ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸಿದರೂ ಗೇಜ್ ಹೆಚ್ಚಳವಿಲ್ಲ: ಆತಂಕದಲ್ಲಿ ರೈತರು


Team Udayavani, Jul 28, 2020, 8:16 PM IST

ಎಡದಂಡೆ ಕಾಲುವೆಗೆ ನೀರು ಹರಿಸಿದರೂ ಗೇಜ್ ಹೆಚ್ಚಳವಿಲ್ಲ: ರೈತರು ಕಂಗಾಲು

ಗಂಗಾವತಿ: ತುಂಗಭದ್ರಾ ಎಡದಂಡೆಕಾಲುವೆಗೆ ಜು.25 ರಂದು ನೀರು ಹರಿಸಲಾಗಿದ್ದು ತಾಂತ್ರಿಕ ತೊಂದರೆ ನೆಪದಲ್ಲಿ ನೀರಿನ ಗೇಜ್ ಹೆಚ್ಚಳಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ಇನ್ನೂ ಸಹ ಸಾಣಾಪೂರ ಕೆರೆ ವರೆಗೆ ನೀರು ತಲುಪಿಲ್ಲ. ಮುಂಗಾರು ಹಂಗಾಮಿನ ನೀರನ್ನು ಈ ಭಾರಿ ಜುಲೈ ಅಂತ್ಯದ ವೇಳೆಗೆ ಹರಿಸುವಂತೆ ರೈತರ ಒತ್ತಡದ ಮಧ್ಯೆಯೂ ಎಡದಂಡೆ ಲೈನಿಂಗ್ ದುರಸ್ಥಿ ನೆಪದಲ್ಲಿ ಸುಮಾರು 64 ಕೋಟಿ ರೂ.ಗಳ ಟೆಂಡರ್ ಅಂತಿಮಗೊಳಿಸಿ ಸೋಮನಾಳ ಮತ್ತು ಡಂಕನಕಲ್ ಹತ್ತಿರ ಸದ್ಯ ಕಾಲುವೆ ಒಳಮೈ ಭದ್ರಪಡಿಸುವ ಲೈನಿಂಗ್ ಮಾಡಲಾಗಿದೆ.

ಅವಸರದಲ್ಲಿ ಜು.25 ರಂದು ಕಾಲುವೆ‌ನೀರು ಹರಿಸಲಾಗಿದೆ. ಈ‌ ಮಧ್ಯೆ ಡ್ಯಾಂ ಸಮೀಪದ ಮುನಿರಾಬಾದ್ ಗ್ರಾಮದ ಅನುಪಯುಕ್ತ ನೀರು ಹೋಗುವ ಸಣ್ಣಮೋರಿ ಎಡದಂಡೆ ಕಾಲುವೆ ಕೆಳಗೆ ಹೋಗಿದ್ದು ಅಪರಿಚಿತ ವಾಹನ ಮೋರಿಯ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ಎಡದಂಡೆ ಕಾಲುವೆಯಲ್ಲಿ ಜು.26 ರಂದು ಸಂಜೆ ಸ್ವಲ್ಪ ಪ್ರಮಾಣದ ನೀರು ಸೋರಿಕೆ ಕಂಡುಬಂದಿದ್ದು ಕೂಡಲೇ ಕಾಲುವೆ ನೀರು ಕಡಿಮೆಗೊಳಿಸಿ ಮೋರಿಯನ್ನು ದುರಸ್ಥಿಮಾಡಲಾಗಿದೆ. ಜು.27 ರಂದು ಬೆಳಗಿನಿಂದ 600ಕ್ಯೂಸೆಕ್ಸ್ ನೀರು ಹರಿಸಿ ಗೇಜ್ ಹೆಚ್ಚಳ ಮಾಡಲಾಗಿದೆ.

ಮಂಗಳವಾರ ಸಂಜೆ ಶಿವಪೂರ ಕೆರೆ (ಬೋರಿಕಾ‌ಪವರ್ ಹೌಸ್)ಗೆ ನೀರು ತಲುಪಿದ್ದು ಗುರುವಾರದ ವೇಳೆಗೆ ರಾಯಚೂರು ಗಡಿ ತಲುಪಲಿವೆ ಎನ್ನಲಾಗಿದೆ.

ಆತಂಕದಲ್ಲಿ ರೈತರು: ಭತ್ತದ ಸಸಿ ಮಾಡಿ ಕೈಗೆ ಬಂದಿದ್ದು ನೀರು ಬರುವುದು ತಡವಾದರೆ ಸಸಿ ಬಲಿತು ನಾಟಿ ಮಾಡಲು ಆಗುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.ಕೂಡಲೇ ಗೇಜ್ ಹೆಚ್ಚು ಮಾಡಿ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಗೇಜ್ ಹೆಚ್ಚಳ: ಜು.25 ರಂದು ಕಾಲುವೆಗೆ ನೀರು ಹರಿಸಲಾಗಿದೆ. ಅಲ್ಪ ಪ್ರಮಾಣದ ದುರಸ್ಥಿಕಾರ್ಯ ಮುನಿರಾಬಾದ್ ಹತ್ತಿರ ಮಾಡಲಾಗಿದ್ದು‌ ಮಂಗಳವಾರ ಸಂಜೆ 2500 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಪೂರ್ಣಪ್ರಮಾಣದ ನೀರು‌ಹರಿಸಲಾಗುವುದೆಂದು ತುಂಗಭದ್ರಾ ಯೋಜನೆ ಮುಖ್ಯ ಅಭಿಯಂತರ ಮಂಜಪ್ಪ ಉದಯವಾಣಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

