ಚಂದ್ರನಿಗೆ ಅಪ್ಪಳಿಸಿದ್ದೇ ರಶೀದ್ ವೈಫಲ್ಯಕ್ಕೆ ಕಾರಣ?
Team Udayavani, Apr 27, 2023, 8:08 AM IST
ಟೋಕ್ಯೋ: ಚಂದ್ರನ ಅಂಗಳದಲ್ಲಿ ಯುಎಇ ಹೆಜ್ಜೆ ಮೂಡಿಸಲು ಬಾಹ್ಯಾಕಾಶಕ್ಕೆ ಚಿಮ್ಮಿದ್ದ ಯುಎಇಯ ರಶೀದ್ ರೋವರ್ ತನ್ನ ಉದ್ದೇಶಿತ ಗುರಿ ಸಾಧಿಸಿದ್ದ. ಇದಕ್ಕೆ ಕಾರಣವೇನು? ಈ ರೋವರನ್ನು ಜಪಾನಿನ ಹಕುಟೋ-ಆರ್ ಲ್ಯಾಂಡರ್ ಹೊತ್ತೂಯ್ದಿತ್ತು. ಹಕುಟೊ ಚಂದ್ರನ ಮೇಲ್ಮೆ„ ಮೇಲೆ ಅಪ್ಪಳಿಸಿದ ಪರಿಣಾಮ ಕಾರ್ಯಾಚರಣೆ ವಿಫಲಗೊಂಡಿರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸ್ಪೇಸೆಕ್ಸ್ ಬಾಹ್ಯಾಕಾಶ ನೌಕೆ ಮೂಲಕ ಉಡಾವಣೆಗೊಂಡಿದ್ದ ಹಕುಟೋ ಎಂಬ ಲ್ಯಾಂಡರ್, ರಶೀದ್ ಎನ್ನುವ ರೋವರ್ ಅನ್ನು ಚಂದ್ರನ ಮೇಲ್ಮೈ ತಲುಪಿಸಲು ಉದ್ದೇಶಿಸಲಾಗಿತ್ತು. ಆದರೆ, ಲ್ಯಾಂಡರ್ ಚಂದ್ರನ ಮೇಲ್ಮೆ ತಲುಪುವ ವೇಳೆಗೆ ಸಂಪರ್ಕ ಕಳೆದುಕೊಂಡಿತ್ತು.
ರೋವರ್ ಕಾರ್ಯಾರಂಭಗೊಳ್ಳಲು ಸಾಫ್ಟ್ ಲ್ಯಾಂಡಿಂಗ್ ಆಗುವ ಬದಲು ಕ್ರ್ಯಾಶ್ ಲ್ಯಾಂಡಿಂಗ್ ಆಗಿದೆ ಎನ್ನಲಾಗಿದೆ. ಅಂದುಕೊಂಡಂತೆ ಯೋಜನೆ ಕಾರ್ಯಗತಗೊಂಡು, ರಶೀದ್ ಚಂದ್ರನನ್ನು ತಲುಪಿದ್ದರೆ, ಯುಎಇ ಚಂದ್ರನಲ್ಲಿಗೆ ಕಾಲಿಟ್ಟ ವಿಶ್ವದ ನಾಲ್ಕನೇ ರಾಷ್ಟ್ರವೆಂಬ ಖ್ಯಾತಿಗೆ ಪಾತ್ರವಾಗಿರುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