ಸವದಿ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ: ಲಖನ್ ಜಾರಕಿಹೊಳಿ ಬಾಂಬ್
ಇಬ್ಬರು ಮಾತನಾಡಿದ ಮೊಬೈಲ್ ನಂಬರ್ ನಮ್ಮ ಬಳಿ ಇದೆ
Team Udayavani, Jan 27, 2022, 2:33 PM IST
ಬೆಳಗಾವಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿರುವ ಬೆಳಗಾವಿ ರಾಜಕಾರಣಕ್ಕೆ ಈ ಹೇಳಿಕೆಯಿಂದ ಮಹತ್ವದ ತಿರುವು ಲಭಿಸಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್ ಮತ್ತು ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಬೆಳಗಾವಿಯಲ್ಲಿ ಎಂಎಲ್ಸಿ ಲಖನ್ ಜಾರಕಿಹೊಳಿ ಮಾತನಾಡಿ, ಲಕ್ಷ್ಮಣ ಸವದಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ.
ಸವದಿ, ಡಿಕೆಶಿ ಮಾತನಾಡಿದ ಮೊಬೈಲ್ ನಂಬರ್ ನಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಲಕ್ಷ್ಮಣ ಸವದಿ ಬೇರೆ ನಂಬರ್ನಿಂದ ಡಿಕೆಶಿ ಜೊತೆ ಮಾತುಕತೆ ನಡೆಸಿದ್ದಾರೆ. ಸೋತ ನಾಯಕರೇ ಡಿಕೆಶಿ ಜತೆ ಸಂಪರ್ಕದಲ್ಲಿರುವವರು ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.
ರಮೇಶ್, ಬಾಲಚಂದ್ರ ಜಾರಕಿಹೊಳಿಗೆ 16 ಅಲ್ಲ, 20 ಶಾಸಕರನ್ನು ಕರೆತರುವ ಶಕ್ತಿ ಇದೆ. ರಮೇಶ್ ಜಾರಕಿಹೊಳಿ ಬೈಲಹೊಂಗಲ, ಖಾನಾಪುರ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದರು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ವಿಜಯೇಂದ್ರ ಹೆಸರು; ವರಿಷ್ಠರತ್ತ ಎಲ್ಲರ ಚಿತ್ತ
ಏನ್ಲಾ ಅಮಾಸೆ.., ಸನ್ ಆಫ್ ರಾಜಾಹುಲಿ ಕ್ಯಾಬಿನೆಟ್ ಎಂಟ್ರಿ ಆಯ್ತಾರಾ….
ಜನರನ್ನು ಧಾರ್ಮಿಕ ಮಟ್ಟದಲ್ಲಿ ವಿಭಜಿಸುವಲ್ಲಿ ಬಿಜೆಪಿ ವಿಫಲವಾಗಿದೆ : ಪಾಲೇಕರ್
ಬಿಜೆಪಿ ಚುನಾವಣಾ ರಣತಂತ್ರ: ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ರಾಜೀನಾಮೆ
ಜನತಾ ಜಲಧಾರೆ ಸಮಾರೋಪ: ಜೆಡಿಎಸ್ ಶಾಸಕ ಶ್ರೀನಿವಾಸ್ ಗೈರು