ಇದು ಸಮತೋಲಿತ ಬಜೆಟ್‌: ಡಾ| ಬಂಗೇರ


Team Udayavani, Feb 2, 2021, 6:30 AM IST

ಇದು ಸಮತೋಲಿತ ಬಜೆಟ್‌: ಡಾ| ಬಂಗೇರ

ಕೋವಿಡ್‌ ಸಂಕಷ್ಟ ಕಾಲದ ನಡುವೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಮಂಡಿಸಿರುವ 2021 ಬಜೆಟ್‌ ಆತ್ಮನಿರ್ಭರ ಭಾರತದ ಹಾದಿಯಲ್ಲಿ ರೂಪಿತವಾಗಿದೆ. ಆರ್ಥಿಕತೆಯ ವಿ ಆಕಾರದ ಚೇತರಿಕೆ ಹಾಗೂ ವ್ಯಾಕ್ಸಿನ್‌ ಎಂಬ ವಿ ಇವೆರಡೂ ಅಂಶಗಳನ್ನು ಸರಿಯಾಗಿ ಜೋಡಿಸಿ ದರೆ ಭಾರತ ಎತ್ತರಕ್ಕೇರುತ್ತದೆ ಎಂದು ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಡಾ| ಜೆ. ಆರ್‌. ಬಂಗೇರ ಹೇಳಿದರು.

ಕೇಂದ್ರ ಬಜೆಟ್‌ ಬಗ್ಗೆ ಉದಯವಾಣಿ ಸಂವಾ ದ ದಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ದೇಶದ ಆರ್ಥಿಕತೆ ಜರ್ಜರಿತ ವಾಗಿದ್ದಂಥ ವೇಳೆ ಮಂಡಿಸಲಾಗಿರುವ ಈ ಬಜೆಟ್‌ ಆಶಾದಾಯಕವಾಗಿದೆ ಎಂದರು.

ಕೊರೊನಾ ಬಂದ ನಂತರ ಕೇವ ಲ ಆರೇ ತಿಂಗಳಲ್ಲಿ ಕೊರೊನಾ ಲಸಿಕೆ ತಯಾರಿಸಿ ಜನರ ಆತಂಕವನ್ನು ದೂರ ಮಾಡಲಾಗಿದೆ. ಇದೇ ವೇಳೆಯಲ್ಲೇ ಕೊರೊನಾ ಲಸಿಕೆ ಗಾಗಿ ಬಜೆಟ್‌ನಲ್ಲಿ 35 ಸಾವಿರ ಕೋಟಿ ನೀಡಿದ್ದು ಉತ್ತಮವಾದ ಬೆಳವಣಿಗೆ ಎಂದು ಶ್ಲಾ ಸಿದರು.

ಬಜೆಟ್‌ನಲ್ಲಿ 2 ಸಾವಿರ ಕೋಟಿ ರೂ ಹೂಡಿ ಕೆಯ ಮೂಲಕ 7 ಬಂದರುಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳ ಲಾಗಿದೆ. ಆದರೆ ಅದರಲ್ಲಿ ನಮ್ಮ ರಾಜ್ಯದ ಬಂದರಿನ ಹೆಸರೇ ಇಲ್ಲ. ಹೀಗಾಗಿ, ನಮ್ಮ ಜನಪ್ರತಿನಿಧಿಗಳು ಮಂಗಳೂರು ಬಂದರನ್ನು ಅಭಿವೃದ್ಧಿ ಮಾಡಬೇಕು ಎಂದು ಕೇಂದ್ರಕ್ಕೆ ಕೇಳಬೇಕು ಎಂದ ಡಾ. ಬಂಗೇರ, ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯ ವಿಚಾರದಲ್ಲೂ ಕೆಲವು ಪ್ರಶ್ನೆಗಳನ್ನು ಎದುರಿಟ್ಟರು. “”ಬ್ಯಾಡ್‌ ಬ್ಯಾಂಕ್‌ ಅಲ್ಲ, ಪುನಃಶ್ಚೇತನ ಬ್ಯಾಂಕ್‌ ಎಂದು ಅದನ್ನು ಕರೆಯಬೇಕು. ಅನುತ್ಪಾದಕ ಆಸ್ತಿಯನ್ನೆಲ್ಲ ಒಂದೆಡೆ ಹಾಕಿದರೆ, ಅಲ್ಲೂ ಎನ್‌ಪಿಎ ಸೃಷ್ಟಿಯಾಗುವುದಿಲ್ಲ ಎನ್ನುವುದಕ್ಕೆ ಏನು ಖಾತ್ರಿ? ಎನ್‌ಪಿಎ ಹೆಚ್ಚಾಗಿ ಸಣ್ಣ ಸಣ್ಣ ಉದ್ಯಮಿದಾರರ, ಕೈಗಾರಿಕೆಗಳ ಸಾಲವಲ್ಲ ಅದು ದೊಡ್ಡವವರಿಂದ ಸೃಷ್ಟಿಯಾದದ್ದು ” ಎಂದರು.

