Udayavni Special

ವಿದ್ಯುತ್‌ ದರ ಏರಿಕೆ: ಗಾಯದ ಮೇಲೆ ಬರೆ ಬೇಡ

Team Udayavani, Mar 1, 2021, 6:30 AM IST

ವಿದ್ಯುತ್‌ ದರ ಏರಿಕೆ: ಗಾಯದ ಮೇಲೆ ಬರೆ ಬೇಡ

ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ನಡುವೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಶ್ರೀಸಾಮಾನ್ಯರ ಕೈ ಸುಡುತ್ತಿದೆ. ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಲೇ ಇದ್ದು, ಇದು ಮಧ್ಯಮ ವರ್ಗದ ಪಾಲಿಗಂತೂ ನುಂಗಲಾರದ ತುತ್ತಾಗಿದೆ. ಇದರ ನಡುವೆಯೇ ರಾಜ್ಯದ ಐದು ಎಸ್ಕಾಂಗಳು ವಿದ್ಯುತ್‌ ಬೆಲೆ ಪರಿಷ್ಕರಣೆಗೆ ಮುಂದಾಗಿರುವುದು ರಾಜ್ಯದ ಜನರನ್ನು ಕಂಗೆಡಿಸಿದೆ.

ವಿಭಾಗವಾರು ಮಟ್ಟದಲ್ಲಿ ಐದೂ ಎಸ್ಕಾಂಗಳು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿವೆ. ಕೊರೊನಾ ಕಾರಣದಿಂದಾಗಿ ಎಪ್ರಿಲ್‌ನಲ್ಲಿ ವಿದ್ಯುತ್‌ ಬೆಲೆ ಹೆಚ್ಚಳಕ್ಕೆ ಚಿಂತನೆ ಮಾಡಿದ್ದ ಎಸ್ಕಾಂಗಳು, ನವೆಂಬರ್‌ನಲ್ಲಿ ಹೆಚ್ಚಳ ಮಾಡಿದ್ದವು. ಆಗಲೇ ಜನ ಆಕ್ರೋಶಗೊಂಡಿದ್ದರು. ಕೊರೊನಾದಿಂದಾಗಿ ದಿನನಿತ್ಯದ ಜೀವನ ನಡೆಸುವುದೇ ಕಷ್ಟವಾಗಿರುವಾಗ ವಿದ್ಯುತ್‌ ಬೆಲೆ ಏರಿಕೆ ಮಾಡಿ ಮತ್ತೆ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುವುದು ಬೇಡ ಎಂಬುದು ಆಗ್ರಹವಾಗಿತ್ತು. ಆದರೂ ಹೆಚ್ಚಳ ಮಾಡಿದ್ದ ಕಾರಣದಿಂದಾಗಿ ಅಸಮಾಧಾನದಿಂದಲೇ ಜನ ಒಪ್ಪಿಕೊಂಡಿದ್ದರು. ಡಿಸೆಂಬರ್ನಲ್ಲೂ ತೈಲ ಬೆಲೆ ಹೊಂದಾಣಿಕೆಗಾಗಿ ಮತ್ತೆ ಪೈಸೆಗಳ ಲೆಕ್ಕಾಚಾರದಲ್ಲಿ ಬೆಲೆ ಹೆಚ್ಚಳವಾಗಿತ್ತು. ವಿಚಿತ್ರವೆಂದರೆ ಇದು ಜನರ ಗಮನಕ್ಕೆ ಬಾರದೇ ಹೋಗಿತ್ತು.

ಮತ್ತೆ ಈಗ ವಿದ್ಯುತ್‌ ಬೆಲೆ ಹೆಚ್ಚಳದ ಬಗ್ಗೆ ಎಸ್ಕಾಂ ಮಟ್ಟದಲ್ಲಿ ಮಾತುಕತೆಗಳಾಗಿವೆ. ಜನರ ಅಭಿಪ್ರಾಯ ಸಂಗ್ರಹದ ವೇಳೆ ಮತ್ತೆ ವಿದ್ಯುತ್‌ ಬೆಲೆ ಏರಿಕೆಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ. ಆದರೂ ಎಪ್ರಿಲ್‌ 1ರಿಂದ ಜಾರಿಯಾಗುವಂತೆ ವಿದ್ಯುತ್‌ ಬೆಲೆ ಹೆಚ್ಚಳ ಮಾಡುವ ಬಗ್ಗೆ ಎಸ್ಕಾಂಗಳು ಪರಿಶೀಲನೆಯಲ್ಲಿವೆ.

