ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಬ್ಬಿ ಶ್ರೀನಿವಾಸ್

ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ... ತುಂಬಾ ನೋವಿನಿಂದ ರಾಜೀನಾಮೆ ನೀಡುತ್ತಿದ್ದೇನೆ...

Team Udayavani, Mar 27, 2023, 3:47 PM IST

1-ddsa-aSAs

ಬೆಂಗಳೂರು : ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ (ಗುಬ್ಬಿ ಶ್ರೀನಿವಾಸ್) ಸೋಮವಾರ ಕರ್ನಾಟಕ ವಿಧಾನಸಭಾ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದು, ಶೀಘ್ರದಲ್ಲೇ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ.

ಕಳೆದ ವರ್ಷ, ಜೆಡಿಎಸ್ ಪಕ್ಷವು ಶ್ರೀನಿವಾಸ್ ಅವರನ್ನು ಉಚ್ಚಾಟಿಸಿತ್ತು ಮತ್ತು ಕೋಲಾರದ ಮತ್ತೊಬ್ಬ ಶಾಸಕ ಕೆ ಶ್ರೀನಿವಾಸ್ ಗೌಡ ಅವರೊಂದಿಗೆ ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಮನವಿ ಮಾಡಿತ್ತು. ಶ್ರೀನಿವಾಸ್ ಅವರು ಜೂನ್ 2022 ರ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದ ಆರೋಪವನ್ನು ಹೊಂದಿದ್ದು, ಜೆಡಿಎಸ್ ಪ್ರಕಾರ ಕುಪೇಂದ್ರ ರೆಡ್ಡಿ ಸೋಲಿಗೆ ಕಾರಣವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಅವರು “ನನ್ನ ರಾಜೀನಾಮೆಯನ್ನು ಅಂಗೀಕರಿಸಿದ ನಂತರ ಸ್ಪೀಕರ್ ಅವರಿಂದ ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರುವ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸುತ್ತೇನೆ. ನಾನು ಮಾರ್ಚ್ 31 ರಂದು ಅಧಿಕೃತವಾಗಿ ಕಾಂಗ್ರೆಸ್ ಸೇರಲು ಯೋಜಿಸುತ್ತಿದ್ದೇನೆ, ತಾಲೂಕು ನಾಯಕರೊಂದಿಗೆ ಚರ್ಚಿಸಿದ ನಂತರ ನಾನು ನಿರ್ಧರಿಸುತ್ತೇನೆ” ಎಂದು ಹೇಳಿದರು.

ತುಂಬಾ ನೋವಿನಿಂದ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಪಕ್ಷದ ನಾಯಕತ್ವವು ಸುಳ್ಳು ಆರೋಪಗಳ ಆಧಾರದ ಮೇಲೆ ಉಚ್ಚಾಟಿಸಿದೆ. ಸುಮಾರು 20 ವರ್ಷಗಳ ಕಾಲ ಜೆಡಿಎಸ್‌ನಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಕೆಲಸ ಮಾಡಿದ್ದೇನೆ, ಇಂದು ನಾನು ಆ ಪಕ್ಷದ ಶಾಸಕ ಸ್ಥಾನಕ್ಕೆ ಭಾರವಾದ ಹೃದಯ ಮತ್ತು ನೋವಿನಿಂದ ರಾಜೀನಾಮೆ ನೀಡುತ್ತಿದ್ದೇನೆ. ದೇವೇಗೌಡರು ನನ್ನನ್ನು ಮಗನಂತೆ ನೋಡಿಕೊಂಡು ಕೆಲಸ ಮಾಡಲು ಪ್ರೋತ್ಸಾಹಿಸಿದ್ದಾರೆ, ಅವರಿಗೆ ತುಂಬು ಹೃದಯದ ಧನ್ಯವಾದಗಳು. ಕುಮಾರಸ್ವಾಮಿ ಅವರು ನನ್ನನ್ನು ತಮ್ಮ ಸ್ವಂತ ಕಿರಿಯ ಸಹೋದರನಂತೆ ನೋಡುತ್ತಿದ್ದರು, ಆದರೆ ಅವರು ನನ್ನನ್ನು ಪಕ್ಷದಿಂದ ಹೊರಹಾಕಲು ಕಾರಣವೇನು ಎಂದು ಗೊತ್ತಾಗಿಲ್ಲ ಎಂದರು.

ರಾಜೀನಾಮೆಯನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಲ್ಲಿಸಿದ್ದೇನೆ. ಅದನ್ನು ಪರಿಶೀಲಿಸುವುದಾಗಿ ಸ್ಪೀಕರ್ ಹೇಳಿದ್ದಾರೆ.

