ಈಶ್ವರಪ್ಪ ಮಾತಿನ ಮರ್ಮ ಏನು ?: ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು?
Team Udayavani, Jan 24, 2022, 11:26 AM IST
ಬೆಂಗಳೂರು : ಒಂದೆಡೆ ಸಂಪುಟ ವಿಸ್ತರಣೆ ಬಗ್ಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ದಿನೇ ದಿನೇ ರಚ್ಚೆ ಹಿಡಿಯುತ್ತಿರುವಾಗಲೇ ” ವರಿಷ್ಠರು ಒಪ್ಪಿದರೆ ಯಾವುದೇ ಜವಾಬ್ದಾರಿ ಹೊರುವುದಕ್ಕೆ ಸಿದ್ದ” ಎಂದು ಹೇಳಿಕೆ ನೀಡಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ವರಿಷ್ಠರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಈಶ್ವರಪ್ಪ ಹೇಳಿಕೆಯ ಮರ್ಮವೇನು ? ಎಂಬ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಸಂಪುಟದಲ್ಲಿ ಪ್ರಭಾವಿ ಖಾತೆ ನಿಭಾಯಿಸುತ್ತಿರುವ ಈಶ್ವರಪ್ಪ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಂದರ್ಭದಲ್ಲೂ ಇದೇ ಹೇಳಿಕೆ ನೀಡಿದ್ದರು.
ಹಾಗಾದರೆ ಚುನಾವಣಾ ದೃಷ್ಟಿಯಿಂದ ವರಿಷ್ಠರು ಸಂಪುಟ ಪುನಾರಚನೆ ಚಿಂತನೆ ನಡೆಸಿದ್ದಾರೆಯೇ ? ಆ ಸಂದರ್ಭದಲ್ಲಿ ಹಿರಿಯ ಸಚಿವರನ್ನು ಕೈ ಬಿಡುವ ಸಾಧ್ಯತೆ ಇದೆಯೇ ? ಎಂಬ ತರ್ಕವೂ ಈಗ ಶುರುವಾಗಿದೆ. ಹಾಗೆ ನೋಡಿದರೆ ಬೊಮ್ಮಾಯಿ ಸಂಪುಟದಲ್ಲಿ ಈಶ್ವರಪ್ಪ ಹಾಗೂ ಗೋವಿಂದ ಕಾರಜೋಳ ಹಿರಿಯರು.
ಇದನ್ನೂ ಓದಿ :ವರಿಷ್ಠರು ಒಪ್ಪಿದರೆ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ ಸ್ಪಷ್ಟ ನುಡಿ
ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟರಾ ?
ಈಶ್ವರಪ್ಪ ಈ ಹೇಳಿಕೆಯಿಂದ ಅವರು ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಯೇ ? ಎಂಬ ಅನುಮಾನವೂ ಆರಂಭವಾಗಿದೆ. ಈಶ್ವರಪ್ಪ ಈ ಹಿಂದೆಯೂ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಳೀನ್ ಕುಮಾರ್ ಕಟೀಲ್ ಬದಲಾವಣೆಯಾದಾಗ ಹಿಂದುಳಿದ ವರ್ಗದ ಖೋಟಾದಲ್ಲಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಾಧ್ಯತೆ ಇದೆ.
ಭವಿಷ್ಯದ ಲೆಕ್ಕಾಚಾರಗಳನ್ನು ಆಧರಿಸಿ ಪಕ್ಷದ ಅಧ್ಯಕ್ಷ ಸ್ಥಾನ ನಿರ್ವಹಣೆ ಬಗ್ಗೆ ಈಶ್ವರಪ್ಪ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಪ್ರಭಾವಿ ಲಿಂಗಾಯಿತ ಸಮುದಾಯದವರು ಮುಖ್ಯಮಂತ್ರಿ ಸ್ಥಾನದಲ್ಲಿರುವುದರಿಂದ ಹಿಂದುಳಿದ ವರ್ಗಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಪಟ್ಟ ಕಟ್ಟಿದರೆ ಚುನಾವಣೆ ದೃಷ್ಟಿಯಿಂದ ಅನುಕೂಲ, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಎಸೆಯುವ ದಾಳಕ್ಕೆ ಇದರಿಂದ ಪ್ರತಿತಂತ್ರ ಹೆಣೆಯಬಹುದೆಂಬ ಲೆಕ್ಕಾಚಾರ ಅಡಗಿದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಿಂಚೋಳಿ : ಒಂದು ವಾರದಿಂದ ಪಟೇಲ್ ಕಾಲೊನಿಯ ಜನರ ನಿದ್ದೆಗೆಡಿಸಿದ್ದ ಕಾಡು ಬೆಕ್ಕು ಸೆರೆ
ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ : ರೈತರ ಬೆಳೆ ಹಾನಿ
ಬೆಂಗಳೂರು : ಶಾಪಿಂಗ್ ಮಾಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು
ಹೃದಯಾಘಾತದಿಂದ ಹಿರಿಯ ಕಾಂಗ್ರೆಸ್ ಮುಖಂಡ ಪಾಪೇಗೌಡ ನಿಧನ
ಫ್ರಾನ್ಸ್ ನಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಶಿರಸಿಯ ಪ್ರೇರಣಾ