ತೈಲೋತ್ಪನ್ನ ವಸ್ತುಗಳ ಜತೆಗೆ ವಿದ್ಯುತ್‌ ದರವನ್ನೂ ಹೆಚ್ಚಿಸಿದರೆ ನಾವು ಬದುಕುವುದು ಹೇಗೆ ಎಂಬುದು ಜನರ ಪ್ರಶ್ನೆಯಾಗಿದೆ. ಒಂದು ಕಡೆ, ಸಾರ್ವಜನಿಕರ ವೆಚ್ಚ ಹೆಚ್ಚಾಗಬೇಕು. ಈ ಮೂಲಕ ಆರ್ಥಿಕತೆ ಬೆಳೆಯಬೇಕು ಎಂಬ ಕಾರಣಕ್ಕಾಗಿ ಬಜೆಟ್ನಲ್ಲಿ ಪಬ್ಲಿಕ್‌ ಸ್ಪೆಂಡಿಂಗ್‌ ಬಗ್ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಆದರೆ ಇತ್ತ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಹೆಚ್ಚಾಗಿದ್ದು, ಜನ ವೆಚ್ಚ ಮಾಡಲಾರದಂಥ ಪರಿಸ್ಥಿತಿಗೆ ಬರುತ್ತಿದ್ದಾರೆ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ವಿದ್ಯುತ್‌ ದರ ಏರಿಕೆ ಮಾಡಿದರೆ, ಇದಕ್ಕೆ ಪೂರಕವಾಗಿರುವ ವಸ್ತುಗಳ ಬೆಲೆಯೂ ಹೆಚ್ಚಾಗಿಯೇ ಆಗುತ್ತದೆ. ಅಂದರೆ ಕೈಗಾರಿಕೆಗಳಲ್ಲಿನ ವೆಚ್ಚ ಹೆಚ್ಚುವುದರಿಂದ ಇಲ್ಲಿ ಉತ್ಪಾದನೆಯಾಗುವ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ಇದರಿಂದ ಜನರ ಮೇಲೆ ಮತ್ತಷ್ಟು ಹೊರೆ ಬೀಳುವುದು ಖಚಿತವಾಗುತ್ತದೆ. ಹೀಗಾಗಿ ಬೆಲೆ ಹೆಚ್ಚಳಕ್ಕೆ ನಿಯಂತ್ರಣವಿಲ್ಲವೇ ಎಂಬುದು ಜನರ ಪ್ರಶ್ನೆಯಾಗಿದೆ.

ಅಷ್ಟೇ ಅಲ್ಲ ಕೊರೊನಾದಿಂದಾಗಿ ಸರಕಾರಕ್ಕೂ ಆರ್ಥಿಕ ಕೊರತೆಯುಂಟಾಗಿದೆ. ಹೀಗಾಗಿ ಬೆಲೆ ಕಡಿತ ಮಾಡಲು ಸಾಧ್ಯವಿಲ್ಲದಂಥ ಪರಿಸ್ಥಿತಿಯಾಗಿದೆ ಎಂಬಂಥ ಮಾತುಗಳೂ ಕೇಳಿಬರುತ್ತಿವೆ. ಆದರೆ ಸರಕಾರದ ಬೊಕ್ಕಸ ತುಂಬಲಿಕ್ಕೆ ಜನರ ಮೇಲೆ ಹೊರೆ ಹಾಕಿದರೆ, ಅವರ ಜೀವನ ಕಷ್ಟವಾಗುವುದಿಲ್ಲವೇ? ಕೊರೊನಾ ವೇಳೆಯಲ್ಲಿ ಸರಕಾರಕ್ಕೆ ಹಣಕಾಸಿನ ಕೊರತೆಯಾದಂತೆ, ಜನ ಸಾಮಾನ್ಯರಿಗೂ ಆಗಿಲ್ಲವೇ ಎಂಬ ಮಾತುಗಳು ಗ್ರಾಹಕರ ಕಡೆಯಿಂದ ಕೇಳಿಬರುತ್ತಿವೆ. ಹೀಗಾಗಿ ಕಷ್ಟ ಎಂಬುದು ಸರಕಾರಕ್ಕೆ ಆದಂತೆ ಜನರಿಗೂ ಆಗಿದೆ. ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಸರಕಾರಗಳು ಜನರ ಮೇಲೆ ಹೊರೆ ಏರಬಾರದು ಎಂಬ ಆಗ್ರಹ ಜನಸಾಮಾನ್ಯರದ್ದು.

