ರಕ್ಷಣಾ ಸಾಮಗ್ರಿ ಖರೀದಿಸಲು ಮಾರಿಷಸ್‌ಗೆ 724 ಕೋಟಿ ರೂ. ಸಾಲ
Team Udayavani, Feb 22, 2021, 11:40 PM IST
ಪೋರ್ಟ್ ಲೂಯೀಸ್: ಸಮುದ್ರ ಗಡಿ ವ್ಯಾಪ್ತಿಯಲ್ಲಿ ಬರುವ ಮಾರಿಷಸ್ ರಾಷ್ಟ್ರಕ್ಕೆ ರಕ್ಷಣಾ ಸಾಮಗ್ರಿಗಳ ಖರೀದಿಗಾಗಿ ಭಾರತ 724.71 ಕೋಟಿ ರೂ. ಸಾಲ ನೀಡಿದೆ.
ಈ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗನೌತ್, ಸಮಗ್ರ ಆರ್ಥಿಕ ಸಹಕಾರ ಸಹಭಾಗಿತ್ವ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದ್ದಾರೆ. ಇದರ ಅನ್ವಯ, ಮಾರಿಷಸ್ ತನ್ನ ಸಾರ್ವಭೌಮತ್ವ ರಕ್ಷಣೆಗೆ ಅಗತ್ಯವಿರುವ ಯುದ್ಧ ಸಾಮಗ್ರಿಗಳನ್ನು ಭಾರತದಿಂದ ಖರೀದಿಸಬಹುದು. ಅಲ್ಲದೆ ಭಾರತದ ಎಚ್‌ಎಎಲ್ ನಿರ್ಮಿಸಿರುವ ನೌಕಾ ಪಡೆಯ ಯುದ್ಧ ವಿಮಾನ ಡಾರ್ನಿಯರ್, ಸುಧಾರಿತ ಹಗುರ ಹೆಲಿಕಾಪ್ಟರ್ “ಧ್ರುವ್’ ಅನ್ನು ಮಾರಿಷಸ್ 2 ವರ್ಷಗಳ ಮಟ್ಟಿಗೆ ಉಚಿತವಾಗಿ ಗಸ್ತು ಪ್ರಕ್ರಿಯೆಗೆ ಬಳಸಿಕೊಳ್ಳಬಹುದು.
ಸಮುದ್ರಸೀಮೆ ವ್ಯಾಪ್ತಿಯ ದ್ವೀಪ ರಾಷ್ಟ್ರಗಳ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ “ಸಾಗರ್ ಪಾಲಿಸಿ’ ಅಡಿಯಲ್ಲಿ ಮಾರಿಷಸ್‌ಗೆ ಈ ನೆರವು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ: ರೈತರ ಆಕ್ರೋಶ
ತಿಂಗಳಾಡಿ: ಹೆಚ್ಚಾದ ಕಳ್ಳರ ಹಾವಳಿ; ಸೀಯಾಳ ಕದ್ದು ಕುಡಿದ ಕಳ್ಳರು..!
ನದಿಗೆ ಬಿಯರ್ ಬಾಟಲಿ: ಗೋವಾದಲ್ಲಿ ಪ್ರವಾಸಿಗರ ವಾಹನ ಬೆನ್ನಟ್ಟಿ ದಂಡ !
ಪಿಎಂಇಜಿಪಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ; ಶ್ರೀನಿವಾಸ ರೆಡ್ಡಿ
ಪಂಪಾಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀಚಕ್ರ ಸ್ಥಳಾಂತರ ಪ್ರಕರಣ; ಸ್ಥಳೀಯರ ಆಕ್ರೋಶ