ನೋವಿನಲ್ಲಿದ್ದೇನೆ, ನನಗೆ ಯಾವುದೇ ಆಯ್ಕೆಗಳಿಲ್ಲ. 2021ರ ಅಕ್ಟೋಬರ್‌ನಲ್ಲಿ ನಾನು ಪಕ್ಷದಲ್ಲಿದ್ದಾಗಲೇ ನನ್ನ ಸ್ಥಾನದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕುಮಾರಸ್ವಾಮಿ ಘೋಷಿಸಿದರು, ಆ ದಿನದಿಂದ ನಮ್ಮ ನಡುವಿನ ಅಂತರ ಹೆಚ್ಚಾಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ತುಮಕೂರಿನಿಂದ ದೇವೇಗೌಡರ ಸೋಲಿಗೆ ನನ್ನನ್ನೇ ಹೊಣೆಗಾರರನ್ನಾಗಿಸುವಂತೆ ಅವರು ನನ್ನ ವಿರುದ್ಧ ಕೆಲವು ಸುಳ್ಳು ಆರೋಪಗಳನ್ನು ಮಾಡಿದ್ದರು. ನಾನು ಅಂತಹ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಮತ್ತು ಪ್ರಾಮಾಣಿಕವಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ ಎಂದರು.

ಟಾಪ್ ನ್ಯೂಸ್

1-sadas

Rabkavi Banhatti ಹಿಪ್ಪರಗಿ ಜಲಾಶಯ ಖಾಲಿ; ಆತಂಕದಲ್ಲಿ ಜನತೆ

amithab RAJANIKANTH

32 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ ಬಿಗ್‌ ಬಿ – ತಲೈವಾ

1rewe

Vijayapura: ಕರಿ ಓಟದ ಹೋರಿ ಇರಿತ; 8 ಜನರಿಗೆ ಗಾಯ

1-sadsadsad

WTC title ; ಆಸ್ಟ್ರೇಲಿಯ ರಣತಂತ್ರ: ಭಾರತಕ್ಕೆ ಬೃಹತ್ ಗುರಿ ನೀಡಿ ಶಾಕ್

arrest-25

Mumbai; 1 ಕೋಟಿ ರೂ.ಮೌಲ್ಯದ ಮಾದಕ ವಸ್ತು ಸಹಿತ ವಿದೇಶಿ ವ್ಯಕ್ತಿ ಸೆರೆ

1-wewerrwe

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

1-sadadsad

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sfdas-dasd

Congress ಸರಕಾರದಿಂದ ಗುತ್ತಿಗೆದಾರರಿಗೆ LOC ಕೊಡಲು 5% ಫಿಕ್ಸ್!! : ಹೆಚ್ ಡಿಕೆ ಆರೋಪ

1-w3rwrew

Siddaramaiah ಅವರಿಗೆ ರುದ್ರಾಕ್ಷಿ ಮಾಲೆ ಹಾಕಿ ಆಶೀರ್ವದಿಸಿದ ಸುತ್ತೂರು ಶ್ರೀಗಳು

shivaraj

ಟ್ರಸ್ಟ್ ಗಳ ಕಾರ್ಯ ನಿರ್ವಹಣೆಗೆ ಹೆಚ್ಚಿನ ಬಲ: ಸಚಿವ ಶಿವರಾಜ್  ತಂಗಡಗಿ

shobha-karandlaje

Shobha Karandlaje ಅವರಿಗೂ ಫ್ರೀ…; ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಗರಂ

Siddaramaiah

ಬಿಜೆಪಿಯ ಸುಳ್ಳಿನ ಸಂಸ್ಕಾರವನ್ನು ಸೋಲಿಸಿ ಸತ್ಯದ ಘನತೆಯನ್ನು ಗೆಲ್ಲಿಸಿದ್ದಾರೆ:Siddaramaiah

MUST WATCH

udayavani youtube

ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ: ಕಿರಣ್‌ ಕೊಡ್ಗಿ

udayavani youtube

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್‌ ಘೀ ರೋಸ್ಟ್‌

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಹೊಸ ಸೇರ್ಪಡೆ

1-sadas

Rabkavi Banhatti ಹಿಪ್ಪರಗಿ ಜಲಾಶಯ ಖಾಲಿ; ಆತಂಕದಲ್ಲಿ ಜನತೆ

1-sadasd

Sirsi ಭಾರಿ ಮೌಲ್ಯದ ನಾಟಾ ಅಕ್ರಮ ಸಾಗಾಟ; ನಾಲ್ವರ ಬಂಧನ

amithab RAJANIKANTH

32 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ ಬಿಗ್‌ ಬಿ – ತಲೈವಾ

1rewe

Vijayapura: ಕರಿ ಓಟದ ಹೋರಿ ಇರಿತ; 8 ಜನರಿಗೆ ಗಾಯ

1-adsd

Guarantee Scheme ಟೀಕಿಸಿ ಸ್ಟೇಟಸ್; ಶಿಕ್ಷಕ- ಶಿಕ್ಷಕಿಗೆ ನೋಟಿಸ್