ಕಾಸರಗೋಡು: AI ಕೆಮರಾ ನಿಗಾ ಆರಂಭ- ಮೊದಲ ದಿನ 1,040 ನಿಯಮ ಉಲ್ಲಂಘನೆ

Team Udayavani, Jun 7, 2023, 8:16 AM IST

CC CAMERAS

ಕಾಸರಗೋಡು: ರಸ್ತೆಗಳಲ್ಲಿ ಸಾರಿಗೆ ಕಾನೂನು ಉಲ್ಲಂಘನೆ ನಡೆಸುತ್ತಿರುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ರಸ್ತೆ ಬದಿಯಲ್ಲಿ ಸ್ಥಾಪಿಸಲಾದ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಎಐ) ಕೆಮರಾಗಳು ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನ ಜೂ. 5ರಂದು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯ ವರೆಗಿನ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 1,040 ಸಾರಿಗೆ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿವೆ.

ಕೇರಳ ರಾಜ್ಯದಲ್ಲಿ ಒಟ್ಟು 38,520 ಸಾರಿಗೆ ಕಾನೂನು ಉಲ್ಲಂಘನೆ ಪತ್ತೆಯಾಗಿವೆ. 250ರಿಂದ 3 ಸಾವಿರ ರೂ. ತನಕ ದಂಡ ವಸೂಲು ಮಾಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಸಾರಿಗೆ ನಿಯಮ ಉಲ್ಲಂಘಿಸಿದವರಿಗೆ ಶೀಘ್ರದಲ್ಲೇ ನೋಟಿಸ್‌ ಬರಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಜನರನ್ನು ಹಿಂಡುವ ಯೋಜನೆ: ಕಾಂಗ್ರೆಸ್‌

ಹದಗೆಟ್ಟ ರಸ್ತೆಗಳು ಮತ್ತು ಸುರಕ್ಷಿತ ಚಾಲನೆಗೆ ಪೂರಕ ಸೌಲಭ್ಯಗಳನ್ನು ಒದಗಿಸದೇ ಇರುವುದು ಸಂಚಾರ ಉಲ್ಲಂಘನೆಗೆ ಕಾರಣ. ರಾಜ್ಯದ ಪಿಣರಾಯಿ ಸರಕಾರವು ರಸ್ತೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸುವ ಬದಲು ಎಐ ಕೆಮರಾದ ಮೂಲಕ ಜನರನ್ನು ಹಿಂಡಿ ಬೊಕ್ಕಸ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್‌ ಇದೇವೇಳೆ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಮೊದಲ ದಿನವೇ 38,520 ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚುವ ಮೂಲಕ ಸರಾಸರಿ 1,000 ರೂ.ಗಳಂತೆ ಜನರಿಂದ ಸುಮಾರು 4 ಕೋಟಿ ಸಂಗ್ರಹಿಸಲಾಗಿದೆ. ಮಾಸಿಕ 115 ಕೋಟಿ ರೂ.ಗಳನ್ನು ಸಂಗ್ರಹಿಸುವ ನಿರೀಕ್ಷೆಯನ್ನು ಸರಕಾರ ಹೊಂದಿದೆ. ಇದು ಮದ್ಯದ ಅನಂತರದ ಎರಡನೇ ಅತಿ ಹೆಚ್ಚು ಆದಾಯವಾಗಿದೆ ಮತ್ತು ಲಾಟರಿ ಆದಾಯಕ್ಕಿಂತಲೂ ಹೆಚ್ಚು. ಎಐ ಕೆಮರಾ ಯೋಜನೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್‌ ಹೋರಾಟವನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

Uppinangady ಕೇರಳ ಲಾಟರಿ 50 ಲಕ್ಷ ರೂ. ಬಹುಮಾನ

Uppinangady ಕೇರಳ ಲಾಟರಿ 50 ಲಕ್ಷ ರೂ. ಬಹುಮಾನ

Panemangalore  Bridge: ಬಸ್‌ ಕೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Panemangalore Bridge: ಬಸ್‌ ಕೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

ಮೂಳೂರು: ಕ್ಯಾಂಟೀನ್‌ ಮಾಲಕ ಆತ್ಮಹತ್ಯೆ

Kapu ಮೂಳೂರು: ಕ್ಯಾಂಟೀನ್‌ ಮಾಲಕ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Missing Case ಅಣ್ಣ ತಂಗಿಯರ ಪುತ್ರಿಯರು ನಾಪತ್ತೆ

UDKasaragod ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರು: ಗಾಯ

Kasaragod ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರು: ಗಾಯ

Kasaragod ಅಕ್ರಮ ಮರಳುಗಾರಿಕೆ: 4 ಕೇಂದ್ರಗಳು ನೆಲಸಮ

Kasaragod ಅಕ್ರಮ ಮರಳುಗಾರಿಕೆ: 4 ಕೇಂದ್ರಗಳು ನೆಲಸಮ

kBadiyadka ಪಳ್ಳತ್ತಡ್ಕ ಅಪಘಾತ ಪ್ರಕರಣ: ಶಾಲಾ ಬಸ್‌ ಚಾಲಕನ ಸೆರೆ

Badiyadka ಪಳ್ಳತ್ತಡ್ಕ ಅಪಘಾತ ಪ್ರಕರಣ: ಶಾಲಾ ಬಸ್‌ ಚಾಲಕನ ಸೆರೆ

Online ಉದ್ಯೋಗ ಆಮಿಷ : ಇಬ್ಬರು ಮಹಿಳೆಯರ 4.70 ಲಕ್ಷ ರೂ. ನಷ್ಟ

Online ಉದ್ಯೋಗ ಆಮಿಷ : ಇಬ್ಬರು ಮಹಿಳೆಯರ 4.70 ಲಕ್ಷ ರೂ. ನಷ್ಟ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

Uppinangady ಕೇರಳ ಲಾಟರಿ 50 ಲಕ್ಷ ರೂ. ಬಹುಮಾನ

Uppinangady ಕೇರಳ ಲಾಟರಿ 50 ಲಕ್ಷ ರೂ. ಬಹುಮಾನ

Panemangalore  Bridge: ಬಸ್‌ ಕೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Panemangalore Bridge: ಬಸ್‌ ಕೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.