
Inflation: ಲಂಕಾವನ್ನು ಮೀರಿಸಿ ಪಾಕ್‌ನಲ್ಲಿ ಹಣದುಬ್ಬರ ತಾರಕಕ್ಕೆ!
ಏಷ್ಯಾದಲ್ಲೇ ಗರಿಷ್ಠ -ಮೇನಲ್ಲಿ ಶೇ.37.97ರಷ್ಟು ಹೆಚ್ಚಳ
Team Udayavani, Jun 3, 2023, 7:31 AM IST

ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪಾಕಿಸ್ತಾನದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಮೇ ವೇಳೆಗೆ ದೇಶದ ಆರ್ಥಿಕ ಹಣದುಬ್ಬರ ಶೇ.37.97ರ ಏರಿಕೆಯೊಂದಿಗೆ ವಿಕೋಪಕ್ಕೆ ಹೋಗಿದೆ. ಅಲ್ಲದೇ, ದಕ್ಷಿಣ ಏಷ್ಯಾದಲ್ಲೇ ಇದು ಅತಿಹೆಚ್ಚು ಹಣದುಬ್ಬರ ದಾಖಲಿಸಿರುವ ದೇಶವೆಂದು ದತ್ತಾಂಶಗಳು ಬಹಿರಂಗಪಡಿಸಿವೆ.
ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದ ನೆರೆ ರಾಷ್ಟ್ರ ಲಂಕಾದ ವಾರ್ಷಿಕ ಹಣದುಬ್ಬರ ಪ್ರಮಾಣ ಶೇ.25.2ರಷ್ಟಿತ್ತು. ಆದರೀಗ ಪಾಕಿಸ್ತಾನದ ಪರಿಸ್ಥಿತಿ ಲಂಕಾವನ್ನೂ ಮೀರಿಸಿದೆ. ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, ರೂಪಾಯಿ ಮೌಲ್ಯ ಕುಸಿತ, ಬಾಹ್ಯ ಸಾಲ, ವಿದೇಶಿ ವಿನಿಮಯ ಬಾಕಿ ಪಾವತಿಯಂಥ ಸಮಸ್ಯೆ ಹಾಗೂ ಜಾಗತಿಕ ಇಂಧನ ಬಿಕ್ಕಟ್ಟು, 2020ರಲ್ಲಿ ಪಾಕ್‌ನಲ್ಲಿ ಸಂಭವಿಸಿದ ಪ್ರವಾಹಗಳಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಾಕ್‌ನಲ್ಲಿ ಹಣದುಬ್ಬರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ಇದಿಷ್ಟೇ ಅಲ್ಲದೇ, ವರ್ಷದಿಂದ ವರ್ಷಕ್ಕೆ ಹಣದುಬ್ಬರದ ಪ್ರಮಾಣ ಶೇ.50ರಷ್ಟು ಏರಿಕೆಯಾಗಿದ್ದು, ಆಹಾರ ಪದಾರ್ಥಗಳಾದ ಆಲೂಗಡ್ಡೆ, ಗೋಧಿ ಹಿಟ್ಟು, ಚಹಾ, ಮೊಟ್ಟೆ, ಅಕ್ಕಿಯ ಬೆಲೆ ತೀವ್ರ ಏರಿಕೆಯಾಗಿದೆ. ಆಹಾರ ಪದಾರ್ಥಗಳನ್ನು ಹೊರತುಪಡಿಸಿದರೆ ಟೆಕ್ಸ್ಟ್ ಬುಕ್ಸ್‌ಗಳು, ಸ್ಟೇಷನರಿ ವಸ್ತುಗಳು, ಇಂಧನ, ಸಾಬೂನು, ಬೆಂಕಿ ಪಟ್ಟಣದ ಬೆಲೆಯೂ ತೀವ್ರ ಹೆಚ್ಚಳವಾಗಿದೆ.
ಬೆಲೆ ಹೆಚ್ಚಳ ಎಷ್ಟೆಷ್ಟು ?
ಆಲ್ಕೋಹಾಲ್ ಪಾನೀಯಗಳು, ತಂಬಾಕು: ಶೇ.123.6
ಮನರಂಜನಾ ಕ್ಷೇತ್ರಗಳಲ್ಲಿನ ಬೆಲೆ: ಶೇ.72.17
ಸಾರಿಗೆ ವೆಚ್ಚಗಳಲ್ಲಿನ ಹೆಚ್ಚಳ: ಶೇ.59.92
ದವಸ ಧಾನ್ಯಗಳ ಬೆಲೆ: ಶೇ.50
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khalistani ಉಗ್ರರ ವರ್ತನೆಗೆ ಸ್ಕಾಟ್‌ಲ್ಯಾಂಡ್ ಗುರುದ್ವಾರ ತೀವ್ರ ಖಂಡನೆ;ಪೊಲೀಸ್ ತನಿಖೆ

Multan ; ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿಯ ಬಂಧನ

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

Pakistan; ಬಲೂಚಿಸ್ಥಾನ ಬಾಂಬ್ ದಾಳಿಗೆ ಭಾರತ ಕಾರಣ; ಪಾಕ್ ಆರೋಪ

Khalistani: ಇಂಗ್ಲೆಂಡ್‌ನಲ್ಲೂ ಖಲಿಸ್ಥಾನಿ ಪುಂಡಾಟ
MUST WATCH
ಹೊಸ ಸೇರ್ಪಡೆ

Khalistani ಉಗ್ರರ ವರ್ತನೆಗೆ ಸ್ಕಾಟ್‌ಲ್ಯಾಂಡ್ ಗುರುದ್ವಾರ ತೀವ್ರ ಖಂಡನೆ;ಪೊಲೀಸ್ ತನಿಖೆ

Sagara ಒಂದು ಹೆಬ್ಬಾವಿನ ಕಥೆ; ಬಾಯಿಗೆ ಸಿಕ್ಕಿದ್ದು ಹೊಟ್ಟೆಗಿಲ್ಲ!

Panaji ಮತ್ತೆ ಗೋವಾದಲ್ಲಿ ಮಳೆಯ ಆರ್ಭಟ; ಹಲವೆಡೆ ರಸ್ತೆಗಳು ಜಲಾವೃತ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