Udayavni Special

ದೇಣಿಗೆ ಕೊಡದೆ ಲೆಕ್ಕ ಕೇಳಲು ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರು?

Team Udayavani, Feb 18, 2021, 8:55 PM IST

ದೇಣಿಗೆ ಕೊಡದೆ ಲೆಕ್ಕ ಕೇಳಲು ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರು?

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿಯವರು ರಾಮ ಮಂದಿರ ನಿರ್ಮಾಣಕ್ಕೆ ಒಂದು ರೂ. ಕೊಡಲಿಲ್ಲ. ದೇಣಿಗೆ ಲೆಕ್ಕ ಕೊಡಿ ಎಂದು ಕೇಳಲು ಕುಮಾರಸ್ವಾಮಿ, ಸಿದ್ದರಾಮಯ್ಯ ಯಾರು? ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದರು.

ರಾಮಮಂದಿರ ನಿರ್ಮಾಣ, ದೇಣಿಗೆ ಸಂಗ್ರಹ ವಿಚಾರದಲ್ಲಿ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, 10 ರೂ. ದೇಣಿಗೆ ನೀಡದ ಇವರು ಲೆಕ್ಕ ಕೇಳಲು ಯಾರು. ದೇಣಿಗೆ ಕೊಟ್ಟವರಿಗೆ ಲೆಕ್ಕ ಕೇಳಲು ಯೋಗ್ಯತೆಯಿದೆ. ದೇಣಿಗೆ ನೀಡದ ಮನೆಗಳಿಗೆ ಗುರುತು ಹಾಕಿದ್ದರೆ ಅದನ್ನು ಎಚ್‌.ಡಿ. ಕುಮಾರಸ್ವಾಮಿಯವರು ತೋರಿಸಲಿ.

ನಾಲಿಗೆ ಇದೆ ಎಂದು ಏನು ಬೇಕಾದರೂ ಮಾತನಾಡಬಹುದೇ? ಮುಸ್ಲಿಮರು, ಕ್ರೈಸ್ತರೇ ದೇಣಿಗೆ ನೀಡಿದ ಮೇಲೆ ಇವರಿಬ್ಬರಿಗೆ ಏನು ರೋಗ? ಸಿದ್ಧರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗಳು ಅಸಹ್ಯ ಹುಟ್ಟಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆ: ಸದಾನಂದ ಗೌಡ

ಗೋಮಾತೆ ಶಾಪದಿಂದ ಸಿದ್ಧರಾಮಯ್ಯ ಅಧಿಕಾರ ಕಳೆದುಕೊಂಡರು. ಈಗ ಕ್ಷೇತ್ರವನ್ನೂ ಕಳೆದುಕೊಂಡು ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ. ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳು. ಇಲ್ಲದಿದ್ದರೆ ನಾನು ಬೇರೆ ಭಾಷೆ ಪ್ರಯೋಗಿಸುತ್ತಿದ್ದೆ. ಕೋತಿಗಳು ಸಹ ಇವರಿಬ್ಬರಂತೆ ಮಾತನಾಡುವುದಿಲ್ಲ ಎಂದು ಕಿಡಿ ಕಾರಿದರು.

ಮೀಸಲಾತಿಗಾಗಿ ಕುರುಬ ಸಮುದಾಯ ನಡೆಸಿದ ಸಮಾವೇಶ ಯಶಸ್ವಿಯಾಗಿರುವುದು ಸಿದ್ದರಾಮಯ್ಯನವರಿಗೆ ಕಿರಿಕಿರಿ ತಂದಿದೆ. ಸಮಾವೇಶಕ್ಕೆ ಲಕ್ಷ ಲಕ್ಷ ಜನ ಬಂದಿದ್ದರು. ಸಮುದಾಯದ ಸ್ವಾಮೀಜಿಗಳು ಹೋಗಿ ಕರೆದರೂ ಹೋರಾಟ, ಸಮಾವೇಶಕ್ಕೆ ಸಿದ್ದರಾಮಯ್ಯ ಬರಲಿಲ್ಲ. ಇದು ನನಗೆ ನೋವು ತಂದಿದೆ. ಮಾಧ್ಯಮಗಳಲ್ಲಿ ಪಾದಯಾತ್ರೆ ನೋಡಿ, ಕುರುಬ ಸುನಾಮಿಯನ್ನು ಕಂಡು ಸಿದ್ದರಾಮಯ್ಯ ಗಾಬರಿಯಾದರು ಎಂದು ತಿರುಗೇಟು ನೀಡಿದರು.

