ಪರೀಕ್ಷೆ ಫೇಲ್: ಅಪಹರಣದ ಕಥೆ!
Team Udayavani, May 15, 2023, 8:15 AM IST
ಇಂದೋರ್: ಬಿಎ ಪ್ರಥಮ ವರ್ಷದ ಪರೀಕ್ಷೆಯಲ್ಲಿ ನಪಾಸಾದ 18 ವರ್ಷದ ಯುವತಿಯೊಬ್ಬಳು, ಪೋಷಕರ ಬೈಗುಳದಿಂದ ತಪ್ಪಿಸಿಕೊಳ್ಳಲು ಅಪಹರಣದ ಕಥೆ ಕಟ್ಟಿದ್ದಾಳೆ. ಇದು ನಡೆದಿದ್ದು ಮಧ್ಯಪ್ರದೇಶದ ಇಂದೋರ್ನಲ್ಲಿ.
ಶುಕ್ರವಾರ ಬಿಎ ಪ್ರಥಮ ವರ್ಷದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಅನುತ್ತೀರ್ಣಗೊಂಡ ಯುವತಿ, ಇಂದೋರ್ನಿಂದ ಉಜ್ಜಯಿನಿಗೆ ತೆರಳಿದ್ದಾಳೆ. ಬಳಿಕ ಅವರ ತಂದೆಗೆ ಕರೆ ಮಾಡಿ, ಇಂದೋರ್ನ ದೇವಾಲಯವೊಂದರ ಬಳಿಯಿಂದ ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ಅಪರಿಚಿತ ಫೋನ್ನಿಂದ ಕರೆ ಮಾಡಿದ್ದಾಳೆ. ಮನೆಗೆ ಆಟೋದಲ್ಲಿ ಬರುತ್ತಿದ್ದ ವೇಳೆ, ಆಟೋ ಚಾಲಕ ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ, ತನ್ನ ಮುಖಕ್ಕೆ ಬಟ್ಟೆ ಇಟ್ಟಿದ್ದು, ಇದರಿಂದ ತಾನು ಪ್ರಜ್ಞೆ ತಪ್ಪಿದ್ದಾಗಿ ಯುವತಿ ಹೇಳಿದ್ದಾಳೆ.
ಕೂಡಲೇ ಯುವತಿಯ ತಂದೆ ಇಂದೋರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ಆರಂಭಿಸಿದಾಗ, ಶನಿವಾರ ಯುವತಿ ಉಜ್ಜಯಿನಿಯ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿರುವುದು ತಿಳಿದಿದೆ. ಪೊಲೀಸರು ಆಕೆಯ ಬ್ಯಾಗ್ ಪರಿಶೀಲಿಸಿದಾಗ, ಉಜ್ಜಯಿನಿಗೆ ಬಂದ ಬಸ್ ಟಿಕೆಟ್, ರೆಸ್ಟೋರೆಂಟ್ ಬಿಲ್ ದೊರೆತಿದೆ. ನಂತರ ಆಕೆಯ ಆಪ್ತಸಮಾಲೋಚನೆ ನಡೆಸಿದಾಗ ಎಲ್ಲಾ ವಿಷಯ ಬಹಿರಂಗವಾಗಿದೆ. ಆಕೆಯನ್ನು ಭಾನುವಾರ ಇಂದೋರ್ಗೆ ಕರೆತಂದ ಪೊಲೀಸರು, ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