ಕೋರ್ಟ್‌ನಲ್ಲಿ ಟ್ರಂಪ್‌ಗೆ ಮುಖಭಂಗ! ಪೆನ್ಸಿಲ್ವೇನಿಯಾ ಮರು ಎಣಿಕೆಗೆ ಆಗ್ರಹಿಸಿದ್ದ ಅರ್ಜಿ ವಜಾ
ಹುರುಳಿಲ್ಲದ ವಾದ, ಸಾಕ್ಷ್ಯವಿಲ್ಲದ ಆರೋಪ ಎಂದ ಜಡ್ಜ್
Team Udayavani, Nov 22, 2020, 9:00 PM IST
ವಾಷಿಂಗ್ಟನ್: ನ.3ರ ಅಧ್ಯಕ್ಷೀಯ ಚುನಾವಣೆಯ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತೀವ್ರ ಹಿನ್ನಡೆಯಾಗಿದೆ. ಪೆನ್ಸಿಲ್ವೇನಿಯಾದ ಫಲಿತಾಂಶ ಪ್ರಶ್ನಿಸಿ ಟ್ರಂಪ್ ಪ್ರಚಾರ ತಂಡ ಸಲ್ಲಿಸಿದ್ದ ಅರ್ಜಿಯನ್ನು ಫೆಡರಲ್ ಜಡ್ಜ್ ಮ್ಯಾಥ್ಯೂ ಬ್ರ್ಯಾನ್ ವಜಾ ಮಾಡಿದ್ದಾರೆ.
ಟ್ರಂಪ್ ಅವರು ಯಾವುದೇ ಗಟ್ಟಿತನವಿಲ್ಲದ ವಾದ, ಸಾಕ್ಷ್ಯಗಳೇ ಇಲ್ಲದ ಊಹಾತ್ಮಕ ಆರೋಪಗಳನ್ನು ಹೊರಿಸಿದ್ದಾರೆ. ಅವರ ಅರ್ಜಿಯನ್ನು ಪರಿಗಣಿಸುವ ಅಗತ್ಯವೇ ಕಾಣುತ್ತಿಲ್ಲ. ಹೀಗಾಗಿ ಅರ್ಜಿ ವಜಾ ಮಾಡುತ್ತಿದ್ದೇವೆ ಎಂದು ನ್ಯಾಯಮೂರ್ತಿ ಮ್ಯಾಥ್ಯೂ ಹೇಳಿದ್ದಾರೆ. ವಾರದ ಹಿಂದಷ್ಟೇ ನ್ಯಾಯಮೂರ್ತಿ ಮ್ಯಾಥ್ಯೂ ಅವರಿಗೆ ಬೆದರಿಕೆ ಕರೆ ಬಂದಿದ್ದು ಭಾರೀ ಸುದ್ದಿಯಾಗಿತ್ತು.
ಮರುಎಣಿಕೆಗೆ ಆಗ್ರಹ:
ಇದೇ ವೇಳೆ, ಜಾರ್ಜಿಯಾದಲ್ಲಿ ಮರು ಮತ ಎಣಿಕೆ ನಡೆಯಬೇಕು ಎಂದು ಕೋರಿ ಟ್ರಂಪ್ ಪ್ರಚಾರ ತಂಡ ಕೋರ್ಟ್ ಮೆಟ್ಟಿಲೇರಿದೆ. ಇತ್ತೀಚೆಗಷ್ಟೇ ರಿಪಬ್ಲಿಕನ್ ಬಾಹುಳ್ಯದ ಜಾರ್ಜಿಯಾದಲ್ಲಿ ಡೆಮಾಕ್ರಾಟ್‌ನ ಜೋ ಬೈಡೆನ್ 12 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈಗಾಗಲೇ ಇಲ್ಲಿ ಮರು ಮತ ಎಣಿಕೆ ನಡೆದು, ಬೈಡೆನ್ ಜಯ ಗಳಿಸಿದ್ದು ಸಾಬೀತಾಗಿತ್ತು. ಈಗ ಮತ್ತೆ ಟ್ರಂಪ್ ತಂಡ ಮರುಎಣಿಕೆಗೆ ಆಗ್ರಹಿಸಿರುವ ಕಾರಣ, ಚುನಾವಣಾ ಅಧಿಕಾರಿಗಳು 50 ಲಕ್ಷ ಮತಗಳನ್ನು ರೀಸ್ಕ್ಯಾನ್ ಮಾಡಿ ಎಣಿಸಬೇಕಾಗುತ್ತದೆ.
ಇದನ್ನೂ ಓದಿ :ಉದ್ಯೋಗಕ್ಕಾಗಿ ತಂದೆಯನ್ನೆ ಭೀಕರವಾಗಿ ಹತ್ಯೆಗೈದ ನಿರುದ್ಯೋಗಿ ಮಗ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ಒಣ ಪಡಿತರ ನೀಡಿ ಆಕ್ರೋಶಕ್ಕೆ ಗುರಿಯಾದ ಚೀನಾ
ಕಾಡ್ಗಿಚ್ಚಿ ನಲ್ಲೂ ಟಿಕ್ ಟಾಕ್ ಹುಚ್ಚು!; ಪಾಕಿಸ್ತಾನಿ ಮಹಿಳೆಯ ವಿರುದ್ಧ ಆಕ್ರೋಶ
ಶ್ರೀಲಂಕಾ ಏರ್ಲೈನ್ಸ್ ಮಾರಲು ಹೊರಟ ಪ್ರಧಾನಿ ವಿಕ್ರಮ ಸಿಂಘೆ
6 ತಿಂಗಳಲ್ಲಿ ಗ್ರೀನ್ ಕಾರ್ಡ್ ಪ್ರಕ್ರಿಯೆ ನಡೆಸಲು ಜೋ ಬೈಡೆನ್ ಅವರಿಗೆ ಶಿಫಾರಸು
ಜಮ್ಮು& ಕಾಶ್ಮೀರದ ಕುರಿತು ಪಾಕ್ ನಿಲುವಳಿಗೆ ಭಾರತ ತಿರಸ್ಕಾರ
MUST WATCH
ಹೊಸ ಸೇರ್ಪಡೆ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ
ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