ದೇವೇಗೌಡರ ಕಣ್ಣೀರ ಶಾಪ ತುಮಕೂರಿಗೆ ತಟ್ಟುತ್ತೆ: ಎಚ್.ಡಿ.ರೇವಣ್ಣ
Team Udayavani, Dec 5, 2020, 10:36 AM IST
ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಕಣ್ಣೀರು ಹಾಕಿಸಿದ ಶಾಪ ಶೀಘ್ರದಲ್ಲಿ ತುಮಕೂರಿಗೆ ತಟ್ಟಲಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಆವರಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯನ್ನು
ಸಂಪೂರ್ಣ ನೀರಾವರಿ ಮಾಡಲು ಮಾಜಿ ಪ್ರಧಾನಿ ದೇವೇಗೌಡರು ಹಗಲಿರುಳು ಶ್ರಮಿಸಿದ್ದರು. ಆದರೆ, ಅಲ್ಲಿನ ಮುಖಂಡರು ಅವರನ್ನೇ ಕಣಕ್ಕೆ ಇಳಿಸಿ, ವಿಶ್ವಾಸ ದ್ರೋಹ ಮಾಡಿದ್ದಾರೆ. ಅವರಿಗೆ ಆ ದೇವರೇ ಶಿಕ್ಷೆಕೊಡುತ್ತಾನೆ ಎಂದುಹೇಳಿದರು.
ದೇವೇಗೌಡರು ತುಮಕೂರಿನಿಂದ ಲೋಕಸಭೆಗೆ ಹೋದರೆ ಹೇಮಾವತಿ ನೀರು ಹರಿಸುವುದಿಲ್ಲ ಎಂದು ತಪ್ಪು ಸಂದೇಶ ಸಾರಿದಲ್ಲದೆ, ಜೆಡಿಎಸ್ ಪಕ್ಷದ ಕೆಲ ಮುಖಂಡರು ವಿರೋಧ ಪಕ್ಷದೊಂದಿಗೆ ಚುನಾವಣೆ ವೇಳೆ ಕೈ ಜೋಡಿಸಿದ್ದರಿಂದ ಸೊಲುವಂತಾಯಿತು, ಇದರಿಂದ ಅವರು ಕುಗ್ಗಿ ಹೋಗಿದ್ದಾರೆ, ಜಿಲ್ಲೆಗೆ ಹೋಲಿಸಿದರೆ ತುಮಕೂರಿಗೆ ಹೆಚ್ಚು ನೀರು ಹೇಮಾವತಿ
ಅಣೆಕಟ್ಟೆಯಿಂದ ಹರಿಯುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಪಕ್ಕಗಳ ಒಳ ಒಪ್ಪಂದ: ಪಕ್ಷದ ವರಿಷ್ಠ ದೇವೇಗೌಡರು ಹಾಗೂ ಜೆಡಿಎಸ್ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ. ಇದು ಹೆಚ್ಚು ದಿನ ನಡೆಯುವುದಿಲ್ಲ, ದೇವೇಗೌಡರ ಮಾರ್ಗದರ್ಶನ, ಯುವಕರಾದ ನಿಖೀಲ್ ಮತ್ತು ಪ್ರಜ್ವಲ್ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ:ಕುರಿ ರೀತಿ ಜನರ ತುಂಬಿದ್ದ ವಾಹನ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ, ಹಲವರಿಗೆ ಸಣ್ಣಪುಟ್ಟ ಗಾಯ
ತಿಂಗಳು ಸರ್ಕಾರ ನಮ್ಮದು: ರಾಜ್ಯದ ಜನತೆ ನಮಗೆ ಸಂಪೂರ್ಣ ಅವಕಾಶ ನೀಡುತ್ತಿಲ್ಲ. ಹಾಗಾಗಿ 20 ತಿಂಗಳು, 14 ತಿಂಗಳು ಅಧಿಕಾರ ಮಾಡುವಂತಾಯಿತು. ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ,ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಕೆಲಸಮಾಡಿಸಿದ್ದು, ಮರು ಹುಟ್ಟು ಕಾಣುವಂತಾಯಿತು. ಡಿಕೆಶಿ ನೀರಾವರಿ ಮಂತ್ರಿಯಾಗಿದ್ದರು. ನಾವು
ತುಮಕೂರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದೇವೆ ಎಂದುಹೇಳಿದರು.