ಎಚ್‌.ಡಿ. ಕುಮಾರಸ್ವಾಮಿಯವರ ಆಟಕ್ಕೆ ಅವರ ತಂದೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಸಿದ್ದರಾಮಯ್ಯನವರ ಮಾತನ್ನು ಕಾಂಗ್ರೆಸ್‌ನವರೇ ಒಪ್ಪುವುದಿಲ್ಲ. ಮತ್ತೆ ಅವರ ಸರ್ಕಾರ ಅಧಿಕಾರಕ್ಕೆ ಬರದಿರುವುದಕ್ಕೆ ಧರ್ಮ ವಿರೋಧಿ ಚಟುವಟಿಕೆ, ರಾಷ್ಟ್ರ ವಿರೋಧಿ ನಡವಳಿಕೆಯೇ ಕಾರಣ ಎಂದು ದೂರಿದರು.

ಇದನ್ನೂ ಓದಿ:ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ : ರಾಮಕೃಷ್ಣನ ಸಾವಿಗೆ ನಟ ಯಶ್ ಸಂತಾಪ

ನನಗೆ ಸಿದ್ದರಾಮಯ್ಯನವರು ಆಡಿದ ಮಾತಿನಿಂದ ನೋವಾಗಿದೆ. ಈಗ ಸಿದ್ದರಾಮಯ್ಯ ಕುರುಬ ಸಮಾವೇಶ ಮಾಡುವುದಕ್ಕೆ ನನ್ನ ಅಭ್ಯಂತರ ಇಲ್ಲ. ಆದರೆ ರಾಜಕಾರಣ ಮಾಡುವುದನ್ನು ಒಪ್ಪುವುದಿಲ್ಲ. ಕಾಗಿನೆಲೆ ಸ್ವಾಮೀಜಿಗಳು ಅವರ ಮನೆಗೆ ಹೋದಾಗ ತಮ್ಮ ಬೆಂಬಲವಿದೆ ಎಂದಿದ್ದ ಸಿದ್ದರಾಮಯ್ಯ ಅವರು ನಂತರ ಆರ್‌ಎಸ್‌ಎಸ್‌ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರ ಈ ಸ್ವಭಾವ ಒಳ್ಳೆಯದಲ್ಲ. 70 ವರ್ಷ ಕಾಂಗ್ರೆಸ್‌ ಇತ್ತಲ್ಲ, ಆಗ ಮಂಡಕ್ಕಿ ತಿನ್ನುತ್ತಿದ್ದರೆ?

ಎಚ್‌.ಡಿ.ದೇವೇಗೌಡರ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯನವರು ಸಚಿವರಾಗಿದ್ದಾಗ ಏಕೆ ಮಾಡಲಿಲ್ಲ. ತಾನೇ ಹಿಂದುಳಿದ ವರ್ಗಗಳ ಚಾಂಪಿಯನ್‌, ದಲಿತ ಚಾಂಪಿಯನ್‌ ಎನ್ನುವ ಸಿದ್ದರಾಮಯ್ಯನವರು ಈಗ ಬರೀ ವೋಟಿಗಾಗಿ ಚಾಂಪಿಯನ್ನಾ ಎಂದು ಪ್ರಶ್ನಿಸಿದರು.

