ಮನೆಯ ನೆಲಮಾಳಿಗೆಯಲ್ಲಿ ಜಿನುಗುತ್ತಿರುವ ಪ್ಲೋರೈಡ್‍ಯುಕ್ತ ನೀರು
Team Udayavani, Jan 17, 2022, 11:25 AM IST
ಕುಷ್ಟಗಿ: ಕುಷ್ಟಗಿಯ ಬಸವೇಶ್ವರ ವೃತ್ತದ ಬಳಿ ಇರುವ ಬಸನಗೌಡ ಎನ್ ಪಾಟೀಲ ಅವರ ನಿವಾಸದ ನೆಲ ಮಾಳಿಗೆಯ ಕೊಠಡಿಯಲ್ಲಿ ಕಳೆದ ವರ್ಷದಿಂದ ನೀರು ಜಿನಗುತ್ತಿದ್ದು, ಪ್ರತಿ ದಿನ ನೀರು ಹೊರ ಹಾಕುವುದೇ ದಿನಚರಿಯಾಗಿದೆ.
ಕಳೆದ ವರ್ಷದಿಂದ ನೆಲ ಮಾಳಿಗೆಯ ಜಿನುಗುವ ನೀರನ್ನು ಹೊರ ಹಾಕಿ ಸುಸ್ತಾಗಿರುವ ಬಸನಗೌಡ ಪಾಟೀಲರು, ನೀರು ಜಿನುಗುವುದನ್ನು ನಿಯಂತ್ರಿಸಲು ತಜ್ಞರ ಮೊರೆ ಹೋಗಿದ್ದಾರೆ. ಕೃಷ್ಣ ಭಾಗ್ಯ ಜಲ ನಿಗಮದ ಪರಿಣಿತ ತಜ್ಞರು ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನೆಲ ಮಾಳಿಗೆಯ ಸುತ್ತಲೂ ರಂಧ್ರ ಕೊರೆದು ಪರೀಕ್ಷಿಸುವ ವೇಳೆ, ರಂಧ್ರದ ಮೂಲಕ ನೀರು ಮತ್ತಷ್ಟು ಜಿನುಗಲಾರಂಭಿಸಿದೆ. ಅಲ್ಪ ಪ್ರಮಾಣದಲ್ಲಿ ಜಿನಗುತ್ತಿದ್ದ ನೀರಿನ ಪ್ರಮಾಣ ಹೆಚ್ಚಿದೆ. ಕೊರೆದ ರಂಧ್ರಗಳ ಮೂಲಕ ರಾಸಾಯನಿಕ ಬಳಸಿ ನಿಯಂತ್ರಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ವರ್ಷದಿಂದ ದಿನವೂ ಎರಡು ಹೊತ್ತು ನೀರನ್ನು 2 ಎಚ್ ಪಿ (ಅಶ್ವಶಕ್ತಿ) ಮೋಟಾರು ಮೂಲಕ ನೀರು ಚರಂಡಿಗೆ ನೀರು ಹರಿಬಿಡುತ್ತಿದ್ದಾರೆ. ಕೆಲವು ದಿನಗಳಿಂದ ಜಿನುಗುವ ನೀರಿನಿಂದ ಫ್ಲೋರೈಡ್ ಅಂಶವಿರುವ ವಿಚಿತ್ರವಾದ ಬೇರಿನಂತಹ ವಸ್ತುಗಳು ಸೃಷ್ಟಿಯಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಬಸನಗೌಡರ ಮನೆಯ ನೆಲ ಮಾಳಿಗೆಯ ನೀರು ಜಿನುಗದಂತೆ ಎಲ್ಲಾ ಪ್ರಯತ್ನ ಮಾಡಿ ವಿಫಲರಾಗಿದ್ದು, ನೀರು ಶತ್ರುವಾಗಿ ಕಾಡುತ್ತಿದೆ. ಈ ಕುರಿತು ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಮ್ಮ ನೆಲ ಮಾಳಿಗೆಯಲ್ಲಿ ಜಿನಗುವ ನೀರಿನ ಮೂಲ ಎಲ್ಲಿಯದು ತಿಳಿಯುತ್ತಿಲ್ಲ. ನೀರು ಪ್ಲೋರೈಡ್‍ಯುಕ್ತವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ಸಂಗಾಪುರ ಅಕ್ರಮ ಸಾಗುವಳಿ 7.18 ಗಾಂವಠಾಣಾ ಭೂಮಿ ಗ್ರಾಪಂ ವಶಕ್ಕೆ
“ಸಿಟಿ ಸ್ಕ್ಯಾನ್’ಗೆ ಖಾಸಗಿ ಕೇಂದ್ರವೇ ಗತಿ!
ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ.. ಎಂಬಂತಾಗಿದೆ ಶಿರಗುಂಪಿ ಗ್ರಾ.ಪಂ. ಉದ್ಯೋಗ ಖಾತ್ರಿ ಯೋಜನೆ
ಕುಷ್ಟಗಿ: 25 ವರ್ಷಗಳಿಂದ ಸೌಲಭ್ಯ ವಂಚಿತವಾಗಿದೆ 3ನೇ ವಾರ್ಡ್ ; ಮೂಲ ಸೌಕರ್ಯ ಕಲ್ಪಿಸಲು ಮನವಿ
ಕುಷ್ಟಗಿ: ಕಾಂಗ್ರೆಸ್ ಪುರಸಭೆ ಸದಸ್ಯರ ಸದಸ್ಯತ್ವ ಅನರ್ಹಕ್ಕೆ ಹೈಕೋರ್ಟ್ ತಡೆ
MUST WATCH
ಹೊಸ ಸೇರ್ಪಡೆ
ನೆರೆ, ಪ್ರಾಕೃತಿಕ ವಿಕೋಪಗಳಲ್ಲಿ ತುರ್ತು ಪರಿಹಾರ ಕಾರ್ಯ: ಜಿಲ್ಲಾಧಿಕಾರಿ ಕರೆ
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ
ಮಗಳನ್ನೇ ಹತ್ಯೆಗೈದ ಪ್ರಕರಣ : ಕೊನೆಗೂ ಇಂದ್ರಾಣಿ ಮುಖರ್ಜಿಗೆ ಜಾಮೀನು
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