ವಿದೇಶಿ ಭಯೋತ್ಪಾದಕ ಸಂಘಟನೆಗಳ ಮೇಲೆ ನಿಗಾ; ರಾಜ್ಯದ ಎಂಟು ಮಂದಿ ಐಸಿಸ್‌, ಐಎಸ್‌ಕೆಪಿ ಸೇರ್ಪಡೆ

ಪಿಎಫ್ಐ ನೊಂದಿಗೆ ಕೆಲವರ ಸಂಪರ್ಕ ಆರೋಪ ಸಂಪರ್ಕ

Team Udayavani, Oct 3, 2022, 7:00 AM IST

ವಿದೇಶಿ ಭಯೋತ್ಪಾದಕ ಸಂಘಟನೆಗಳ ಮೇಲೆ ನಿಗಾ; ರಾಜ್ಯದ ಎಂಟು ಮಂದಿ ಐಸಿಸ್‌, ಐಎಸ್‌ಕೆಪಿ ಸೇರ್ಪಡೆ

ಬೆಂಗಳೂರು: ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎಫ್ಐ) ನಿಷೇಧಗೊಂಡ ಬೆನ್ನಲ್ಲೇ ತೀವ್ರ ಕಟ್ಟೆಚ್ಚರ ವಹಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಭಯೋತ್ಪಾದನ ನಿಗ್ರಹ ಪಡೆ(ಎಟಿಎಸ್‌) ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳು ವಿದೇಶ ದಲ್ಲಿರುವ ಉಗ್ರ ಸಂಘಟನೆಗಳ ಕಾರ್ಯ ಚಟು ವಟಿಕೆಗಳ ಬಗ್ಗೆ ನಿಗಾವಹಿಸಿವೆ. ಜತೆಗೆ ರಾಜ್ಯದಲ್ಲಿರುವ ಸಂಘಟನೆಗಳ ಸ್ಲಿàಪರ್‌ ಸೆಲ್‌ಗ‌ಳ ಬಗ್ಗೆಯೂ ಕಾರ್ಯಾಚರಣೆ ಆರಂಭಿಸಿದ್ದಾರೆ.

2019ರಲ್ಲಿ ದೇಶದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೊಳಿಸಿದ ಬಳಿಕ ವಿದೇಶದಲ್ಲಿರುವ ಉಗ್ರ ಸಂಘಟನೆಗಳು ಭಾರತದಲ್ಲಿದ್ದ ಕೆಲ ಸಂಘ ಟನೆ ಗಳಿಗೆ ಆರ್ಥಿಕ ಸಹಾಯದ ಜತೆಗೆ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡಿದ್ದವು. ಇದು ದೇಶದಲ್ಲಿರುವ ಸಂಘಟನೆಗಳು ಆರ್ಥಿಕ ಹಾಗೂ ತಾಂತ್ರಿಕವಾಗಿ ಸದೃಢಗೊಳ್ಳಲು ನೆರವಾಯಿತು.

ಈ ಮಧ್ಯೆ ಪಿಎಫ್ಐ ಸಂಘಟನೆಯ ಸಂಪರ್ಕ ಹೊಂದಿದ್ದ ಕೆಲವು ವ್ಯಕ್ತಿಗಳು ಐಸಿಸ್‌ ಹಾಗೂ ಅಫ್ಘಾನಿಸ್ಥಾನದ ಐಎಸ್‌ಕೆಪಿ ಸಂಘಟನೆ ಸೇರಿರುವುದು ಪತ್ತೆಯಾಗಿದೆ. ಇಸ್ಲಾಮಿಕ್‌ ಸ್ಟೇಟ್ಸ್‌ ಕೋರೆಸನ್‌ ಪ್ರೋವೆನ್ಸ್‌(ಐಎಸ್‌ಕೆಪಿ) ಹಾಗೂ ಐಸಿಸ್‌ ಸೇರಲು ದಕ್ಷಿಣ ಭಾರತದ 4 ರಾಜ್ಯಗಳಿಂದ ಸುಮಾರು 97ಕ್ಕೂ ಹೆಚ್ಚು ಮಂದಿ ತೆರಳಿದವರ ಪೈಕಿ ತಮಿಳುನಾಡು, ಕೇರಳದಿಂದಲೇ ಹೆಚ್ಚು. ಕೇರಳ 21, ಕರ್ನಾಟಕ 8, ತೆಲಂಗಾಣ 14, ತಮಿಳುನಾಡಿನ 33 ಮಂದಿ ಸಂಘಟನೆ ಸೇರಿದ್ದಾರೆ. ವಿಪರ್ಯಾಸವೆಂದರೆ ಇವರಲ್ಲಿ ಕೆಲವರು ಪಿಎಫ್ಐ ಸಂಘಟನೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇದು ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಸಕ್ರಿಯಗೊಳಿಸುವ ಸಂಚು ಎನ್ನಲಾಗಿದೆ.

