ಮೊಣಕೈಗೆ ಗಾಯ : ಬಾಂಗ್ಲಾ ಸರಣಿಯಿಂದ ಕೇನ್ ವಿಲಿಯಮ್ಸ್ ಔಟ್
Team Udayavani, Mar 10, 2021, 1:05 AM IST
ವೆಲ್ಲಿಂಗ್ಟನ್ : ಮೊಣಕೈ ಗಾಯದಿಂದಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಇದನ್ನು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿತು.
ರವಿವಾರವಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ವಿಲಿಯಮ್ಸನ್ ಸಾರಥ್ಯದ ನ್ಯೂಜಿಲ್ಯಾಂಡ್ 3-2ರಿಂದ ಗೆದ್ದಿತ್ತು. ಈ ಸರಣಿ ವೇಳೆ ವಿಲಿಯಮ್ಸನ್ ಅವರ ಮೊಣಕೈಗೆ ನೋವಾಗಿತ್ತು. ಇದೇನೂ ಗಂಭೀರ ಸಮಸ್ಯೆ ಅಲ್ಲವಾದರೂ ಮುಂಬರುವ ಪ್ರಮುಖ ಸರಣಿಗಳನ್ನು ಗಮನದಲ್ಲಿರಿಸಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಕಿವೀಸ್ ತಂಡದ ಪ್ರಧಾನ ಕೋಚ್ ಗ್ಯಾರಿ ಸ್ಟೆಡ್ ತಿಳಿಸಿದ್ದಾರೆ.