pratap

ಮೈಸೂರು ಗ್ಯಾಸ್ ಟ್ರಬಲ್: ಸ್ವಪಕ್ಷೀಯರ ವಿರುದ್ಧ ಮತ್ತೆ ಸಿಂಹ ಘರ್ಜನೆ

mohammed shami

“ತಂಡಕ್ಕೆ ನಾಯಕನ ಅಗತ್ಯವಿದೆ”: ಮುಂದಿನ ಟೆಸ್ಟ್ ನಾಯಕನ ಕುರಿತು ಮೊಹಮ್ಮದ್ ಶಮಿ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

1-sadsad

ಹೂ ಅಂಟಾವ ಮಾವ, ಉಹೂ ಅಂಟಾವ..! : ಶಾಸಕ ರಾಜೂಗೌಡ ಟಾಂಗ್

ಬೊಮ್ಮಾಯಿ ಸರ್ಕಾರದ ಸಾಧನೆ ಕೇವಲ ಜಾಹಿರಾತಿಗೆ ಮಾತ್ರ ಸೀಮಿತ: ಸಿದ್ದರಾಮಯ್ಯ

ಬೊಮ್ಮಾಯಿ ಸರ್ಕಾರದ ಸಾಧನೆ ಕೇವಲ ಜಾಹಿರಾತಿಗೆ ಮಾತ್ರ ಸೀಮಿತ: ಸಿದ್ದರಾಮಯ್ಯ

appu photo

ದೀಪ ರಾಯಭಾರಿ ಪುನೀತ್ ಸ್ಮರಣೆಗೆ ಇಂದು ದೀಪ‌ನಮನ

5accident

ಪುತ್ತೂರು: ಜೀಪ್-ರಿಕ್ಷಾ ಢಿಕ್ಕಿ; ಮೂವರು ಕೂಲಿ ಕಾರ್ಮಿಕರು ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pratap

ಮೈಸೂರು ಗ್ಯಾಸ್ ಟ್ರಬಲ್: ಸ್ವಪಕ್ಷೀಯರ ವಿರುದ್ಧ ಮತ್ತೆ ಸಿಂಹ ಘರ್ಜನೆ

1-sadsad

ಹೂ ಅಂಟಾವ ಮಾವ, ಉಹೂ ಅಂಟಾವ..! : ಶಾಸಕ ರಾಜೂಗೌಡ ಟಾಂಗ್

ಬೊಮ್ಮಾಯಿ ಸರ್ಕಾರದ ಸಾಧನೆ ಕೇವಲ ಜಾಹಿರಾತಿಗೆ ಮಾತ್ರ ಸೀಮಿತ: ಸಿದ್ದರಾಮಯ್ಯ

ಬೊಮ್ಮಾಯಿ ಸರ್ಕಾರದ ಸಾಧನೆ ಕೇವಲ ಜಾಹಿರಾತಿಗೆ ಮಾತ್ರ ಸೀಮಿತ: ಸಿದ್ದರಾಮಯ್ಯ

appu photo

ದೀಪ ರಾಯಭಾರಿ ಪುನೀತ್ ಸ್ಮರಣೆಗೆ ಇಂದು ದೀಪ‌ನಮನ

1-qqw

ನಾನು ಕಪಾಳಕ್ಕೆ ಹೊಡೆದಿಲ್ಲ, ಅವರೇ ಕುಡಿದಿರಬೇಕು: ಎಂ.ಪಿ.ಕುಮಾರಸ್ವಾಮಿ ಸ್ಪಷ್ಟನೆ

MUST WATCH

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

ಹೊಸ ಸೇರ್ಪಡೆ

pratap

ಮೈಸೂರು ಗ್ಯಾಸ್ ಟ್ರಬಲ್: ಸ್ವಪಕ್ಷೀಯರ ವಿರುದ್ಧ ಮತ್ತೆ ಸಿಂಹ ಘರ್ಜನೆ

11childrens

ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಅಗತ್ಯ: ಮಲ್ಲಿಕಾರ್ಜುನ

ಬದುಕಿರುವ ರೈತನಿಗೆ ಮರಣ ಪತ್ರ ವಿತರಣೆ

ಬದುಕಿರುವ ರೈತನಿಗೆ ಮರಣ ಪತ್ರ ವಿತರಣೆ

10emplyoyees

ಸರಕಾರಿ ನೌಕರರ ಬೇಡಿಕೆ ಈಡೇರಿಸಲು ಮನವಿ

ಕಡಲೂರ ಕಣ್ಮಣಿಯ ಹಾಡು

ಕಡಲೂರ ಕಣ್ಮಣಿಯ ಹಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.