ಅಮೆರಿಕದಲ್ಲಿ ಭಾರತ ಮೂಲದ ದಂಪತಿ ಹತ್ಯೆ : ಅನಾಥವಾಗಿ ಅಳುತ್ತಿದ್ದ ನಾಲ್ಕು ವರ್ಷದ ಮಗು
Team Udayavani, Apr 9, 2021, 10:10 PM IST
ನ್ಯೂಯಾರ್ಕ್: ಅಮೆರಿಕದ ನ್ಯೂಜೆರ್ಸಿಯ ತಮ್ಮ ಮನೆಯಲ್ಲಿ ಭಾರತೀಯ ಮೂಲದ ಟೆಕ್ಕಿ ಮತ್ತು ಆತನ ಗರ್ಭಿಣಿ ಪತ್ನಿ ಶವವಾಗಿ ಪತ್ತೆಯಾಗಿದ್ದಾರೆ.
ಬಾಲ್ಕನಿಯಲ್ಲಿ ಅನಾಥಳಾಗಿ ನಿಂತು ಅಳುತ್ತಿದ್ದ 4 ವರ್ಷದ ಮಗಳಿಂದ ಇವರ ಸಾವಿನ ವಿಚಾರ ಅಕ್ಕ ಪಕ್ಕದ ಮನೆಯವರಿಗೆ ತಿಳಿದುಬಂದಿದೆ.
ಬಾಲಾಜಿ ಭರತ್ ರುದ್ರಾವರ್ (32), ಆರತಿ (32) ಮೃತ ದುರ್ದೈವಿ ದಂಪತಿ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ನಂತರ ಮನೆಯೊಳಗೆ ಪ್ರವೇಶಿಸಿ, ಪುಟಾಣಿಯನ್ನು ರಕ್ಷಿಸಿದ್ದಾರೆ. ಸಾವಿಗೆ ನಿಶ್ಚಿತ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ :ಮಹಾರಾಷ್ಟ್ರದಲ್ಲಿಂದು ಕೋವಿಡ್ ಸ್ಫೋಟ : ಒಂದೇ ದಿನ ಬರೋಬ್ಬರಿ 58,993 ಮಂದಿಗೆ ಕೋವಿಡ್
ಬಾಲಾಜಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮೂಲದವರಾಗಿದ್ದು, ಇವರ ತಂದೆ ಮುಂಬೈನಲ್ಲಿ ಉದ್ಯಮಿ. “ನನ್ನ ಮಗ- ಸೊಸೆ ತುಂಬಾ ಅನ್ಯೋನ್ಯವಾಗಿದ್ದರು. ಸೊಸೆ 7 ತಿಂಗಳ ಗರ್ಭಿಣಿ. ನೆರೆಹೊರೆಯವರ ಜೊತೆಗೂ ಚೆನ್ನಾಗಿದ್ದರು. ಸಾವಿನ ಬಗ್ಗೆ ಅಮೆರಿಕ ಪೊಲೀಸ್ ತನಿಖೆ ನಡೆಸುವ ಭರವಸೆ ನೀಡಿದೆ’ ಎಂದು ತಂದೆ ತಿಳಿಸಿದ್ದಾರೆ. ಇವರ ಮೃತದೇಹ ಭಾರತ ತಲುಪಲು ಇನ್ನೂ 8-10 ದಿನಗಳು ಬೇಕಾಗುತ್ತವೆ ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