
“ಹರ್ ಘರ್ ತಿರಂಗಾ’ ಅಭಿಯಾನ; ಅಂಚೆ ಕಚೇರಿಗಳಲ್ಲಿಯೂ ರಾಷ್ಟ್ರ ಧ್ವಜ ಲಭ್ಯ
Team Udayavani, Aug 9, 2022, 6:45 AM IST

ಬೆಂಗಳೂರು: ಕೇಂದ್ರ ಸರಕಾರವು ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಪ್ರಾರಂಭಿಸಿದ “ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ರಾಜ್ಯ ಅಂಚೆ ಇಲಾಖೆಯು 7.5 ಲಕ್ಷ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ ಘರ್ ತಿರಂಗಾ ಅಭಿಯಾನವು ಎಲ್ಲರಲ್ಲೂ ದೇಶಾಭಿಮಾನ ಮೂಡಿಸುವ ವಿನೂತನ ಕಾರ್ಯಕ್ರಮವಾಗಿದ್ದು, ಇದರಲ್ಲಿ ದೇಶದ ಎಲ್ಲ ಪ್ರಜೆಗಳೂ ಭಾಗವಹಿಸಬೇಕು. ಎಲ್ಲರಿಗೂ ತಿರಂಗಾ ಧ್ವಜ ದೊರಕಬೇಕೆಂಬ ಉದ್ದೇಶದಿಂದ ಅಂಚೆ ಕಚೇರಿ ಮುಂದೆ ಬಂದಿದೆ. ಕರ್ನಾಟಕ ಪೋಸ್ಟಲ್ ಸರ್ಕಲ್ ಇಲ್ಲಿಯವರೆಗೆ 9,500ಕ್ಕೂ ಹೆಚ್ಚು ಅಂಚೆ ಕಚೇರಿಗಳ ಮೂಲಕ 2.5 ಲಕ್ಷಕ್ಕೂ ಹೆಚ್ಚು ಧ್ವಜಗಳನ್ನು ಮಾರಾಟ ಮಾಡಿದೆ ಎಂದರು.
ಸೆಲ್ಫಿ ಪಾಯಿಂಟ್
ರಾಜ್ಯಾದ್ಯಂತ 97 ಅಂಚೆ ಕಚೇರಿಯಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ಹ್ಯಾಶ್‌ಟ್ಯಾಗ್‌ಗಳೊಂದಿಗೆ ಇಂಡಿಯಾ ಪೋಸ್ಟ್ ಮತ್ತು ಅಮೃತ್ ಮಹೋತ್ಸವ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡುವ ಮೂಲಕ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಹುದು. ಪ್ರಧಾನ ಅಂಚೆ ಕಚೇರಿಗಳು “ಹರ್ ಘರ್ ತಿರಂಗಾ’ ಗೀತೆಯನ್ನು ಬಿಡುಗಡೆ ಮಾಡುವುದರ ಜತೆಗೆ ಪ್ರಚಾರದ ವೀಡಿಯೋಗಳನ್ನೂ ಪೋಸ್ಟ್ ಮಾಡಲಾಗುತ್ತದೆ.
ಪ್ರಭಾತ್ ಪೇರಿ
ರಾಜ್ಯಾದ್ಯಂತ ಅಂಚೆ ವಿಭಾಗಗಳಿಂದ 19 ಸ್ಥಳಗಳಲ್ಲಿ ಪ್ರಭಾತ್ ಪೇರಿ ಆಯೋಜಿಸಲಾಗಿದ್ದು, ಇದರಲ್ಲಿ ಅಂಚೆ ಸಿಬಂದಿ ಮತ್ತು ಸ್ಥಳೀಯ ನಾಗರಿಕರನ್ನು ಒಳಗೊಂಡ 50 ರಿಂದ 75 ಮಂದಿ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
