400 ಕಿಮೀ ಗುರಿ ಛೇದಿಸುವ ಬ್ರಹ್ಮೋಸ್ ಪರೀಕ್ಷೆ ಯಶಸ್ವಿ
Team Udayavani, Nov 24, 2020, 9:31 PM IST
ನವದೆಹಲಿ: ನೆಲದಿಂದ ನೆಲಕ್ಕೆ ಛಿಮ್ಮುವ ಬ್ರಹ್ಮೋಸ್ ಕ್ಷಿಪಣಿಯ ಯಶಸ್ವೀ ಪರೀಕ್ಷೆಯನ್ನು ಮಂಗಳವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ನಡೆಸಲಾಗಿದೆ. ಚೀನಾ ಜತೆಗಿನ ಗಡಿ ಬಿಕ್ಕಟ್ಟಿನ ನಡುವೆಯೇ ಈ ಪರೀಕ್ಷೆ ನಡೆದಿದೆ.
ಹೊಸ ಪರೀಕ್ಷೆಯಲ್ಲಿ ಹಾಲಿ ಇರುವ 290 ಕಿಮೀ ಗುರಿಯ ಬದಲಾಗಿ 400 ಕಿಮೀ ದೂರದಲ್ಲಿರುವ ಶತ್ರು ನೆಲೆಯನ್ನು ಛೇದಿಸಲು ಅನುಕೂಲವಾಗುವಂತೆ ಪರಿಷ್ಕರಿಸಿ ಯಶಸ್ವೀ ಪರೀಕ್ಷೆ ನಡೆಸಲಾಗಿದೆ.
ಐಎಎಫ್ ಮತ್ತು ಭಾರತೀಯ ನೌಕಾ ಪಡೆ ಮುಂದಿನ ಕೆಲವು ದಿನಗಳ ಕಾಲ ಪ್ರತ್ಯೇಕವಾಗಿ ಬ್ರಹ್ಮೋಸ್ ಕ್ಷಿಪಣಿಯ ವಿವಿಧ ಆವೃತ್ತಿಗಳ ಪರೀಕ್ಷೆಯನ್ನು ನಡೆಸಲಿವೆ.
ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಕ್ಷಿಪಣಿಗಳನ್ನು ನಿಯೋಜನೆಗೊಳಿಸಿರುವಂತೆಯೇ ಮತ್ತಷ್ಟು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ:148 ದಿನಗಳಲ್ಲಿ 267 ಆ್ಯಪ್ಸ್ ಬ್ಲಾಕ್; ಮಂಗಳವಾರ ಬ್ಯಾನ್‌ಗೊಂಡ ಆ್ಯಪ್‌ಗಳ ವಿವರ ಇಲ್ಲಿದೆ
ಅ.18ರಂದು ನೌಕಾ ಪಡೆಗಾಗಿರುವ ಬ್ರಹ್ಮೋಸ್ ಕ್ಷಿಪಣಿಯ ಯಶಸ್ವೀ ಪರೀಕ್ಷೆ ನಡೆಸಲಾಗಿತ್ತು. ಅ.30ರಂದು ಐಎಎಫ್ ಕೂಡ ಅದೇ ಮಾದರಿ ಪರೀಕ್ಷೆ ನಡೆಸಿತ್ತು. ಎರಡು ತಿಂಗಳ ಅವಧಿಯಲ್ಲಿ ರೌದ್ರಮ್-1 ಸೇರಿದಂತೆ ಹಲವು ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ತಾಂಡವ’ ತಂಡಕ್ಕೆ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಕಾರ
ಹಿಂಸಾಚಾರದ ಎಫೆಕ್ಟ್: ಹೋರಾಟ ಇಬ್ಭಾಗ-ಪ್ರತಿಭಟನೆಯಿಂದ ಹಿಂದೆ ಸರಿದ 2 ಸಂಘಟನೆ
ಟ್ರ್ಯಾಕ್ಟರ್ ರಾಲಿ, ಹಿಂಸಾಚಾರ ಪ್ರಕರಣ: ಯಾದವ್, ಟಿಖಾಯತ್ ಸೇರಿ ಹಲವರ ವಿರುದ್ಧ ಕೇಸ್
ದೆಹಲಿ: ಟ್ರ್ಯಾಕ್ಟರ್ ರಾಲಿ ವೇಳೆ ಹಿಂಸಾಚಾರ; 200 ಮಂದಿ ದೆಹಲಿ ಪೊಲೀಸರ ವಶಕ್ಕೆ
ಭಾರತದ ಈ ನಗರದಲ್ಲಿ ‘100 ರೂ. ದಾಟಿದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ .?’