ಎಲ್ಐಸಿಗೆ 37,000 ಕೋಟಿ ರೂ. ಲಾಭ : 65 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ
Team Udayavani, Apr 30, 2021, 10:40 PM IST
ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ “ಭಾರತೀಯ ಜೀವವಿಮಾ ನಿಗಮ’ (ಎಲ್ಐಸಿ), 2020-21ರಲ್ಲಿ ತನ್ನ ಪಾಲಿನ ಷೇರುಗಳನ್ನು ಮಾರಾಟ ಮಾಡುವ ಮೂಲಕ 37,000 ಕೋಟಿ ರೂ. ಲಾಭ ಗಳಿಸಿದೆ.
ಸಂಸ್ಥೆಯ 65 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ. 2020ರಲ್ಲಿ ತನ್ನ ಪಾಲಿನ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸಂಸ್ಥೆ 25,625 ಕೋಟಿ ರೂ. ಲಾಭ ಗಳಿಸಿತ್ತು. ಆ ಲಾಭಕ್ಕೆ ಹೋಲಿಸಿದರೆ ಈ ವರ್ಷ ಗಳಿಸಿರುವ ಲಾಭ ಶೇ. 44.4ರಷ್ಟು ಹೆಚ್ಚು. ಈ ದಾಖಲೆಯ ಲಾಭದಿಂದಾಗಿ, ಎಲ್ಐಸಿಯು ತನ್ನ ಪಾಲಿಸಿದಾರರಿಗೆ ಉತ್ತಮ ಬೋನಸ್ ಹಾಗೂ ಉತ್ತಮ ರಿಟರ್ನ್ಸ್ ನೀಡಲು ಸಾಧ್ಯವಾಗುತ್ತದೆ. ಅಲ್ಲದೆ ಹೆಚ್ಚಿನ ಮಟ್ಟದಲ್ಲಿ ಹೊಸ ಪಾಲಿಸಿದಾರರನ್ನು ಸೆಳೆಯಲು ಸಾಧ್ಯವಾಗಲಿದೆ.
ಇದಲ್ಲದೆ, ಈ ಲಾಭದಿಂದ ಸರ್ಕಾರಕ್ಕೆ ಉತ್ತಮ ಡಿವಿಡೆಂಡ್(ಲಾಭಾಂಶ) ನೀಡಬಹುದಲ್ಲದೆ, ಷೇರು ಮಾರುಕಟ್ಟೆಯಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸುವ ಸಾಮರ್ಥಯವನ್ನೂ ಸಂಸ್ಥೆ ಪಡೆಯಲಿದೆ.
ಇದನ್ನೂ ಓದಿ :ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಕಾರ್ಯದರ್ಶಿ ಸುಯಮೀಂದ್ರಾಚಾರ್ ಕೋವಿಡ್ ಗೆ ಬಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?
Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!