
ಇಂಟರ್‌ಪೋಲ್ ವಾಂಟೆಡ್ ಲಿಸ್ಟ್‌ನಲ್ಲಿ ಚೋಕ್ಸಿ ಇಲ್ಲ !
Team Udayavani, Mar 21, 2023, 7:45 AM IST

ಸೇಂಟ್‌ಜಾನ್ಸ್: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ.ವಂಚಿಸಿ,ಭಾರತದಿಂದ ಪರಾರಿಯಾಗಿರುವ ವಂಚಕ ಮೆಹುಲ್ ಚೋಕ್ಸಿಯನ್ನು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆ ಇಂಟರ್‌ಪೋಲ್ ತನ್ನ ವಾಂಟೆಡ್ ಪಟ್ಟಿಯಿಂದ ತೆಗೆದುಹಾಕಿದೆ.
ಈ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕ್ರಮದಿಂದಾಗಿ ಚೋಕ್ಸಿ ಭಾರತಕ್ಕೆ ಗಡಿಪಾರಾಗುವ ಮುಂಚೆಯೇ ಪ್ರಸಕ್ತ ತಾನಿರುವ ದೇಶದಿಂದಲೂ ಪರಾರಿಯಾಗುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಚೋಕ್ಸಿಯನ್ನು ಭಾರತದ ತನಿಖಾ ಸಂಸ್ಥೆಗಳು ಅಪಹರಿಸಲು ಪ್ರಯತ್ನಿಸಿವೆ ಎಂದು ತಪ್ಪಾಗಿ ಅರ್ಥೈಸಿಕೊಂಡು, ಇಂಟರ್‌ಪೋಲ್ ಈ ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
