ನನ್ನನ್ನ ಸಂಪುಟದಿಂದ ಕೈಬಿಟ್ರೂ ಪಕ್ಷದ ಪರ ಕೆಲಸ ಮಾಡುತ್ತೇನೆ: ಸಚಿವ ಬೈರತಿ ಬಸವರಾಜ್
ಮಾರ್ಚ್ ಅಂತ್ಯದೊಳಗೆ ಸ್ಮಾರ್ಟ್ ಸಿಟಿ ಪೂರ್ಣ
Team Udayavani, Jan 24, 2022, 2:35 PM IST
ಬೆಂಗಳೂರು : ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ಪರಮಾಧಿಕಾರ ಹೊಂದಿದ್ದು, ಅವರು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು, ನನ್ನನ್ನ ಕೈಬಿಟ್ಟರೂ ಪಕ್ಷದ ಕೆಲಸ ಮಾಡುತ್ತೇನೆ ಎಂದು ಸಚಿವ ಬೈರತಿ ಬಸವರಾಜ್ ಸೋಮವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ , ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತೇನೆ. ನಾವು ಬಿಜೆಪಿ ಅಡಿಯಲ್ಲೇ ಕೆಲಸ ಮಾಡ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮಾರ್ಚ್ ಅಂತ್ಯದೊಳಗೆ ಸ್ಮಾರ್ಟ್ ಸಿಟಿ ಪೂರ್ಣ
ರಾಜ್ಯದ ಏಳು ಸ್ಮಾರ್ಟ್ ಸಿಟಿಗಳಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸೂಚಿಸಿದ್ದಾರೆ.
ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಸ್ಮಾರ್ಟ್ ಸಿಟಿ ಅಭಿವೃದ್ಧಿ ಕುರಿತಂತೆ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿದ್ದೇನೆ. ಇದುವರಗೆ ೮೦೦ ಕೋಟಿ ಮಾತ್ರ ಸ್ಮಾರ್ಟ್ ಸಿಟಿಗೆ ಖರ್ಚಾಗಿತ್ತು.ನಾವು ಅಧಿಕಾರಕ್ಕೆ ಬಂದ ನಂತರ 2600 ಕೋಟಿ ಖರ್ಚು ಮಾಡಿದ್ದೇವೆ. ಕೇಂದ್ರದಿಂದ 2500 ಕೋಟಿ ನೀಡಲಾಗಿದೆ. ಅದರಲ್ಲಿ 2040 ಕೋಟಿ ಖರ್ಚು ಮಾಡಿದ್ದೇವೆ.ಮಾರ್ಚ್ ಒಳಗೆ ಎಲ್ಲಾ ಕಾಮಗಾರಿ ಪೂರ್ಣವಾಗಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.
ಏಳು ಸ್ಮಾರ್ಟ್ ಸಿಟಿಗಳ ಕಾಮಗಾರಿ ನಡೆದಿವೆ. ಬೇರೆ ರಾಜ್ಯಗಳಿಗಿಂತ ನಮ್ಮಲ್ಲಿ ಗುಣಮಟ್ಟ ಹೆಚ್ಚಿದೆ. ಒಂದೊಂದು ಸಿಟಿಗೆ ೧೦ ಬಾರಿ ಭೇಟಿ ಮಾಡಿದ್ದೇನೆ .ಎಲ್ಲಾ ಕಡೆಗಳಲ್ಲೂ ಕೆಲಸ ಉತ್ತಮವಾಗಿ ನಡೆದಿದೆ. ಅವಧಿಗೂ ಮುನ್ನವೇ ಟಾರ್ಗೆಟ್ ರೀಚ್ ಆಗ್ತೇವೆ. ಕೊಟ್ಟ ಅನುದಾನ ಸದ್ಬಳಕೆ ಮಾಡಿಕೊಳ್ತೇವೆ. ಬೆಂಗಳೂರಿನಲ್ಲಿ ಕಾಮಗಾರಿ ವಿಳಂಬವಾಗಿಲ್ಲ ಎಂದು ಹೇಳಿದರು.
ಕೋವಿಡ್ ನಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ೨೦೧೯ ಅತಿವೃಷ್ಠಿ,ಕೊರೊನಾದಿಂದ ಸ್ವಲ್ಪ ವಿಳಂಬ. ರಸ್ತೆ ಕಾಮಗಾರಿಗಳು ನಿಧಾನವಾಗಿತ್ತು. ಆದರೆ ಈಗ ಕಾಮಗಾರಿಗಳು ನಡೆಯುತ್ತಿವೆ.ಬೆಂಗಳೂರಿನಲ್ಲಿ ಕಾಂಟ್ರಾಕ್ಟರ್ ಚೇಂಜ್ ಮಾಡಿದ್ದೇವೆ. ಕೆಲಸ ಮಾಡುವವರಿಗೆ ಅವಕಾಶ ಕೊಟ್ಟಿದ್ದೇವೆ ಎಂದರು.
ಇಲಾಖೆ ಎಸಿಎಸ್ ರಾಕೇಶ್ ಸಿಂಗ್ ಮಾತನಾಡಿ ರಾಜ್ಯಕ್ಕೆ ನಾಲ್ಕುಸ್ಮಾರ್ಟ್ ಸಿಟಿ ಕೇಳಿದ್ದೇನೆ. ಬಳ್ಳಾರಿ,ಮೈಸೂರು,ವಿಜಯಪುರ,ಕಲಬುರಗಿಗೆ ಸ್ಮಾರ್ಟ್ ಸಿಟಿ ಸ್ತಾನಮಾನ ಕೇಳಿದ್ದೇವೆ. ಇವು ನಾಲ್ಕು ಮಹಾನಗರಪಾಲಿಕೆಗಳು. ಕೇಂದ್ರಕ್ಕೆ ಪತ್ರವನ್ನೂ ಬರೆದಿದ್ದೇನೆ ಎಂದರು.