ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ, ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ
ಬೆಂಗಳೂರಿನಲ್ಲಿ ಗೃಹ ಬಳಕೆಯ 14 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಈಗ 1,005.50ಕ್ಕೆ ಏರಿಕೆಯಾಗಲಿದೆ.
Team Udayavani, Jul 6, 2022, 10:40 AM IST
ನವದೆಹಲಿ: ಗೃಹ ಬಳಕೆಯ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಮತ್ತೆ 50 ರೂಪಾಯಿ ಏರಿಕೆ ಮಾಡಿರುವುದಾಗಿ ಬುಧವಾರ (ಜುಲೈ 06) ವರದಿ ತಿಳಿಸಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇದೀಗ ಅಡುಗೆ ಅನಿಲ ಎಲ್ ಪಿಜಿ ಸಿಲಿಂಡರ್ ಬೆಲೆ 1,053 ರೂಪಾಯಿಗೆ ಏರಿಕೆಯಾಗಿದೆ.
ಇದನ್ನೂ ಓದಿ:ಚಂದ್ರಶೇಖರ್ ಗುರೂಜಿ ಹತ್ಯೆ: ವಿಚಾರಣೆಯಲ್ಲಿ ಹಂತಕರು ಹೇಳಿದ್ದೇನು!
ಬೆಂಗಳೂರಿನಲ್ಲಿ ಗೃಹ ಬಳಕೆಯ 14 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಈಗ 1,005.50ಕ್ಕೆ ಏರಿಕೆಯಾಗಲಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ದರ ಅಧಿಸೂಚನೆಯ ಪ್ರಕಾರ, ಕೋಲ್ಕತಾದಲ್ಲಿ ಅಡುಗೆ ಅನಿಲದ ಎಲ್ ಪಿಜಿ ಸಿಲಿಂಡರ್ ಬೆಲೆ 1,079, ಮುಂಬೈನಲ್ಲಿ 1,052.50 ರೂ. ಹಾಗೂ ಚೆನ್ನೈನಲ್ಲಿ 1,068 ರೂಪಾಯಿಗೆ ಏರಿಕೆಯಾಗಿದೆ.
ಈ ಹಿಂದೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು 2022ರ ಮೇ 19ರಂದು ಏರಿಕೆ ಮಾಡಲಾಗಿತ್ತು. ಮತ್ತೊಂದೆಡೆ 19 ಕೆಜಿ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 8.5 ರೂಪಾಯಿ ಇಳಿಕೆ ಮಾಡಲಾಗಿದ್ದು, ಇಂದಿನಿಂದಲೇ ಪರಿಸ್ಕೃತ ದರ ಅನ್ವಯವಾಗಲಿದೆ ಎಂದು ವರದಿ ತಿಳಿಸಿದೆ.