ಗೇಮಿಂಗ್ ಚಟ: 36 ಲಕ್ಷ ರೂ. ಉಡೀಸ್
Team Udayavani, Jun 11, 2023, 7:15 AM IST
ಹೈದರಾಬಾದ್: ಮಕ್ಕಳ ಆನ್ಲೈನ್ ಗೇಮಿಂಗ್ ಹುಚ್ಚಾಟದಿಂದ ಪೋಷಕರು ಇನ್ನೂ ಪಾಠ ಕಲಿತಂತೆ ಕಾಣುತಿಲ್ಲ. ತೆಲಂಗಾಣದ ಹೈದರಾಬಾದ್ನಲ್ಲಿ 16ರ ಬಾಲಕ, ತನ್ನ ತಾಯಿಯ ಮೊಬೈಲ್ ಪಡೆದು ಆನ್ಲೈನ್ ಗೇಮ್ ಆಡುತ್ತಿದ್ದ.
ಪೋಷಕರು ಇದನ್ನು ಗಮನಿಸದೇ ಆತನಿಗೆ ಕೇಳಿದಾಗಲೆಲ್ಲ ಮೊಬೈಲ್ ನೀಡುತ್ತಿದ್ದರು. ಗೇಮಿಂಗ್ ಮೋಹಕ್ಕೆ ಬಿದ್ದ ಬಾಲಕ, ಆಟ ಆಡುತ್ತಾ ಆಡುತ್ತಾ ತಾಯಿಯ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 36 ಲಕ್ಷ ರೂ. ಕಳೆದಿದ್ದಾನೆ! ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಗಮನಿಸಿದ ತಾಯಿಗೆ ಶಾಕ್ ಆಗಿದೆ. ಕೊನೆಗೆ ಬ್ಯಾಂಕ್ಗೆ ಹೋಗಿ ಪರಿಶೀಲಿಸಿದಾಗ, ಆನ್ಲೈನ್ ಗೇಮಿಂಗ್ನಿಂದ 36 ಲಕ್ಷ ರೂ. ಮುಂಡಾಯಿಸಿರುವುದು ತಿಳಿದುಬಂದಿದೆ. ಮೊದಲಿಗೆ 1,500 ರೂ. ಗೇಮ್ ಆರಂಭಿಸಿದ ಬಾಲಕ, ನಂತರ ಪ್ರತಿ ಗೇಮ್ಗೆ 10,000 ರೂ. ಪಣ ಇಟ್ಟು ಆಡಿದ್ದಾನೆ. ಇತ್ತೀಚೆಗೆ, ಚೀನಾದಲ್ಲೂ 13 ವರ್ಷದ ಬಾಲಕಿ, ಆನ್ಲೈನ್ ಗೇಮಿಂಗ್ನಲ್ಲಿ ಪೋಷಕರ 52 ಲಕ್ಷ ರೂ. ಕಳೆದಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು