ಗೌರಿ ಹುಣ್ಣಿಮೆಗೆ ಸಕ್ಕರೆ ಗೊಂಬೆ ಖರೀದಿ ಜೋರು :ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿದ ಬೇಡಿಕೆ
Team Udayavani, Nov 30, 2020, 3:04 PM IST
ಕುಷ್ಟಗಿ: ಪ್ರಸಕ್ತ ವರ್ಷ ಸಕ್ಕರೆಗೊಂಬೆಗೆ ಬೇಡಿಕೆ ಹೆಚ್ಚುತ್ತಿದ್ದು, ಗೊಂಬೆಗಳ ತಯಾರಕರ ಬಾಳನ್ನು ಬೆಳಗಿಸಿದೆ. ಕೊರೊನಾ ವೈರಸ್ ಭೀತಿಯಿಂದ ಹಬ್ಬಗಳೆಲ್ಲವನ್ನು ಸಾಂಕೇತಿಕವಾಗಿ ಆಚರಿಸಲಾಗಿದೆ. ಇದೀಗ ಕೊರೊನಾ ಸೋಂಕು ತಗ್ಗಿದೆ ಎನ್ನುವಾಗ ಗೌರಿ ಹುಣ್ಣಿಮೆ ಬಂದಿದ್ದು, ಉತ್ತಮ ಮಳೆ ಬೆಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸಂಭ್ರಮಕ್ಕೇನು ಕೊರತೆ ಇಲ್ಲ.
ಉತ್ತರ ಕರ್ನಾಟಕ ಈ ಭಾಗದ ಮಹಿಳೆಯರು, ಮಕ್ಕಳು ಕೂಡಿ ಗೌರಿ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಲಕ್ಷ್ಮೀ ಸ್ವರೂಪಿ ಗೌರಿಯನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಸಕ್ಕರೆ ಗೊಂಬೆಗಳಿಂದ ಆರತಿ ಮಾಡುವುದು ಈ ಹಬ್ಬದ ವೈಶಿಷ್ಟತೆಯಾಗಿದೆ. ಶೀಗೆ ಹುಣ್ಣಿಮೆಯಲ್ಲಿ ಸಕ್ಕರೆ ಗೊಂಬೆಗಳಿಗೆ ಬೇಡಿಕೆ ಕಡಿಮೆ. ಇನ್ನೂ ಗೌರಿ ಹುಣ್ಣಿಮೆಗೆ ವಾರ ಮೊದಲೇ
ಸಕ್ಕರೆಗೊಂಬೆ ತಯಾರಿಕರು ಬಿಡುವಿಲ್ಲದೇ ಕೆಲಸ ಮಾಡುತ್ತಾರೆ. ಇಲ್ಲಿನ ಹಳೆ ಬಜಾರ ಓಣಿಯಲ್ಲಿ ಐದು ದಶಕಗಳಿಂದ ಗೋಪಾಲ ಶ್ರೇಷ್ಠಿ ಅವರ ಮನೆಯಲ್ಲಿ ಸಕ್ಕರೆ ಗೊಂಬೆ ತಯಾರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿ ಸಕ್ಕರೆ ಗೊಂಬೆಗಳ ಬೇಡಿಕೆ ಹೆಚ್ಚಿದ್ದರಿಂದ ದಿನವೂ 1 ಕ್ವಿಂಟಲ್ ಸಕ್ಕರೆಯಿಂದ ಗೊಂಬೆ ತಯಾರಿಸಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. 100 ರೂ. ಗೆ ಮಾರಾಟ
ಮಾಡುತ್ತಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಸರ್ಕಾರಿ ಸೇವೆ ವಿಳಂಬಕ್ಕೆ ಪರಿಹಾರ ಪಡೆಯುವುದು ಜನರ ಹಕ್ಕು: ಸುರೇಶ್ ಕುಮಾರ್
ಇತ್ತೀಚಿನ ದಿನಮಾನಗಳಲ್ಲಿ ಬಣ್ಣದ ಸಕ್ಕರೆ ಗೊಂಬೆಗಳಲ್ಲಿ ರಾಸಾಯನಿಕ ಬಣ್ಣ ಬಳಸುತ್ತಿರುವ ಕಾರಣ ಬಿಳಿ ಬಣ್ಣದ ಸಕ್ಕರೆಗೊಂಬೆಗಳಿಗೆ ಬೇಡಿಕೆ ಇದೆ. ಶುದ್ಧತೆಗೆ ಆದ್ಯತೆ ನೀಡಲಾಗುತ್ತಿದೆ ಎನ್ನುತ್ತಾರೆ ಗೊಂಬೆ ತಯಾರಕಿ ವಾಸವಿ ಶ್ರೇಷ್ಠಿ.
ಆರಂಭದಲ್ಲಿ ಸಕ್ಕರೆ ಗೊಂಬೆಗಳ ಬೇಡಿಕೆ ಕೆ.ಜಿ.ಗೆ 80 ರೂ. ಇದ್ದರೆ ಬೇಡಿಕೆ ಹೆಚ್ಚಾದಂತೆ ಕೆ.ಜಿ. 120 ರೂ. ವರೆಗೆ ಮಾರಾಟವಾಗಿದೆ. ಆದರೂ ಸಕ್ಕರೆ ಗೊಂಬೆಗಳ ಬೇಡಿಕೆ ಹೆಚ್ಚಿದಂತೆ, ಸಕ್ಕರೆ ಗೊಂಬೆಗಳ ಮನೆಗಳಿಗೆ ತೆರಳಿ ಖರೀದಿಸುತ್ತಿರುವುದು ಕಂಡುಬಂತು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಗಲಭೆ ನಡೆಸಿದ್ದು ಅಕ್ಷಮ್ಯ: ಡಿಸಿಎಂ ಕಟು ಟೀಕೆ
ರೈತರ ಹೆಸರಿನಲ್ಲಿ ಗೂಂಡಾಗಿರಿ: ನಳಿನ್ಕುಮಾರ್ ಕಟೀಲ್ ಖಂಡನೆ
ರೈತರ ಅನ್ನ ತಿಂದು ದ್ರೋಹ ಬಗೆಯಬೇಡಿ : ಕೋಡಿಹಳ್ಳಿ ಚಂದ್ರಶೇಖರ್
ಜೆಡಿಎಸ್ ಪರಿಷತ್ ಸದಸ್ಯರ ಸಭೆ ಮುಕ್ತಾಯ:ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ಹೆಸರು ಅಂತಿಮ
ರೈತರೇ, ಕಾಂಗ್ರೆಸ್ ನಿಮ್ಮ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸುತ್ತಿದೆ: ಶ್ರೀರಾಮುಲು