ಅವಂತಿಪೋರಾದಲ್ಲಿ ಸ್ಫೋಟಕ ಸಹಿತ ಇಬ್ಬರು ಜೈಶ್ ಉಗ್ರರ ಸಹಚರರ ಬಂಧನ
Team Udayavani, Jan 17, 2022, 7:32 PM IST
ಶ್ರೀ ನಗರ: ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ಇಬ್ಬರು ಭಯೋತ್ಪಾದಕ ಸಹಚರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಆವಂತಿಪೋರಾ ಪೊಲೀಸರು ಸೇನೆ ಮತ್ತು ಸಿ ಆರ್ ಪಿಎಫ್ ಪಡೆಗಳ ಜತೆಗೆ ಕಾರ್ಯಾಚರಣೆ ನಡೆಸಿ, ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಇ -ಮೊಹಮ್ಮದ್ ನೊಂದಿಗೆ ಸಂಬಂಧ ಹೊಂದಿದ್ದ ಇಬ್ಬರು ಭಯೋತ್ಪಾದಕರ ಸಹಚರರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಬಳಿಯಿದ್ದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಇಬ್ಬರು ಉಗ್ರಗಾಮಿ ಸಹಚರರನ್ನು ನಾರಿಸ್ಥಾನ್ ತ್ರಾಲ್ ನ ಜಾಹಿದ್ ಅಹ್ಮದ್ ಲೋನ್ ಮತ್ತು ನೂರ್ ಪೋರಾ ಅವಂತಿಪೋರಾದ ಶಕೀಲ್ ಅಹ್ಮದ್ ಮಲಿಕ್ ಎಂದು ಗುರುತಿಸಲಾಗಿದ್ದು, ಅವರನ್ನು ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಬಂಧಿಸಲಾಗಿದೆ.
ಬಂಧಿತರು ಭಯೋತ್ಪಾದಕರ ಸಹಚರರಾಗಿ ಕೆಲಸ ಮಾಡುತ್ತಿದ್ದು, ತ್ರಾಲ್ ಮತ್ತು ಆವಂತಿಪ್ರೋರಾ ಪ್ರದೇಶಗಳಲ್ಲಿ ಸಕ್ರಿಯ ಭಯೋತ್ಪಾದಕರಿಗೆ ಆಶ್ರಯ,ಬೆಂಬಲ ನೀಡಿ ಮತ್ತು ಶಸ್ತ್ರಾಸ್ತ್ರ ಸಾಗಣೆಯಲ್ಲಿ ತೊಡಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪಾಕಿಸ್ಥಾನ ಮೂಲದ ಭಯೋತ್ಪಾದಕ ಕಮಾಂಡರ್‌ಗಳೊಂದಿಗೆ ಸಂಪರ್ಕ ಸಾಧಿಸಿ, ಭಯೋತ್ಪಾದಕರಾಗಲು ಯೋಜಿಸುತ್ತಿದ್ದರು, ”ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀರಿನ ಸಮಸ್ಯೆ ಇದ್ದರೂ ಡೆವಲಪರ್ಗಾಗಿ ನೀರು ಕಾಯ್ದಿರಿಸಿದ ಸರಕಾರ
ರಾಜೀವ್ ಹತ್ಯೆ ಪ್ರಕರಣ:ಜೀವಾವಧಿ ಶಿಕ್ಷೆಗೊಳಗಾಗಿದ್ದ ಪೆರಾರಿವಾಳನ್ ಬಿಡುಗಡೆಗೆ ಸುಪ್ರೀಂ ಆದೇಶ
ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್
ಮತ್ತೆ ಆರೆಂಜ್ ಅಲರ್ಟ್; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ರಾಮ ಮಂದಿರ ಅಡಿಪಾಯ ಆಗಸ್ಟ್ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