕೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

ಮೂಳೂರು: ಕ್ಯಾಂಟೀನ್‌ ಮಾಲಕ ಆತ್ಮಹತ್ಯೆ

Kapu ಮೂಳೂರು: ಕ್ಯಾಂಟೀನ್‌ ಮಾಲಕ ಆತ್ಮಹತ್ಯೆ

Untitled-1

Missing Case ಅಣ್ಣ ತಂಗಿಯರ ಪುತ್ರಿಯರು ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

karnataka bund

Cauvery: ನಾಳೆ ಕರ್ನಾಟಕ ಬಂದ್‌- ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲವೂ ಸ್ಥಗಿತ ಸಾಧ್ಯತೆ

bosaraju 1

ಬರ ನಿರ್ವಹಣೆಗೆ ಅಂತರ್ಜಲ ಸುಧಾರಣೆಯೇ ಪರಿಹಾರ: ಬೋಸರಾಜು

lok adalat

Karnataka: ಪುನರ್‌ವಿಂಗಡಣೆ: ಆಕ್ಷೇಪಣೆಗಳಿಗೆ “ಅದಾಲತ್‌”

dr g param

IT-BT ಸಹಭಾಗಿತ್ವದಲ್ಲಿ ಸೈಬರ್‌ ಕೇಂದ್ರ: ಪರಮೇಶ್ವರ್‌

karnataka govt logo

Karnataka: ಒಂದೇ ದಿನ 26,000 ಆಸ್ತಿ ನೋಂದಣಿ- ಸರಕಾರಕ್ಕೆ 311 ಕೋಟಿ ರೂ. ಆದಾಯ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

Panemangalore  Bridge: ಬಸ್‌ ಕೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Panemangalore Bridge: ಬಸ್‌ ಕೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

CONTI

ಇನ್ನು ಏಳಲ್ಲ ,ಎಂಟು ಖಂಡ!- 375 ವರ್ಷಗಳ ಹಿಂದೆ ಕಾಣೆಯಾಗಿದ್ದ ಖಂಡ ವಿಜ್ಞಾನಿಗಳಿಂದ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.