147 ದಿನಗಳ ಬಳಿಕ ದೇಶದಲ್ಲಿ ಅತೀ ಕಡಿಮೆ ಕೋವಿಡ್ ಪ್ರಕರಣ ಪತ್ತೆ, ಸಾವಿನ ಪ್ರಮಾಣ ಭಾರೀ ಇಳಿಕೆ
ಒಟ್ಟು ದೇಶದಲ್ಲಿ ಈವರೆಗೆ 51,45,00268 ಕೋಟಿ ಡೋಸ್ ನೀಡಲಾಗಿದೆ ಎಂದು ವರದಿ ತಿಳಿಸಿದೆ.
Team Udayavani, Aug 10, 2021, 10:39 AM IST
ನವದೆಹಲಿ: ಭಾರತದಲ್ಲಿ 147 ದಿನಗಳ ಬಳಿಕ ಕಳೆದ 24ಗಂಟೆಗಳಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಸೋಮವಾರ (ಆಗಸ್ಟ್ 10) ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದ ಪ್ರಕಾರ 28,204 ಕೋವಿಡ್ ಪ್ರಕರಣ ವರದಿಯಾಗಿದೆ.
ಇದನ್ನೂ ಓದಿ:ದೆಹಲಿ ಪ್ರತಿಭಟನೆ-ಮುಸ್ಲಿಮ್ ವಿರೋಧಿ ಘೋಷಣೆ ; ಬಿಜೆಪಿ ಮುಖಂಡ ಉಪಾಧ್ಯಾಯ ಸೇರಿ 6 ಮಂದಿ ಬಂಧನ
ಕಳೆದ 24ಗಂಟೆಗಳಲ್ಲಿ 373 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 3,88,508ಕ್ಕೆ ಇಳಿಕೆಯಾಗಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದೇ ದಿನದಲ್ಲಿ 13,689ರಷ್ಟು ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ.97.04ರಷ್ಟಿದ್ದು, ಕಳೆದ 24ಗಂಟೆಗಳಲ್ಲಿ 41,511 ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶಾದ್ಯಂತ ಕೋವಿಡ್ ನಿಂದ ಗುಣಮುಖರಾದವರ ಸಂಖ್ಯೆ ಒಟ್ಟು 3,11,80,968ಕ್ಕೆ ಏರಿಕೆಯಾಗಿದೆ.
ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 54,91,647 ಲಕ್ಷ ಕೋವಿಡ್ ಡೋಸ್ ನೀಡಲಾಗಿದೆ. ಒಟ್ಟು ದೇಶದಲ್ಲಿ ಈವರೆಗೆ 51,45,00268 ಕೋಟಿ ಡೋಸ್ ನೀಡಲಾಗಿದೆ ಎಂದು ವರದಿ ತಿಳಿಸಿದೆ.