ಮೀಸಲಾತಿಗಾಗಿ ನಾನಾ ಸಮುದಾಯಗಳು ನಡೆಸುತ್ತಿರುವ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಅರ್ಹತೆಯಿರುವ ಸಮುದಾಯಗಳಿಗೆ ಮೀಸಲಾತಿ ಸಿಗಲಿ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಇದನ್ನೂ ಓದಿ:ಉದ್ಯಮಿಗಳ ಮನೆ ಬಾಗಿಲಿಗೆ ಸರ್ಕಾರ, ಜನಸ್ನೇಹಿ ಇಲಾಖೆಗೆ ಮೊದಲ ಆದ್ಯತೆ : ಸಚಿವ ನಿರಾಣಿ ಘೋಷಣೆ

ರಾಜ್ಯದಲ್ಲಿ ಮೀಸಲಾತಿಗಾಗಿ ಹೋರಾಟಗಳು ನಡೆಯುತ್ತಿರೋದು ಒಳ್ಳೆಯದು. ಕುಗ್ಗಿ ಹೋಗಿರುವ ದನಿಗಳಿಗೆ ಮೀಸಲಾತಿ ಅಗತ್ಯವಿದೆ. ಕುಲಶಾಸ್ತ್ರೀಯ ಅಧ್ಯಯನ, ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಪರಿಶೀಲಿಸಿ ಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಟಾಪ್ ನ್ಯೂಸ್

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

“ಎಸ್‌’ ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ

“ಎಸ್‌’ ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ

ಐಆರ್‌ಸಿಟಿಸಿಯ “ವರ್ಕ್‌ ಫ್ರಂ ಹೋಟೆಲ್‌’ : ಆತಿಥ್ಯ ಕ್ಷೇತ್ರದ ಹೊಸ ಟ್ರೆಂಡಿಂಗ್‌ ಕೊಡುಗೆ

ಐಆರ್‌ಸಿಟಿಸಿಯ “ವರ್ಕ್‌ ಫ್ರಂ ಹೋಟೆಲ್‌’ : ಆತಿಥ್ಯ ಕ್ಷೇತ್ರದ ಹೊಸ ಟ್ರೆಂಡಿಂಗ್‌ ಕೊಡುಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BSY

ರಾಜ್ಯದ ಜನತೆಗೆ ಆದಷ್ಟು ಬೇಗ ಲಸಿಕೆ ಕೊಡಿಸಲು ಯತ್ನ: ಸಿಎಂ

ಪಕ್ಷದ ಮಾಜಿ ಸಂಸದರು, ಶಾಸಕರ ಜತೆ ಸುರ್ಜೇವಾಲಾ, ಡಿಕೆಶಿ ಸಂವಾದ

ಪಕ್ಷದ ಮಾಜಿ ಸಂಸದರು, ಶಾಸಕರ ಜತೆ ಸುರ್ಜೇವಾಲಾ, ಡಿಕೆಶಿ ಸಂವಾದ

naleen-kumar-infromed-about-pm-kisam-samman-8th-instalment

ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ 9.5 ಕೋಟಿ ಜನರಿಗೆ ಎಂಟನೇ ಕಂತು ಬಿಡುಗಡೆ : ಕಟೀಲ್

ಅಕ್ಷಯ ತೃತೀಯಾ :ರಾಜ್ಯಾದ್ಯಂತ 30 ಕೋ. ರೂ. ಆನ್‌ಲೈನ್‌ ವಹಿವಾಟು

ಅಕ್ಷಯ ತೃತೀಯಾ :ರಾಜ್ಯಾದ್ಯಂತ 30 ಕೋ. ರೂ. ಆನ್‌ಲೈನ್‌ ವಹಿವಾಟು

ಬೆಳಗಾವಿ ಜಿಲ್ಲೆಯಲ್ಲಿ 1592 ಪಾಸಿಟಿವ್ ಪ್ರಕರಣ : ಹೆಚ್ಚಿದ ಆತಂಕ

ಬೆಳಗಾವಿ ಜಿಲ್ಲೆಯಲ್ಲಿ 1592 ಪಾಸಿಟಿವ್ ಪ್ರಕರಣ ಪತ್ತೆ : ಹೆಚ್ಚಿದ ಆತಂಕ

MUST WATCH

udayavani youtube

ರಷ್ಯಾದ ಸ್ಫುಟ್ನಿಕ್ v ಬೆಲೆ 995 ರೂ

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

ಹೊಸ ಸೇರ್ಪಡೆ

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.