ಮೂಡಿಗೆರೆ: 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
Team Udayavani, Oct 2, 2021, 7:20 PM IST
ಮೂಡಿಗೆರೆ: ತಾಲೂಕಿನ ದುರ್ಗದ ಹಳ್ಳಿಯ ಹರೀಶ್ ಎಂಬವರ ಮನೆಯ ಶೌಚಾಲಯದಲ್ಲಿ ಅವಿತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಶನಿವಾರ ಉರಗತಜ್ಞ ಬಣಕಲ್ ಆರೀಫ್ ಅವರು ಹಿಡಿದು ಚಾರ್ಮಾಡಿ ಅರಣ್ಯದಲ್ಲಿ ಬಿಟ್ಟಿದ್ದಾರೆ.
ಕಾಳಿಂಗ ಸರ್ಪ ಕಾಣಿಸಿಕೊಂಡ ವಿಚಾರವನ್ನು ಉರಗ ತಜ್ಞ ಬಣಕಲ್ ಆರೀಫ್ ಅವರಿಗೆ ತಿಳಿಸಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಸುರಕ್ಷಿತವಾಗಿ ಹಿಡಿದು ಅರಣ್ಯದಲ್ಲಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.