ಗಗನಯಾನಕ್ಕಾಗಿ ಭಾರತ-ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಗಳ ಒಪ್ಪಂದ
Team Udayavani, Apr 15, 2021, 11:05 PM IST
ನವದೆಹಲಿ: ಭಾರತದ ಮೊಟ್ಟಮೊದಲ ಮಾನವ ಸಹಿತ ಖಗೋಳಯಾತ್ರೆಯಾದ “ಗಗನಯಾನ’ ಅನುಷ್ಠಾನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹಾಗೂ ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆ (ಸಿಎನ್ಇಎಸ್) ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
ಗುರುವಾರದಂದು ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಫ್ರಾನ್ಸ್ನ ವಿದೇಶಾಂಗ ಸಚಿವ ಜೀನ್-ಯೆಸ್ ಲಿ ಡ್ರಿಯಾನ್ ಈ ವಿಷಯ ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ, ಗಗನಯಾನದಲ್ಲಿ ಪಾಲ್ಗೊಳ್ಳುವ ಖಗೋಳಯಾತ್ರಿಗಳಿಗೆ ಫ್ರಾನ್ಸ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಸಿಎಡಿಎಂಒಎಸ್ ಕೇಂದ್ರದಲ್ಲಿ ಮೈಕ್ರೋ ಗ್ರಾವಿಟಿಯಲ್ಲಿ ಕಾರ್ಯ ನಿರ್ವಹಿಸುವ ವಿಧಾನ ಮತ್ತಿತರ ವಿಚಾರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ಇದನ್ನೂ ಓದಿ :ಚೀನಾ ಚಿತಾವಣೆಗಳಿಗೆ ಭಾರತ ಬಗ್ಗುವುದಿಲ್ಲ : ಬಿಪಿನ್ ರಾವತ್