
NATO ಗೆ ಭಾರತ ಸೇರ್ಪಡೆ?
Team Udayavani, May 28, 2023, 7:23 AM IST

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ, ನ್ಯಾಟೋ ಪ್ಲಸ್‌ಗೆ ಭಾರತವನ್ನೂ ಸೇರ್ಪಡೆ ಮಾಡಬೇಕು ಎಂದು ಅಮೆರಿಕದ ಪ್ರಬಲ ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಗೆ ದಿನಗಣನೆ ಆರಂಭವಾಗಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ನ್ಯಾಟೋ ಪ್ಲಸ್ ಎನ್ನುವುದು ಜಾಗತಿಕ ರಕ್ಷಣ ಸಹಕಾರ ಸಾಧಿಸುವ ನಿಟ್ಟಿನಲ್ಲಿ ರೂಪುಗೊಂಡ ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) ಮತ್ತು ಇತರ 5 (ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ಇಸ್ರೇಲ್ ಮತ್ತು ದಕ್ಷಿಣ ಕೊರಿಯಾ) ದೇಶಗಳ ಸಮೂಹ.
ಅನುಕೂಲವೇನು?: ಈ ಸಮೂಹಕ್ಕೆ ಭಾರತವನ್ನು ಸೇರ್ಪಡೆ ಮಾಡುವುದರಿಂದ ಭಾರತವೂ ಸೇರಿದಂತೆ ಈ ದೇಶಗಳ ನಡುವೆ ಗುಪ್ತಚರ ಮಾಹಿತಿ ವಿನಿಮಯಕ್ಕೆ ಅವಕಾಶ ಸಿಗಲಿದೆ. ಅತ್ಯಾಧುನಿಕ ಸೇನಾ ತಂತ್ರಜ್ಞಾನಗಳು ಕೂಡ ಭಾರತಕ್ಕೆ ಲಭ್ಯವಾಗಲಿವೆ. ಮುಖ್ಯವಾಗಿ, ವಿಸ್ತರಣವಾದಿ ಮನಃಸ್ಥಿತಿ ಹೊಂದಿರುವ ಚೀನವನ್ನು ಎದುರಿಸಲು ಕೂಡ ಭಾರತಕ್ಕೆ ನೆರವಾಗಲಿದೆ. ಚೀನಕ್ಕೆ ಸಡ್ಡು ಹೊಡೆಯುವುದೇ ಇದರ ಉದ್ದೇಶವೆಂದು ವಿಶ್ಲೇಷಿಸಲಾಗಿದೆ.
ಅಮೆರಿಕ ಸಂಸದೀಯ ಸ್ಥಾಯಿ ಸಮಿತಿಯ ಮುಖ್ಯಸ್ಥ ಮೈಕ್ ಗಲ್ಲಾಘೆರ್ ಮತ್ತು ರ್‍ಯಾಂಕಿಂಗ್ ಸದಸ್ಯ ರಾಜಾ ಕೃಷ್ಣಮೂರ್ತಿ ಅವರು ನ್ಯಾಟೋ ಪ್ಲಸ್‌ಗೆ ಭಾರತವನ್ನು ಸೇರಿಸುವ ಕುರಿತ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ನ್ಯಾಟೋ ಪ್ಲಸ್‌ಗೆ ಭಾರತವನ್ನು ಸೇರಿಸಿದರೆ, ಭಾರತ ಮತ್ತು ಅಮೆರಿಕದ ನಡುವಿನ ಬಾಂಧವ್ಯ ವೃದ್ಧಿಯಾಗಲಿದೆ. ಜಾಗತಿಕ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆ ಮಹತ್ವದ ಪಾತ್ರ ವಹಿಸಲಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನದ ಆಕ್ರಮಣಕಾರಿ ನಿಲುವನ್ನು ತಡೆಯಲು ಕೂಡ ಸಹಕಾರಿಯಾಗಲಿದೆ ಎಂದು ಸ್ಥಾಯಿ ಸಮಿತಿ ಶಿಫಾರಸಿನಲ್ಲಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇನ್ನು ಏಳಲ್ಲ ,ಎಂಟು ಖಂಡ!- 375 ವರ್ಷಗಳ ಹಿಂದೆ ಕಾಣೆಯಾಗಿದ್ದ ಖಂಡ ವಿಜ್ಞಾನಿಗಳಿಂದ ಪತ್ತೆ

India ಸ್ವಾವಲಂಬನೆಯನ್ನು “ಆರ್ಥಿಕ ರಕ್ಷಣಾ ನೀತಿ” ಎಂದು ತಪ್ಪಾಗಿ ಭಾವಿಸಬಾರದು: ಜೈಶಂಕರ್

Tragedy: ಮದುವೆ ಸಮಾರಂಭದಲ್ಲಿ ಭೀಕರ ಅಗ್ನಿ ದುರಂತ: 100 ಮಂದಿ ಸಜೀವ ದಹನ, 150 ಮಂದಿಗೆ ಗಾಯ

Finance: ಮೌಲ್ಯವರ್ಧನೆ ಕಂಡ ಆಫ್ಘನ್ ಕರೆನ್ಸಿ

Corona: ಮತ್ತೆ ಮರುಕಳಿಸಲಿದೆ ಕೊರೊನಾ!