ಕೊರಿಯ ಓಪನ್: ಸೆಮಿಫೈನಲ್ನಲ್ಲಿ ಅಭಿಯಾನ ಕೊನೆಗೊಳಿಸಿದ ಸಿಂಧು
Team Udayavani, Apr 9, 2022, 11:42 AM IST
ಸಂಚಿಯೋನ್ : ಭಾರತದ ಅಗ್ರ ಕ್ರಮಾಂಕದ ಶಟ್ಲರ್ ಪಿ.ವಿ. ಸಿಂಧು ಕೊರಿಯ ಓಪನ್ ಸೂಪರ್ 500 ಬ್ಯಾಡ್ಮಿಂಟನ್’ ಕೂಟದ ವನಿತೆಯರ ಸಿಂಗಲ್ಸ್ ಸೆಮಿಫೈನಲ್ ಹೋರಾಟದಲ್ಲಿ ಸೋಲು ಅನುಭವಿಸಿ ಅಭಿಯಾನ ಕೊನೆಗೊಳಿಸಿದ್ದಾರೆ.
ಸಿಂಧು ಸುಲಭ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೇರಿ ಭರವಸೆ ಮೂಡಿಸಿದ್ದರು. ಸೆಮಿಫೈನಲ್ ಹೋರಾಟ ದಲ್ಲಿ ದ್ವಿತೀಯ ಶ್ರೇಯಾಂಕದ ಕೊರಿಯದ ಆ್ಯನ್ ಸೆಯಂಗ್ ಅವರ ಅವರ ಎದುರು 48 ನಿಮಿಷಗಳ ಹೋರಾಟದಲ್ಲಿ 14-21 17-21 ಗೇಮ್ಗ ಳಿಂದ ಸೋತಿದ್ದಾರೆ.
20 ರ ಹರೆಯದ ಆ್ಯನ್ ಸೆಯಂಗ್ ತನ್ನ ಡೈವಿಂಗ್ ರಿಟರ್ನ್ಗಳ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ ಸಿಂಧು ವಿರುದ್ಧ ಆರಂಭದಿಂದಲೂ ಮೇಲುಗೈ ಸಾಧಿಸಿದರು. ಇವರಿಬ್ಬರು ಮೂರು ಬಾರಿ ಮುಖಾಮುಖಿಯಾಗಿದ್ದು, ಸಿಂಧು ಮೂರರಲ್ಲೂ ಸೋತಿದ್ದಾರೆ.