100ನೇ ಐಪಿಎಲ್ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಕೆ.ಎಲ್. ರಾಹುಲ್
Team Udayavani, Apr 16, 2022, 6:04 PM IST
ಮುಂಬಯಿ : ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ನೂರನೇ ಐಪಿಎಲ್ ಪಂದ್ಯವಾಡಿದ ರಾಹುಲ್ ಐಪಿಎಲ್ ಇತಿಹಾಸದಲ್ಲಿ 100ನೇ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು.
ರಾಹುಲ್ 60 ಬಾಲ್ ಗಳಲ್ಲಿ 9 ಬೌಂಡರಿಗಳು ಮತ್ತು 5 ಸಿಕ್ಸರ್ ಒಳಗೊಂಡು 103 ರನ್ ಗಳಿಸಿ ಅಜೇಯರಾಗಿ ಉಳಿದರು.
ತಂಡ ರಾಹುಲ್ ಶತಕದ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳ ಭರ್ಜರಿ ಮೊತ್ತ ಕಲೆ ಹಾಕಿತು.
ರಾಹುಲ್ ಗೆ ಸಾಥ್ ನೀಡಿದ ಡಿ ಕಾಕ್ 24 , ಮನೀಶ್ ಪಾಂಡೆ 38 , ಸ್ಟೋಯಿನಿಸ್ 10, ದೀಪಕ್ ಹೂಡಾ 15 ರನ್ ಕೊಡುಗೆ ಸಲ್ಲಿಸಿದರು.
ಲಕ್ನೋ ಸೂಪರ್ ಜೈಂಟ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್ ಗಳ ಜಯ ಸಾಧಿಸಿದೆ. ಮುಂಬೈ ಇಂಡಿಯನ್ಸ್ ಸತತ ಆರನೇ ಸೋಲನ್ನು ಅನುಭವಿಸಿತು.
ಮುಂಬೈ ಒಂಬತ್ತು ವಿಕೆಟ್ಗೆ 181 ರನ್ ಗಳಿಸಲು ಮಾತ್ರ ಶಕ್ತವಾಯಿತು. ಲಕ್ನೋ ಪರ ಅವೇಶ್ ಖಾನ್ ನಾಲ್ಕು ಓವರ್ಗಳಲ್ಲಿ30 ರನ್ ನೀಡಿ 3 ವಿಕೆಟ್ ಪಡೆದು ಗಮನ ಸೆಳೆದರು.
ಸಂಕ್ಷಿಪ್ತ ಸ್ಕೋರ್
ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 199
ಮುಂಬೈ ಇಂಡಿಯನ್ಸ್: 20 ಓವರ್ಗಳಲ್ಲಿ 9 ವಿಕೆಟ್ಗೆ 181 (ಸೂರ್ಯಕುಮಾರ್ ಯಾದವ್ 37, ಅವೇಶ್ ಖಾನ್ 3/30).