ಮುಂದುವರಿದು, “”ಕೋವಿಡ್‌ ಸಮಯದಲ್ಲಿ ಲಕ್ಷಾಂತರ ಜನ ನಿರುದ್ಯೋಗಿಗಳಾಗಿದ್ದಾರೆ. ಅಂಥವರಿಗಾಗಿಯೇ ವಿಶೇಷ ಅನುದಾನ ಘೋ ಷಣೆ ಮಾಡ ಬೇಕಿತ್ತು. ಅಂಥವರಿಗೆ ವಿಶೇಷ ಯೋಜ ನೆಯನ್ನು ರೂಪಿಸಿದ್ದರೆ ಅನುಕೂಲವಾಗುತ್ತಿತ್ತು.” ಎಂದರು. “”ಕೇಂದ್ರ ಸಣ್ಣ ಸಣ್ಣ ಕೈಗಾರಿಕೆಗಳನ್ನು ಮರೆ ಯುತ್ತಿದೆ. ದೊಡ್ಡ ಕೈಗಾರಿಕೆಗಳಿಗೆ ಮಾತ್ರ ಅನಿಲ ಸಂಪರ್ಕ ನೀಡುತ್ತಿರು ವುದರಿಂದ ಸಣ್ಣ ಕೈಗಾರಿಕೆ ಗಳಿಗೆ ಹೊಡೆತ ಬೀಳುತ್ತಿದೆ. ಹಾಗೆ ಮಾಡುವ ಬದಲು ಸಣ್ಣ ಕೈಗಾರಿಕೆಗಳಿಗೂ ಅನಿಲ ಸಂಪರ್ಕ ನೀಡಿದರೆ ಅವುಗಳು ಸಹ ಉಳಿದುಕೊಳ್ಳುತ್ತವೆ.

ಬಜೆಟ್‌ನಲ್ಲಿ ರೈಲು, ಮೆಟ್ರೋ, ರಸ್ತೆ, ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ಸಾವಿರಾರೂ ಕೋಟಿ ರೂ. ಬಿಡುಗಡೆ ಮಾಡಿರುವ ಸರ್ಕಾರ ಆ ಯೋಜನೆಗಳನ್ನು ಶೀಘ್ರ ಮುಗಿಸ ಬೇಕು. ಆ ನಿಟ್ಟಿನಲ್ಲಿ ಹಣ ಬಿಡುಗಡೆ ಮಾಡಿದರೆ ಕಾಮಗಾರಿ ಮುಗಿಯುತ್ತದೆ. ಕೆಲವು ಯೋಜನೆ ಗಳು ಕುಂಟುತ್ತಾ ಸಾಗುತ್ತವೆ ಆ ರೀತಿಯಾಗದಂತೆ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟರೆ ಜನ ಸರ್ಕಾರದ ಕೆಲಸಗಳನ್ನು ಪ್ರಶಂಸಿಸುತ್ತಾರೆ” ಎಂದು ಹೇಳಿದರು.

