
IPL: ಧೋನಿಯ ಬಗ್ಗೆ ಜಡೇಜಾ ಟ್ವೀಟ್… ʻಮಾಹಿ ಭಾಯಿ…ನಿಮಗಾಗಿ..ʼ- ಏನಿದು?
Team Udayavani, May 30, 2023, 8:27 PM IST

ಚೆನ್ನೈ: ಅಂತೂ 2023ರ ಐಪಿಎಲ್ ಪಂದ್ಯಾಕೂಟಕ್ಕೆ ಅಧಿಕೃತ ತೆರೆ ಬಿದ್ದಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಅತ್ಯಮೂಲ್ಯ 10 ರನ್ ಬಾರಿಸುವ ಮೂಲಕ ಜಡೇಜಾ ಸಿಎಸ್‌ಕೆ ಪಾಲಿಗೆ ಹೀರೋ ಆಗಿಬಿಟ್ಟಿದ್ದರು. ಅವರ ಈ ಫಿನಿಶಿಂಗ್‌ನಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಐಪಿಎಲ್ ಇತಿಹಾಸದ 5 ನೇ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಈ ಪಂದ್ಯದ ಬಳಿಕ ಈ ಕುರಿತು ಸಿಎಸ್‌ಕೆ ಆಲ್‌ರೌಂಡರ್ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಭಾವನಾತ್ಮಕ ಪೋಸ್ಟ್‌ನಲ್ಲಿ ಧೋನಿಯ ಬಗ್ಗೆ ಮಾತನಾಡಿದ್ದಾರೆ. ಇದೀಗ ಧೋನಿಯ ಕುರಿತಾಗಿ ಜಡೇಜಾ ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ʻನಾವು ಇದನ್ನು ಮಾಡಿದ್ದು ಒಬ್ಬನೇ ಒಬ್ಬನಿಗಾಗಿ. ಎಂ.ಎಸ್ ಧೋನಿಗಾಗಿ. ಮಾಹಿ ಭಾಯಿ, ನಿಮಗಾಗಿಯಾದರೆ ಏನು ಬೇಕಾದರೂ..’ ಎಂಬುದಾಗಿ ಜಡೇಜಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಧೋನಿ ಮತ್ತು ಜಡೇಜಾ ನಡುವೆ ಎಲ್ಲವೂ ಅಂದುಕೊಂಡಷ್ಟು ಸರಿಯಾಗಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿರುವ ಮಧ್ಯೆಯೇ ಜಡೇಜಾ ಅವರು ಈ ಟ್ವೀಟ್ ಮಾಡಿದ್ದು ಅಭಿಮಾನಿಗಳನ್ನು ಫುಲ್ ಖುಷ್ ಮಾಡಿದೆ.
ಇದನ್ನೂ ಓದಿ: New Delhi: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ…
We did it for ONE and ONLY “MS DHONI.🏆 mahi bhai aapke liye toh kuch bhi…❤️❤️ pic.twitter.com/iZnQUcZIYQ
— Ravindrasinh jadeja (@imjadeja) May 30, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games 10,000 ಮೀ. ರೇಸ್: ಕಾರ್ತಿಕ್, ಗುಲ್ವೀರ್ ಅವಳಿ ಪದಕದ ಹೀರೋಗಳು

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

World Cup ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ, ನನ್ನ ಪ್ರಧಾನ ಧ್ಯೇಯ..: ಆರ್.ಅಶ್ವಿನ್

Gold medal; ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ: ರೋಹನ್ ಬೋಪಣ್ಣ