ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ
Team Udayavani, Jan 21, 2021, 11:12 PM IST
ಶಿವಮೊಗ್ಗ/ಚಿಕ್ಕಮಗಳೂರು: ಮಲೆನಾಡು ಭಾಗದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಸ್ಫೋಟದ ಶಬ್ದ ಕೇಳಿ ಬಂದಿದ್ದು ಜನ ಭಯಭೀತರಾಗಿ ಮನೆಯಿಂದ ಹೊರ ಬಂದ ಘಟನೆ ಗುರುವಾರ ರಾತ್ರಿ 10.20ರಿಂದ 10.40ರ ಸಮಯದಲ್ಲಿ ನಡೆದಿದೆ.
ಶಿವಮೊಗ್ಗ ನಗರ, ಭದ್ರಾವತಿ, ಹೊಳೆಹೊನ್ನೂರು, ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಎನ್.ಆರ್.ಪುರ, ಬಾಳೆಹೊನ್ನೂರು ಭಾಗದಲ್ಲೂ ಶಬ್ದ ಅನುಭವವಾಗಿದೆ. ಭಾರೀ ಶಬ್ದಕ್ಕೆ ಕಿಟಿಕಿ ಬಾಗಿಲುಗಳು ಅಲುಗಾಡಿದ್ದು ನಿಗೂಢ ಶಬ್ದದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ.
ಕೆಲವರಿಗೆ ಕಂಪನದ ಅನುಭವ ಕೂಡ ಆಗಿದೆ. ಮೊದಲು ಕಡಿಮೆ ಪ್ರಮಾಣದ ಶಬ್ದ ಕೇಳಿದ್ದು ನಂತರ ದೊಡ್ಡ ಶಬ್ದ ಕೇಳಿ ಬಂದಿದೆ. ಅಲ್ಲದೇ ಆಕಾಶದಲ್ಲಿ ಮಿಂಚಿನಂಥ ಪ್ರಖರ ಬೆಳಕು ಕಂಡಿದೆ ಎಂದು ಕೆಲವರು ವಿವರಿಸಿದ್ದಾರೆ.
ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸೂಪರ್ ಸಾನಿಕ್ ವಿಮಾನದಿಂದ ಹೊರಬಂದ ಶಬ್ದವೂ ತಲ್ಲಣ ಉಂಟು ಮಾಡಿತ್ತು.