
ರಾಜ್ಯಸಭೆಯ ಕೊನೆಯ ಸಾಲಿಗೆ ಶಿಫ್ಟ್ ಆದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್
Team Udayavani, Feb 3, 2023, 2:32 PM IST

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆಯ ಮುಂದಿನ ಸಾಲಿನ ಆಸನದಿಂದ ಕೊನೆಯ ಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಗಾಲಿಕುರ್ಚಿಯನ್ನು ಅವಲಂಬಿಸಿರುವ ಹಿರಿಯ ನಾಯಕ ಸಿಂಗ್ ಅವರ ಸುಲಭ ಚಲನೆಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಗುರುವಾರ ತಿಳಿಸಿವೆ.
ಹಿರಿಯ ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ ಮತ್ತು ದಿಗ್ವಿಜಯ ಸಿಂಗ್ ಅವರು ಪಕ್ಷದಿಂದ ಮರುಹಂಚಿಕೆ ಮಾಡಿದ ನಂತರ ಈಗ ಮುಂದಿನ ಸಾಲಿನ ಆಸನಗಳನ್ನು ಆಕ್ರಮಿಸಲಿದ್ದಾರೆ. ಈ ಅಧಿವೇಶನದಲ್ಲಿ ಕಾಂಗ್ರೆಸ್ ಸ್ಥಾನಗಳ ಮರು ಹಂಚಿಕೆಯನ್ನು ಮಾಡಿತ್ತು. ಕಳೆದ ಅಧಿವೇಶನದಲ್ಲಿಯೇ ಬದಲಾವಣೆ ನಡೆಸಬೇಕಿತ್ತು. 90ರ ಹರೆಯದ ಮಾಜಿ ಪ್ರಧಾನಿ ಸಿಂಗ್ ಅವರು ಈಗ ಗಾಲಿಕುರ್ಚಿಯಲ್ಲೇ ಇರುವ ಕಾರಣ ಅವರ ಅನುಕೂಲಕ್ಕಾಗಿ ಕೊನೆಯ ಸಾಲಿನ ಆಸನವನ್ನು ನಿಗದಿಪಡಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸದನದ ಉಪ ಸಭಾಪತಿ ಹರಿವಂಶ್ ಅವರ ಮುಂದಿನ ಸಾಲಿನ ಆಸನದಲ್ಲಿ ಮುಂದುವರೆಯುತ್ತಾರೆ.
ಟಾಪ್ ನ್ಯೂಸ್
