ಪಾಕ್ನಿಂದ ಭಾರತಕ್ಕೆ ಬರುತ್ತಿದ್ದ 300 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ
ಕರಾವಳಿ ಭದ್ರತಾ ಪಡೆ, ಎಟಿಎಸ್ ಮಿಂಚಿನ ಕಾರ್ಯಾಚರಣೆ
Team Udayavani, Apr 15, 2021, 8:22 PM IST
ನವದೆಹಲಿ: ಬಂಗಾಳ ಕೊಲ್ಲಿ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಸುಮಾರು 300 ಕೋಟಿ ರೂ. ಮೌಲ್ಯದ 30 ಕೆಜಿ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ ಮೀನುಗಾರಿಕೆ ದೋಣಿಯೊಂದನ್ನು ಗುಜರಾತ್ ಕರಾವಳಿಯಾಚೆ ಕರಾವಳಿ ಭದ್ರತಾ ಪಡೆ ಹಾಗೂ ಉಗ್ರ ನಿಗ್ರಹ ದಳ (ಎಟಿಎಸ್) ಸಿಬ್ಬಂದಿ, ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಎರಡು ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ವೇಳೆ ಗುಜರಾತ್ ಕರಾವಳಿ ವ್ಯಾಪ್ತಿಯಲ್ಲಿ ಬರುವ ಕಛ್ ಜಿಲ್ಲೆಯ ಜಖೌ ತೀರದ ಬಳಿ ದೋಣಿಯನ್ನು ಪತ್ತೆ ಹಚ್ಚಿ, ಹೆರಾಯಿನ್ ಜೊತೆಗೆ ಅದರಲ್ಲಿದ್ದ 8 ಪಾಕಿಸ್ತಾನಿ ನಾಗರಿಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಭಾರತೀಯ ಕರಾವಳಿ ಪಡೆಯ (ಐಸಿಜಿ) ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ :ಧರ್ಮಶಾಲಾ : ಕರೇರಿಯ ಬೆಟ್ಟ ಪ್ರದೇಶದಲ್ಲಿ ಪಾಕ್ ಮೊಬೈಲ್ ಸಿಗ್ನಲ್ ಪತ್ತೆ!
ಕರಾವಳಿ ಪಡೆ ಹಾಗೂ ಎಟಿಎಸ್ನ ಸತತ ಕಣ್ಗಾವಲಿನಿಂದಾಗಿ ಕಳ್ಳಸಾಗಣೆದಾರರಿಗೆ ಕಳೆದೊಂದು ವರ್ಷದಿಂದ ತೀವ್ರ ಹಿನ್ನಡೆಯಾಗುತ್ತಿದೆ. ಈವರೆಗೆ ಸಮುದ್ರ ಮಾರ್ಗದಲ್ಲಿ ಬರುತ್ತಿದ್ದ ಅಂದಾಜು 5,200 ಕೋಟಿ ರೂ. ಮೌಲ್ಯದ 1.6 ಟನ್ನಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