
iOS 17 ವರ್ಷನ್ ಬಿಡುಗಡೆ
Team Udayavani, Jun 7, 2023, 8:16 AM IST

ಹೊಸದಿಲ್ಲಿ: ತನ್ನ ಹೊಚ್ಚ ಹೊಸ ಐಒಎಸ್ 17 ವರ್ಷನ್ ಬಿಡುಗಡೆಯಾಗಲಿದೆ ಎಂದು ಆ್ಯಪಲ್ ಕಂಪನಿಯು ಘೋಷಿಸಿದೆ.
ಇದರಿಂದ ಹಳೆಯ ಐಫೋನ್‌ಗಳು ಹೊಸ ಅಪ್‌ಡೇಟ್‌ಗಳನ್ನು ಪಡೆಯುವುದರಿಂದ ವಂಚಿತವಾಗಲಿವೆ. ಯಾವೆಲ್ಲ ಹಳೆಯ ಐಫೋನ್‌ಗಳು ಐಒಎಸ್ 17 ವರ್ಷನ್ ಅಪ್‌ಡೇಟ್ ಪಡೆಯುವುದಿಲ್ಲ ಎಂಬುದನ್ನು ಆ್ಯಪಲ್ ಪಟ್ಟಿ ಮಾಡಿದೆ. ಆದರೆ ಈ ಐಫೋನ್‌ಗಳಿಗೆ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ಸೆಕ್ಯೂರಿಟಿ ಅಪ್‌ಡೇಟ್‌ಗಳು ಮಾತ್ರ ಲಭ್ಯವಾಗಲಿವೆ. ಈ ವರ್ಷದಲ್ಲೇ ಹೊಸ ಮಾಡೆಲ್ ಐಫೋನ್‌ಗಳು ಐಒಎಸ್ 17 ವರ್ಷನ್ ಅಪ್‌ಡೇಟ್ ಪಡೆಯಲಿವೆ. ಇದೇ ವೇಳೆ ಐಪೋನ್ ಎಕ್ಸ್, ಐಪೋನ್ 8, ಐಪೋನ್ 8 ಪ್ಲಸ್, ಐಪೋನ್ ಎಸ್‌ಇ ಫಸ್ಟ್-ಜನರೇಶನ್ ಮೊಬೈಲ್‌ಗಳಿಗೆ ಐಒಎಸ್ 17 ವರ್ಷನ್ ಅಪ್‌ಡೇಟ್ ಸೌಲಭ್ಯ ಸಿಗುವುದಿಲ್ಲ ಎಂದು ಕಂಪನಿ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
