‘ಜೈಲ್ ಭರೋ’ ಚಳವಳಿಗೆ ಸಿದ್ಧರಾಗಿ ; ಬೆಂಬಲಿಗರಿಗೆ ಇಮ್ರಾನ್ ಖಾನ್ ಕರೆ
ಪಾಕಿಸ್ಥಾನದ ಜೈಲುಗಳಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲ...!
Team Udayavani, Feb 4, 2023, 9:09 PM IST
ಲಾಹೋರ್: ತನ್ನ ಪಕ್ಷದ ನಾಯಕರಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡುತ್ತಿರುವ ಮತ್ತು ಹೊಸದಾಗಿ ಸಾರ್ವತ್ರಿಕ ಚುನಾವಣೆಗಳನ್ನು ಘೋಷಿಸಲು ವಿಳಂಬ ಮಾಡುತ್ತಿರುವ ಫೆಡರಲ್ ಸರ್ಕಾರದ ವಿರುದ್ಧ ‘ಜೈಲ್ ಭರೋ ತೆಹ್ರೀಕ್’ ಗೆ ಸಿದ್ಧರಾಗುವಂತೆ ಪಾಕಿಸ್ಥಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಶನಿವಾರ ತಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ.
ಶನಿವಾರ ತಮ್ಮ ಝಮಾನ್ ಪಾರ್ಕ್ ನಿವಾಸದಿಂದ ದೂರದರ್ಶನದ ಭಾಷಣದಲ್ಲಿ ಉಚ್ಚಾಟಿತ ಪ್ರಧಾನಿ ಈ ಹೇಳಿಕೆಗಳನ್ನು ಮಾಡಿದರು.
ಪಕ್ಷದ ಹಿರಿಯ ಉಪಾಧ್ಯಕ್ಷ ಫವಾದ್ ಚೌಧರಿ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಮಾಜಿ ಸದಸ್ಯ ಶಂದನಾ ಗುಲ್ಜಾರ್ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿದ ಕೆಲವು ದಿನಗಳ ನಂತರ ಈ ರೀತಿ ಕಿಡಿ ಕಾರಿದ್ದಾರೆ.
‘ಜೈಲ್ ಭರೋ ತೆಹ್ರೀಕ್’ಗಾಗಿ ನನ್ನ ಕರೆಗಾಗಿ ಸಿದ್ಧರಾಗಿ ಕಾಯುವಂತೆ ನಾನು ಜನರನ್ನು ಕೇಳುತ್ತೇನೆ. ಅವರೆಲ್ಲರನ್ನೂ ಹೊಂದಲು ಪಾಕಿಸ್ಥಾನದ ಜೈಲುಗಳಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲ”ಎಂದು ಖಾನ್ ಹೇಳಿದ್ದಾರೆ.