ನಾಲ್ಕು ಪಟ್ಟು ದರ ಏರಿಕೆ: ತಾನು ಇಂಧನ ಮಂತ್ರಿ ಆಗಿದ್ದ ವೇಳೆ ವಿದ್ಯುತ್ ಶುಲ್ಕ ಏರಿಕೆ ಮಾಡಿರಲಿಲ್ಲ. ಆದರೆ, ಬಿಜೆಪಿ ಹಾಗೂ
ಕಾಂಗ್ರೆಸ್ ಸರ್ಕಾರ 10 ಬಾರಿ ದರ ಏರಿಕೆ ಮಾಡಿದ್ದು, ನಾಲ್ಕು ಪಟ್ಟು ದುಬಾರಿ ಹಣ ಕಟ್ಟುವಂತಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಬಳಕೆದಾರರು ಹೈರಾಣಾಗುವಂತಾಗಿದೆ. ರೈತರಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ರೈತರಿಗೆ ಹೊರೆ ಹೊರಿಸುತ್ತಿದ್ದಾರೆ
ಎಂದು ಆಪಾದನೆ ಮಾಡಿದರು.
ಶ್ರೀಕಂಠಯ್ಯ ದೇಷ ರಾಜಕಾರಣಿ ಅಲ್ಲ: ಜಿಲ್ಲೆಯಲ್ಲಿ ಶ್ರೀಕಂಠಯ್ಯ ಎಂದಿಗೂ ದ್ವೇಷರಾಜಕೀಯ ಮಾಡಿಲ್ಲ. ಅವರು ಹಲವು ಬಾರಿ ದೇವೇಗೌಡರಿಗೆ ರಾಜಕೀಯ ಸಲಹೆ ನೀಡಿದ್ದರು. ಶ್ರೀಕಂಠಯ್ಯ ಅವರನ್ನು ನಿಂಧನೆ ಮಾಡಿದವರುಇಂದುಅವರಪಕ್ಷಕ್ಕೆ ಸೇರಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಪುಟ್ಟೇಗೌಡ ಹೆಸರು ಹೇಳದೆ ತಿರುಗೇಟು ನೀಡಿದರು.
ಶಾಸಕ ಬಾಲಕೃಷ್ಣ, ತಾಲೂಕು ಅಧ್ಯಕ್ಷ ದೇವರಾಜೇಗೌಡ, ಜಿಪಂ ಸದಸ್ಯ ಪುಟ್ಟಸ್ವಾಮಿಗೌಡ, ಮುಖಂಡ ರಾದಕೃಷ್ಣೇಗೌಡ, ರಾಮಕೃಷ್ಣ, ತಿಮ್ಮೇಗೌಡ, ನವೀನ್, ವಿರೇಶ್, ಶಿವಣ್ಣ,ಲೋಕೇಶ್,ವೆಂಕಟೇಶ್, ಶಿವರಾಜ್ ಮೊದಲಾದವರು ಉಪಸ್ಥಿತರಿದ್ದರು.
ನಿಂಬೇಹಣ್ಣಿನ ಶಕ್ತಿ ತಿಳಿಯಲಿ
ಎಚ್.ಡಿ.ರೇವಣ್ಣ ನಿಂಬೇಹಣ್ಣು ಇಟ್ಟುಕೊಂಡಿರುವ ಬಗ್ಗೆ ಇತ್ತೀಚೆಗೆ ನಡೆದ ಗ್ರಾಮ ಸ್ವಾರಜ್‌ಕಾರ್ಯಕ್ರಮದಲ್ಲಿ ಸಹಕಾರ
ಮಂತ್ರಿ ಸೋಮಶೇಖರ್ ವ್ಯಂಗ್ಯವಾಡಿದ್ದರು. ಮೊದಲು ಅವರು ನಿಂಬೇಹಣ್ಣಿನ ಶಕ್ತಿ ತಿಳಿದು ನಂತರ ಮಾತನಾಡುವುದು
ಒಳಿತು, ವಿರೋಧಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮಾಠ ಮಂತ್ರಗಳು ನನಗೆ ತಟ್ಟದಿರಲೆಂದು ದೇವಾಲಯದ ಅರ್ಚಕರು ನಿಂಬೇಹಣ್ಣು ನೀಡುತ್ತಾರೆ ಎಂದು ಮಾಜಿ ಸಚಿವ ರೇವಣ್ಣ ಹೇಳಿದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್
ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್
ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ : ಬೀಳಗಿಯ ಓರ್ವ ವಶಕ್ಕೆ
ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದ ಶಾಸಕ ಯತ್ನಾಳ್
ಮಕ್ಕಳು ಸಂಗ್ರಹಿಸಿದ್ದ ಹುಂಡಿಯನ್ನು ಶ್ರೀರಾಮ ಮಂದಿರ ನಿಧಿಗೆ ಸಮರ್ಪಣೆ
MUST WATCH
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ
ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,
ಹೊಸ ಸೇರ್ಪಡೆ
ಎಂಬುಲ್ದೇನಿಯ-ರೂಟ್ ಗ್ರೇಟ್ ಫೈಟ್
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್
ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್
ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು
ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