ಟಾಪ್ ನ್ಯೂಸ್

ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 450 ಅಂಕ ಕುಸಿತ

ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 450 ಅಂಕ ಕುಸಿತ, 14,400ಕ್ಕೆ ಕುಸಿದ ನಿಫ್ಟಿ

ಮಾಜಿ ಶಾಸಕ, ಅಪ್ಪಟ ಗಾಂಧಿವಾದಿ ಸದಾಶಿವರಾವ್ ಭೋಸಲೆ ಇನ್ನಿಲ್ಲ

ಮಾಜಿ ಶಾಸಕ, ಅಪ್ಪಟ ಗಾಂಧಿವಾದಿ ಸದಾಶಿವರಾವ್ ಭೋಸಲೆ ಇನ್ನಿಲ್ಲ

ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ

ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ

10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ

10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ

heath streak

ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!

ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್

ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್

‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು

‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರೀಕ್ಷೆ ವಿಚಾರದಲ್ಲಿ ನಿರ್ಧಾರ ವಿಳಂಬ ಏಕೆ?

ಪರೀಕ್ಷೆ ವಿಚಾರದಲ್ಲಿ ನಿರ್ಧಾರ ವಿಳಂಬ ಏಕೆ?

ಯುಗಾದಿ ಸಂಭ್ರಮದಲ್ಲಿ ಮೈಮರೆಯದಿರಿ

ಯುಗಾದಿ ಸಂಭ್ರಮದಲ್ಲಿ ಮೈಮರೆಯದಿರಿ

ದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಅನಿವಾರ್ಯ

ದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಅನಿವಾರ್ಯ

ಕಚೇರಿಯಲ್ಲಿ ಲಸಿಕೆ; ಪ್ರಸ್ತುತದಲ್ಲಿ ಉತ್ತಮ ನಿರ್ಧಾರ

ಕಚೇರಿಯಲ್ಲಿ ಲಸಿಕೆ; ಪ್ರಸ್ತುತದಲ್ಲಿ ಉತ್ತಮ ನಿರ್ಧಾರ

ಸಾರಿಗೆ ನೌಕರರ ಮುಷ್ಕರ: ಪ್ರತಿಷ್ಠೆ ಬೇಡ; ಜನಹಿತವೇ ಮುಖ್ಯ

ಸಾರಿಗೆ ನೌಕರರ ಮುಷ್ಕರ: ಪ್ರತಿಷ್ಠೆ ಬೇಡ; ಜನಹಿತವೇ ಮುಖ್ಯ

MUST WATCH

udayavani youtube

ಹೊಟ್ಟೆ ತುಂಬಾ ಊಟ ಮಾಡಿದ ಕೂಡಲೇ ಮಲಗಬಾರದು ಏಕೆ?

udayavani youtube

ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಪುತ್ತೂರು ಮಹಾಲಿಂಗೇಶ್ವರ ಮತ್ತು ವೆಂಕಟರಮಣ ದೇವರ ಮುಖಾಮುಖಿ.!

udayavani youtube

CBSE 10th ಪರೀಕ್ಷೆ ರದ್ದು, 12th ಪರೀಕ್ಷೆ ಮುಂದೂಡಿಕೆ

udayavani youtube

ಮಸ್ಕಿಯಲ್ಲಿ ಪ್ರತಾಪ್‌ ಗೌಡ ಪರ ಖ್ಯಾತ SINGER MANGLI

udayavani youtube

ಹೊಸ ಕೈಗಾರಿಕಾ ನೀತಿ 2020-2025, ಬಗ್ಗೆ ಮಾಹಿತಿ ಇಲ್ಲಿದೆ!

ಹೊಸ ಸೇರ್ಪಡೆ

ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 450 ಅಂಕ ಕುಸಿತ

ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 450 ಅಂಕ ಕುಸಿತ, 14,400ಕ್ಕೆ ಕುಸಿದ ನಿಫ್ಟಿ

ಕಾಪು: ನಾಗಬನದ ಮೇಲೆ ಉರುಳಿ ಬಿದ್ದ ಅಶ್ವಥ ಮರ, ಅಪಾರ ಹಾನಿ

ಕಾಪು: ನಾಗಬನದ ಮೇಲೆ ಉರುಳಿ ಬಿದ್ದ ಅಶ್ವಥ ಮರ, ಅಪಾರ ಹಾನಿ

ಮಾಜಿ ಶಾಸಕ, ಅಪ್ಪಟ ಗಾಂಧಿವಾದಿ ಸದಾಶಿವರಾವ್ ಭೋಸಲೆ ಇನ್ನಿಲ್ಲ

ಮಾಜಿ ಶಾಸಕ, ಅಪ್ಪಟ ಗಾಂಧಿವಾದಿ ಸದಾಶಿವರಾವ್ ಭೋಸಲೆ ಇನ್ನಿಲ್ಲ

ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ

ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ

10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ

10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.