ಕಮಲ್ ಹಾಸನ್ 67ನೇ ಬರ್ತ್ ಡೇ: ವಿಕ್ರಮ್ ಚಿತ್ರದ ಟೀಸರ್ ಬಿಡುಗಡೆ
Team Udayavani, Nov 7, 2021, 1:34 PM IST
ಬಾಲಿವುಡ್ ನಟ ಕಮಲ್ ಹಾಸನ್ ನಾಯಕನಾಗಿ ನಟಿಸಿರುವ, ಲೊಕೇಶ್ ಕನಗರಾಜ್ ನಿರ್ದೇಶದ ಬಹು ನಿರೀಕ್ಷಿತ ಚಿತ್ರ ‘ವಿಕ್ರಮ್’ ಚಿತ್ರದ ಟೀಸರ್ ಶನಿವಾರ ಬಿಡುಗಡೆಯಾಗಿದೆ.
ಟೀಸರ್ ಗೆ ವೀಕ್ಷಕರಿಂದ ಭಾರಿ ಸ್ಪಂದನೆ ದೊರೆತಿದ್ದು, ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿಸುಮಾರು 52,000 ಜನರು ಲೈಕ್ ಮಾಡಿದ್ದಾರೆ.
ರಾಜಕಾರಣಿಯೂ ಆಗಿರುವ ಕಮಲ್ ಹಾಸನ್ ಅವರ ಜನ್ಮದಿನದ ಮುನ್ನಾದಿನ, ನಿರ್ದೇಶಕ ಹಾಗೂ ಚಿತ್ರ ತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿದರು.
ಫಸ್ಟ್ ಲುಕ್ ನಲ್ಲಿ ಜೈಲಿನಲ್ಲಿ ಭಾರಿ ಗುಂಡಿನ ಮಳೆಯನ್ನು ಕಮಲ್ ಅವರು ಕಬ್ಬಿಣದ ಶೀಲ್ಡ್ ಮೂಲಕ ತಡೆಯುವ ದೃಶ್ಯಾವಳಿಗಳಿವೆ. ಇದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಕಮಲ್ ಹಾಸನ್ ಅವರು ಇಂದು(ನವೆಂಬರ್ 7) 67ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ವಿಕ್ರಮ್ ಚಿತ್ರಕ್ಕೆ ಅನಿರುದ್ದ್ ಮತ್ತು ಗಿರೀಶ್ ಗಂಗಾಧರನ್ ಛಾಯಾಗ್ರಣ, ಫಿಲೋಮಿನ್ ರಾಜ್ ಅವರ ಸಂಕಲನವಿದ್ದು, ಚಿತ್ರದ ಕಲಾ ನಿರ್ದೇಶಕ ಎನ್. ಸತೀಶ್ ಕುಮಾರ್ ಮಾಡಿದ್ಧಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್