ನಾಲ್ಕು ವರ್ಷದ ಮಗಳನ್ನು ಹತ್ಯೆಗೈದು ತಂದೆ ನೇಣಿಗೆ ಶರಣು
Team Udayavani, Nov 4, 2021, 4:23 PM IST
ಕಲಬುರಗಿ: ವ್ಯಕ್ತಿಯೋರ್ವ ತನ್ನ ನಾಲ್ಕು ವರ್ಷದ ಮಗಳನ್ನು ಕೊಂದು ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಉಪ್ಪಾರವಾಡಿಯಲ್ಲಿ ನಡೆದಿದೆ.
ಪೂನಂ (4) ತಂದೆಯಿಂದಲೇ ಕೊಲೆಯಾದ ಬಾಲಕಿಯಾಗಿದ್ದು,ಅರ್ಜುನ ( 26) ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ.
ಕೌಟುಂಬಿಕ ಕಲಹದಿಂದಾಗಿ ಅರ್ಜುನ ಬುಧವಾರ ರಾತ್ರಿ ಮಗಳನ್ನು ಹೊಲಕ್ಕೆ ಕರೆದೊಯ್ದು ಅಲ್ಲಿಯೇ ಕೊಲೆ ಮಾಡಿದ್ದಾನೆ. ನಂತರ ತಾನು ಮರಕ್ಕೆ ನೇಣುಹಾಕಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.