ನಾಗ್ಪುರದಲ್ಲಿದ್ದಾರೆ ಜೋ ಬೈಡೆನ್ ಸಂಬಂಧಿಕರು!
Team Udayavani, Nov 11, 2020, 7:31 PM IST
-ಜೋ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಹೊತ್ತಿನಲ್ಲೇ ಹೀಗೊಂದು ಸಂಬಂಧ ಬಹಿರಂಗ
-1873ರಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ ಬೈಡೆನ್ ಪೂರ್ವಜ!
ನಾಗ್ಪುರ: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಆಯ್ಕೆಯಾಗಿದ್ದಾರೆ. ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಷ್ಟರಮಧ್ಯೆ ಅವರಿಗೂ ಭಾರತಕ್ಕೂ ಇರುವ ಅಪರೂಪದ ಸಂಬಂಧವೊಂದು ಮತ್ತೂಮ್ಮೆ ಬಹಿರಂಗವಾಗಿದೆ.
ಹಿಂದೆ ಎರಡು ಬಾರಿ, ತನ್ನ ದೂರದ ಸಂಬಂಧಿಕರು ಮಹಾರಾಷ್ಟ್ರದಲ್ಲಿ ಇದ್ದಾರೆ ಎಂದು ಸ್ವತಃ ಜೋ ಬೈಡೆನ್ ಹೇಳಿದ್ದರು. 2013ರಲ್ಲೊಮ್ಮೆ, 2015ರಲ್ಲೊಮ್ಮೆ ಬೈಡೆನ್ ಈ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕುಟುಂಬವೂ ಇದನ್ನು ಅಂಗೀಕರಿಸಿದೆ.
1873ರಿಂದ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಬೈಡೆನ್ ಅವರ ಪೂರ್ವಜರೊಬ್ಬರು ಕೆಲಸ ಮಾಡುತ್ತಿದ್ದರಂತೆ. ನಂತರ ಆ ಕುಟುಂಬ ಸದಸ್ಯರು ನಾಗ್ಪುರದಲ್ಲೇ ನೆಲೆ ನಿಂತು, ಹಾಗೆಯೇ ಮುಂದುವರಿದಿದ್ದಾರೆ.
ಇದನ್ನೂ ಓದಿ:ಅರೋಗ್ಯ ಕೇಂದ್ರದಲ್ಲಿ ಕೈಕೊಟ್ಟ ವಿದ್ಯುತ್! ಮೊಬೈಲ್ ಬೆಳಕಿನಲ್ಲೇ ನಡೆಯಿತು ಹೆರಿಗೆ
1972ರಲ್ಲಿ ಬೈಡೆನ್ ಸೆನೇಟರ್ ಆಗಿ ಆಯ್ಕೆಯಾದಾಗ, ಅವರಿಗೆ ನಾಗ್ಪುರದಿಂದ ಪತ್ರವೊಂದು ಹೋಗಿತ್ತು. ಅದರಲ್ಲಿ ಜೋ ಬೈಡೆನ್‌ರ ದೂರದ ಸಂಬಂಧಿಕರು ನಾಗ್ಪುರದಲ್ಲಿ ನೆಲೆಸಿರುವ ಮಾಹಿತಿ ನೀಡಲಾಗಿತ್ತು. ಅನಂತರ 1981ರಲ್ಲಿ ನಾಗ್ಪುರದಲ್ಲೇ ನೆಲೆಸಿದ್ದ ಲೆಸ್ಲಿ ಬೈಡೆನ್, ಜೋ ಬೈಡೆನ್‌ಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿದ್ದ ಜೋ, ತನ್ನ ಪೂರ್ವಜರ ಬಗ್ಗೆ ಹುಡುಕುವುದಾಗಿ ತಿಳಿಸಿದ್ದರು.
ಭಾರತ್ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಲೆಸ್ಲಿ 1983ರಲ್ಲಿ ನಿಧನ ಹೊಂದಿದರು. ಹೀಗೆಂದು ಲೆಸ್ಲಿಯ ಮೊಮ್ಮಗಳು, ಸದ್ಯ ಮನಃಶಾಸ್ತ್ರಜ್ಞೆಯಾಗಿರುವ ಸೋನಿಯಾ ಬೈಡೆನ್ ಫ್ರಾನ್ಸಿಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗೆ ಧನ್ಯವಾದ ಹೇಳಿದ ಲಂಕಾ
ಮಂಕಿ ಪಾಕ್ಸ್ ಆತಂಕಕಾರಿ ವಿಷಯ: ಅಮೆರಿಕಾ ಅಧ್ಯಕ್ಷ ಜೋ ಬಿಡನ್
ತೈಲ ಸುಂಕ ಇಳಿಸಿದ ಮೋದಿ ಸರ್ಕಾರದ ನಿರ್ಧಾರವನ್ನು ಹಾಡಿಹೊಗಳಿದ ಇಮ್ರಾನ್ ಖಾನ್
ಮಂಕಿಪಾಕ್ಸ್ಗೆ ಬ್ರೆಜಿಲ್ನಲ್ಲಿ 21 ದಿನ ಕಡ್ಡಾಯ ಕ್ವಾರಂಟೈನ್
ತಮ್ಮ ಜನ್ಮ ದಿನಾಂಕವನ್ನೇ ಬದಲಾಯಿಸಿಕೊಂಡ ಕಾಂಬೋಡಿಯಾ ಪ್ರಧಾನಿ : ಅಸಲಿ ಕಾರಣ ಇಲ್ಲಿದೆ