ಬೆಂಗಳೂರಿನ ಮಾದೇಶ್‌ ಪೆರುಮಾಳ್‌, ಮಂಗಳೂರಿನ ಮರಿಯಾ ಹೀಗೆ ಎಂಟು ಮಂದಿ ಐಎಸ್‌ಕೆಪಿ ಹಾಗೂ ಐಸಿಸ್‌ ಸಂಘಟನೆಗಳ ಜತೆ ಸಂಪರ್ಕ ದಲ್ಲಿದ್ದರು. ಕೆಲವರು ಸಿರಿಯಾಕ್ಕೆ ತೆರಳಿದ್ದರೆ, ಇನ್ನು ಕೆಲವರು ಅಲ್ಲಿಂದ ವಾಪಸಾಗಿ ಸ್ಥಳೀಯವಾಗಿ ಚಟ ವಟಿಕೆ ನಿರತರಾಗಿದ್ದರು. ಪ್ರಸ್ತುತ ಎನ್‌ಐಎ ಕಾರ್ಯಾ ಚರಣೆ ನಡೆಸಿ ಎಲ್ಲ 8 ಮಂದಿಯನ್ನು ಬಂಧಿಸಿದೆ.

ಸ್ಲೀಪರ್ ಸೆಲ್‌ಗ‌ಳು ಸಕ್ರಿಯ
ಪಿಎಫ್ಐ ನಿಷೇಧದ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ದೇಶದಲ್ಲಿ ನಿಷೇಧಿತ ಸಂಘಟನೆಗಳ ಸಂಪರ್ಕದಲ್ಲಿರುವ ಸ್ಲೀಪರ್ ಸೆಲ್‌ಗ‌ಳು ಸಕ್ರಿಯವಾಗತೊಡಗಿವೆ. ಇಷ್ಟು ದಿನಗಳ ಕಾಲ ಕೆಲ ವಿವಿಧ ಸಂಘಟನೆಗಳ ನೆರಳಿನಲ್ಲಿ ಕೆಲ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗುತ್ತಿದ್ದ ಸ್ಲೀಪರ್ ಸೆಲ್‌ಗ‌ಳು, ಈಗ ಮುನ್ನೆಲೆಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ.

ಪಿಎಫ್ಐ ಕೆಲವು ಮುಖಂಡರು ಹಾಗೂ ಸದಸ್ಯರು ದುಬೈ ಮತ್ತು ಕತಾರ್‌ಗೆ ಹೋಗಿ ಟರ್ಕಿ, ಸಿರಿಯಾದ ಕೆಲ ವ್ಯಕ್ತಿಗಳನ್ನು ಭೇಟಿಯಾಗಿದ್ದರು. ಕೆಲವರು ಇಸ್ತಾಂಬುಲ್‌ಗ‌ೂ ಹೋಗಿಅಲ್‌-ಖೈದಾ ಸಂಸ್ಥೆಗೆ ಸೇರಿದ ಚಾರಿಟಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆತಿಥ್ಯವನ್ನೂ ಸ್ವೀಕರಿಸಿದ್ದರು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿರುವ ತನಿಖಾ ಸಂಸ್ಥೆಗಳು ವಿದೇಶದಲ್ಲಿರುವ ಉಗ್ರ ಸಂಘಟನೆಗಳ ಚಟುವಟಿಕೆಗಳಲ್ಲದೇ, ದೇಶದಲ್ಲಿರುವ ನಿಷೇಧಿತ ಸಂಘಟನೆಗಳ ಸ್ಲಿàಪರ್‌ ಸೆಲ್‌ಗ‌ಳ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ದುಬೈ ವ್ಯಕ್ತಿಗಳೊಡನೆ ಸಂಪರ್ಕ
ಇತ್ತೀಚೆಗೆ ಎನ್‌ಐಎ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದ ಬೆಂಗಳೂರಿನ 7 ಮಂದಿ ಪಿಎಫ್ಐ ಮುಖಂಡರು ದುಬಾೖಯ ಕೆಲವು ವ್ಯಕ್ತಿಗಳ ಜತೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಜತೆಗೆ “ಹವಾಲಾ’ ಹಣ ವರ್ಗಾವಣೆ ನಡೆದಿರುವುದು ಖಾತ್ರಿಯಾಗಿದೆ. ಹೀಗಾಗಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

- ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.