Watch: ಬಹುನಿರೀಕ್ಷೆಯ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಟ್ರೇಲರ್ ರಿಲೀಸ್
ಟ್ರೇಲರ್ ಬಿಡುಗಡೆಗೂ ಮುನ್ನ ಬುಧವಾರ ಚಿತ್ರತಂಡ ಪ್ರೀ ಟ್ರೇಲರ್ ಇವೆಂಟ್ ನಡೆಸಿತ್ತು.
Team Udayavani, Jun 23, 2022, 5:31 PM IST
ಬೆಂಗಳೂರು: ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ “ವಿಕ್ರಾಂತ್ ರೋಣ” ಸಿನಿಮಾದ ಕನ್ನಡ ಟ್ರೇಲರ್ ಗುರುವಾರ (ಜೂನ್ 23) ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಇದನ್ನೂ ಓದಿ:ಪೊಲೀಸರ ನಿರ್ಲಕ್ಷ್ಯ :’ಕಳ್ಳನನ್ನು ನೀವೇ ಠಾಣೆಗೆ ಕರೆತನ್ನಿ’ ; ದೂರುದಾರರಿಗೇ ತಾಕೀತು !
ಕಿಚ್ಚ ಸುದೀಪ್ ನಟನೆಯ, ಅನುಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಲಹರಿ ಯೂಟ್ಯೂಬ್ ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ನಲ್ಲಿ ಟ್ರೈಲರ್ ಲಭ್ಯವಿದೆ.
2 ನಿಮಿಷ 58 ಸೆಕೆಂಡ್ಸ್ ಗಳ ಕಾಲದ ಟ್ರೈಲರ್ ನಲ್ಲಿ ಕಿಚ್ಚ ಸುದೀಪ್ ಆವರಿಸಿಕೊಂಡಿದ್ದು, ಸಿನಿಮಾ ಆಸಕ್ತರಿಗೆ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ. ಪೊಲೀಸ್ ಪಾತ್ರದಲ್ಲಿ ಸುದೀಪ್ ನಟಿಸಿದ್ದು, ಇದೊಂದು ನಿಗೂಢ ಸಾವಿನ ರೋಮಾಂಚಕಾರಿ ಕಥಾಹಂದರ ಹೊಂದಿದೆ ಎಂಬ ಸುಳಿವನ್ನು ನೀಡಿದೆ.
ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟ್ರೇಲರ್ ಬಿಡುಗಡೆಗೂ ಮುನ್ನ ಬುಧವಾರ ಚಿತ್ರತಂಡ ಪ್ರೀ ಟ್ರೇಲರ್ ಇವೆಂಟ್ ನಡೆಸಿತ್ತು. ಈ ಕಾರ್ಯಕ್ರಮಕ್ಕೆ ನಟರಾದ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಸೃಜನ್ ಲೋಕೇಶ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ, ಶುಭ ಹಾರೈಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನಾಡದ ಮಾತೆಲ್ಲವಾ ಕದ್ದಾಲಿಸು… ಗಣೇಶ್ ಬರ್ತ್ಡೇಗೆ ಗಾಳಿಪಟ-2 ರೊಮ್ಯಾಂಟಿಕ್ ಸಾಂಗ್
ಸ್ನೂಕರ್ ಪಟುವಿನ ಸಿನಿ ಕನಸು: ಹೋಪ್ ಮೂಲಕ ಚಿತ್ರರಂಗಕ್ಕೆ ಬಂದ ವರ್ಷಾ ಸಂಜೀವ್
ಆರು ತಿಂಗಳು ನೂರು ಸಿನಿಮಾ; ಸ್ಯಾಂಡಲ್ ವುಡ್ ನಲ್ಲಿ ಶತಕ ಸಂಭ್ರಮ
ಶೀತಲ್ ಶೆಟ್ಟಿ ನಿರ್ದೇಶನದ ಮರ್ಡರ್ ಮಿಸ್ಟ್ರಿ ‘ವಿಂಡೋಸೀಟ್’ ಜರ್ನಿ ಶುರು
ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕ್ತಿ: ಇಂದಿನಿಂದ ‘ಬೈರಾಗಿ’ ದರ್ಶನ