ಹಾವೇರಿ,ಗದಗ : ಸಿಡಿಲು ಬಡಿದು ಇಬ್ಬರು ಸಾವು, ಇಬ್ಬರಿಗೆ ಗಾಯ
Team Udayavani, Apr 16, 2022, 10:07 PM IST
ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ ಶನಿವಾರ ಸಂಜೆ ಸಿಡಿದು ಬಡಿದು ಓರ್ವ ಯುವಕ ಮೃತಪಟ್ಟಿದ್ದಾನೆ. ಹಾನಗಲ್ಲ ತಾಲೂಕಿನ ಹಸನಾಬಾದಿ ಗ್ರಾಮದ ವಿರೇಶ ಹೊಸಮನಿ (25) ಸ್ಥಳದಲ್ಲಿಯೇ ಮೃತಪಟ್ಟಿರುವ ದುರ್ದೈವಿ. ಜತೆಗಿದ್ದ ಶಶಾಂಕ ಹೊಸಮನಿ ಹಾಗೂ ದೇವರಾಜ ಹೊಸಮನಿ ಅವರಿಗೂ ಸಿಡಿಲು ತಗಲಿದ್ದು, ಹಾನಗಲ್ಲ ಪಟ್ಟಣದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಿಕೊಡಲಾಗಿದೆ.
ಹಾನಗಲ್ಲಿನ ರೋಶನಿ ಶಾಲೆಯ ಬಳಿ ಹೋಗುತ್ತಿರುವಾಗ ಸಿಡಿಲು, ಮಳೆ ಬಂದ ಕಾರಣ ಅಲ್ಲಿ ಮರದ ಕೆಳಗೆ ನಿಂತಿದ್ದ ಕಾರ್ಮಿಕ ವಿರೇಶ ಹೊಸಮನಿ ಹಾಗೂ ಶಶಾಂಖ ಹೊಸಮನಿ, ದೇವರಾಜ ಹೊಸಮನಿಗೆ ಸಿಡಿಲು ಹೊಡೆದಿರುವ ಬಗ್ಗೆ ವರದಿಯಾಗಿದೆ.
ಮುಂಡರಗಿ: ಕುರಿ ಗಾಹಿ ಬಲಿ
ಮುಂಡರಗಿತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಕುರಿ ಮೇಯಿಸುತ್ತಿದ್ದ ಹನಮಪ್ಪ ಸಿದ್ದಪ್ಪ ಮನ್ನಾಪೂರ (22) ಶನಿವಾರ ಸಂಜೆ ಸಿಡಿಲು ಬಡಿದು ಸಾವನ್ನಪ್ಪಿದ್ದರೆ. ೩ ಕುರಿ ಮರಿಗಳು ಕೂಡಾ ಸಿಡಿಲಿಗೆ ಬಲಿಯಾಗಿವೆ.
ಸ್ಥಳಕ್ಕೆ ಉಪತಹಸೀಲ್ದಾರ ಸಿ.ಕೆ ಬಳೂಟಗಿ. ಕಂದಾಯ ನಿರೀಕ್ಷಕ ಎಂ.ಎ.ನದಾಫ್ ಭೇಟಿ ನೀಡಿ ಪರೀಶೀಲನೆ ನಡೆಸಿದರು.