ಟಾಪ್ ನ್ಯೂಸ್

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

ಆಘಾತ: ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

ಹೆಲಿಕಾಪ್ಟರ್ ದುರಂತ: ಸಾವಿನ ಸಂಖ್ಯೆ 13ಕ್ಕೇರಿಕೆ; DNA ಪರೀಕ್ಷೆ ಮೂಲಕ ದೇಹಗಳ ಗುರುತು ಪತ್ತೆ

ಹೆಲಿಕಾಪ್ಟರ್ ದುರಂತ: ಸಾವಿನ ಸಂಖ್ಯೆ 13ಕ್ಕೇರಿಕೆ; DNA ಪರೀಕ್ಷೆ ಮೂಲಕ ದೇಹಗಳ ಗುರುತು ಪತ್ತೆ

ಹೂಡಿಕೆದಾರರಿಗೆ ಲಾಭ: 1 ಸಾವಿರಕ್ಕೂ ಅಧಿಕ ಅಂಕ ಜಿಗಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್

ಹೂಡಿಕೆದಾರರಿಗೆ ಲಾಭ: 1 ಸಾವಿರಕ್ಕೂ ಅಧಿಕ ಅಂಕ ಜಿಗಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್

ಜಗತ್ತಿನ 57 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ

ಜಗತ್ತಿನ 57 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ

ವಿಜಯ್ ಹಜಾರೆ ಟ್ರೋಪಿಯಲ್ಲಿ ಶುಭಾರಂಭ: 236 ರನ್ ಅಂತರದಿಂದ ಗೆದ್ದ ಕರ್ನಾಟಕ ತಂಡ

ವಿಜಯ್ ಹಜಾರೆ ಟ್ರೋಪಿಯಲ್ಲಿ ಶುಭಾರಂಭ: 236 ರನ್ ಅಂತರದಿಂದ ಗೆದ್ದ ಕರ್ನಾಟಕ ತಂಡ

111-dfds

2015 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಪಾರಾಗಿದ್ದ ಬಿಪಿನ್ ರಾವತ್

Untitled-1

ಕಾರವಾರ : ಡಿಎಆರ್ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ffdsf-aa

ಮಂಗಳೂರು: ಮತಾಂತರ ಯತ್ನ ನಾಲ್ವರ ಸಾವಿಗೆ ಕಾರಣವಾಯ್ತೇ?; ಮಹಿಳೆ ವಶಕ್ಕೆ

h d kumaraswamy

ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ.. ಆಟ ಈಗ ಆರಂಭ..!: ಎಚ್ ಡಿಕೆ

ಸಿಎಂ ಬೊಮ್ಮಾಯಿ

ರಾಜ್ಯಕ್ಕೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ: ಸಿಎಂ ಬೊಮ್ಮಾಯಿ

ಕೋವಿಡ್‌ ಹೆಚ್ಚಳ ಹಿನ್ನೆಲೆ: ಶಾಲೆ ಮುಚ್ಚಬೇಡಿ; ಸುರಕ್ಷೆಗೆ ಒತ್ತು ನೀಡಿ

ಕೋವಿಡ್‌ ಹೆಚ್ಚಳ ಹಿನ್ನೆಲೆ: ಶಾಲೆ ಮುಚ್ಚಬೇಡಿ; ಸುರಕ್ಷೆಗೆ ಒತ್ತು ನೀಡಿ

ವೃತ್ತಿಪರ ಕೋರ್ಸ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ ಆಯ್ಕೆಯ ಟ್ರೆಂಡ್‌

ವೃತ್ತಿಪರ ಕೋರ್ಸ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ ಆಯ್ಕೆಯ ಟ್ರೆಂಡ್‌

MUST WATCH

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

udayavani youtube

ಎಚ್ಚರ… : ಮಸೀದಿಗಲ್ಲಿ ರಸ್ತೆಯಲ್ಲೊಂದು ಮಕ್ಕಳ ಪ್ರಾಣ ತೆಗೆಯುವ ಗುಂಡಿ

ಹೊಸ ಸೇರ್ಪಡೆ

ಶಿಗ್ಗಾವಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ

ಶಿಗ್ಗಾವಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ

ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿ

ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿ

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

ಆಘಾತ: ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

ವೈದ್ಯ ವೃತ್ತಿಯಲ್ಲಿ ಅತಿಯಾದ ವ್ಯಾಪಾರಿ ಮನೋಭಾವ; ಜಗದ್ಗುರು ಶಿವಾನಂದ ಸ್ವಾಮಿ

ವೈದ್ಯ ವೃತ್ತಿಯಲ್ಲಿ ಅತಿಯಾದ ವ್ಯಾಪಾರಿ ಮನೋಭಾವ; ಜಗದ್ಗುರು ಶಿವಾನಂದ ಸ್ವಾಮಿ

ಉಪವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ

ಉಪವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.