ಇಯರ್ ಎಂಡ್ ಪರಿಣಾಮ: ಮುಂಬಯಿ ಷೇರು ಪೇಟೆ ಸೆನ್ಸೆಕ್ಸ್ 125 ಅಂಕ ಏರಿಕೆ
ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಆರ್ ಐಎಲ್ ಷೇರುಗಳು ನಷ್ಟ ಕಂಡಿದೆ.
Team Udayavani, Dec 30, 2021, 12:22 PM IST
ಮುಂಬಯಿ: ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಗುರುವಾರ(ಡಿಸೆಂಬರ್ 30) ಆರಂಭಿಕವಾಗಿ 125 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ನಡೆಸಿತ್ತು.
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 125.24 ಅಂಕಗಳಷ್ಟು ಏರಿಯಾಗಿದ್ದು, 57,931.73 ಅಂಕಗಳಲ್ಲಿ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 30.20 ಅಂಕಗಳು ಏರಿಕೆಯಾಗಿದ್ದು, 17,243.80ರ ಗಡಿ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಟಾಟಾ ಸ್ಟೀಲ್, ವಿಪ್ರೋ, ಮಾರುತಿ ಸುಜುಕಿ, ಭಾರ್ತಿ ಏರ್ ಟೆಲ್, ಟೆಕ್ ಮಹೀಂದ್ರ, ಟೈಟಾನ್ ಕಂಪನಿ, ಐಟಿಸಿ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಬಜಾಜ್ ಫಿನ್ ಸರ್ವ್, ಸನ್ ಫಾರ್ಮಾ, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಆರ್ ಐಎಲ್ ಷೇರುಗಳು ನಷ್ಟ ಕಂಡಿದೆ.
ಬುಧವಾರ (ಡಿಸೆಂಬರ್ 29) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 90.99 ಅಂಕಗಳಷ್ಟು ಇಳಿಕೆಯೊಂದಿಗೆ 57,806.49 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 19.70 ಅಂಕ ಇಳಿಕೆಯಾಗಿದ್ದು, 17,213.60 ಅಂಕಗಳ ಮಟ್ಟ ತಲುಪಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 80 ರೂ.ಗೆ ಕುಸಿಯುವತ್ತ ರೂಪಾಯಿ
300 ಅಂಕಕ್ಕಿಂತಲೂ ಅಧಿಕ ಏರಿಕೆಯೊಂದಿಗೆ ಬಾಂಬೆ ಷೇರುಪೇಟೆ ವಹಿವಾಟು ಅಂತ್ಯ; ನಿಫ್ಟಿ ಜಿಗಿತ
5ರ ಸಂಭ್ರಮಕ್ಕೆ ಜಿಎಸ್ಟಿ ಬಂಪರ್: ಜೂನ್ನಲ್ಲಿ 1.44 ಲಕ್ಷ ಕೋಟಿ ರೂ. ಜಮೆ
ಜು. 15ರಂದು ಇಂಡಿಯನ್ ಎಂಬೆಡೆಡ್ ವ್ಯಾಲ್ಯೂ ಘೋಷಣೆ ಸಾಧ್ಯತೆ: ಎಲ್ಐಸಿ
ಚಿನ್ನ, ತೈಲ ಆಮದು ನಿಯಂತ್ರಣಕ್ಕೆ ಶುಲ್ಕಾಸ್ತ್ರ