BJP ಶಾಸಕರಿಗೆ ಬಿಸಿ ಮುಟ್ಟಿಸಲು ಲೋಕಾಸ್ತ್ರ ?

ಲೋಕಾಯುಕ್ತದಲ್ಲಿರುವ ಪ್ರಕರಣಗಳ ಸ್ಥಿತಿ-ಗತಿ ಬಗ್ಗೆ ಮಾಹಿತಿಗೆ ಸೂಚನೆ-ಶೀಘ್ರದಲ್ಲೇ ಕೆಲ ಪ್ರಭಾವಿ ರಾಜಕಾರಣಿಗಳಿಗೆ ಶಾಕ್‌?

Team Udayavani, May 29, 2023, 7:30 AM IST

lokayukta

ಬೆಂಗಳೂರು: ಒಂದು ಕಾಲದಲ್ಲಿ ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸಿದ್ದ ಕಾಂಗ್ರೆಸ್‌ ಸರ್ಕಾರ ಇದೀಗ ಲೋಕಾಯುಕ್ತವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಬಿಜೆಪಿ ಶಾಸಕರು ಹಾಗೂ ತಮ್ಮ ವಿರೋಧಿಗಳಿಗೆ ಬಿಸಿ ಮುಟ್ಟಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲ ದಿನಗಳ ಹಿಂದೆ ಲೋಕಾಯುಕ್ತ ಪೊಲೀಸ್‌ ವಿಭಾಗದಲ್ಲಿರುವ ಪ್ರಕರಣಗಳ ಸ್ಥಿತಿ ಗತಿಗಳ ಕುರಿತು ಮಾಹಿತಿ ಸಲ್ಲಿಸಲು ಸರ್ಕಾರ ಸೂಚಿಸಿದೆ.

ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗವನ್ನು ಸರ್ಕಾರವು ತನ್ನ ಎದುರಾಳಿಗಳ ಮೇಲೆ ಅಸ್ತ್ರವಾಗಿ ಪ್ರಯೋಗಿಸಲು ತೆರೆ ಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಡಳಿತ ಪಕ್ಷದ ಇತರ ನಾಯಕರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಲೋಕಾಯುಕ್ತ ಪೊಲೀಸ್‌ ವಿಭಾಗದಲ್ಲಿರುವ ಪ್ರಕರಣಗಳು ಹಾಗೂ ಅದರ ಪ್ರಸ್ತುತ ಸ್ಥಿತಿ-ಗತಿಗಳ ವಿವರ ಸಲ್ಲಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಜೊತೆಗೆ ಕೆಲ ಮಹತ್ವದ ಪ್ರಕರಣಗಳಲ್ಲಿ ಸಂಗ್ರಹಿಸಿರುವ ದಾಖಲೆಗಳು, ಅಕ್ರಮ ಆಸ್ತಿ (ಡಿಎ ಕೇಸ್‌) ಪ್ರಕರಣ, ದಾಖಲಾಗಿರುವ ಎಫ್ಐಆರ್‌ಗಳ ಮಾಹಿತಿ ಕೇಳಿದ್ದಾರೆ. ಕಾಂಗ್ರೆಸ್‌ನ ವಿರೋಧಿಗಳ ಮೇಲಿನ ಕೆಲ ಪ್ರಕರಣಗಳು ಮರುಜೀವ ಪಡೆದರೆ, ಆಡಳಿತ ಪಕ್ಷದ ಮುಖಂಡರ ಆಪ್ತ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹಳ್ಳ ಹಿಡಿಯುವ ಸಾಧ್ಯತೆಗಳಿವೆ. ಕೆಲ ಬಿಜೆಪಿ ಶಾಸಕರು, ಪ್ರಭಾವಿ ರಾಜಕಾರಣಿಗಳು, ಎ ಗ್ರೇಡ್‌ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳನ್ನು ಗಾಳಕ್ಕೆ ಸಿಲುಕಿಸಲು ಕಾಂಗ್ರೆಸ್‌ ಸರ್ಕಾರ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದೆ.

ತನಿಖಾ ಹಂತದಲ್ಲಿವೆ ನೂರಾರು ಪ್ರಕರಣ: ಲೋಕಾಯುಕ್ತಕ್ಕೆ ಅಧಿಕಾರ ಸಿಕ್ಕಿದ ಬಳಿಕ 156ಕ್ಕೂ ಅಧಿಕ ಎಫ್ಐಆರ್‌ಗಳು ದಾಖಲಾಗಿವೆ. ಈ ಪೈಕಿ 18 ಅಕ್ರಮ ಆಸ್ತಿಗೆ (ಡಿಎ) ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಎಸಿಬಿಯಲ್ಲಿ ತನಿಖಾ ಹಂತದಲ್ಲಿದ್ದ 1,156ಕ್ಕೂ ಹೆಚ್ಚಿನ ಪ್ರಕರಣಗಳು ಈಗಾಗಲೇ ಲೋಕಾಯಕ್ತ ಅಂಗಳಕ್ಕೆ ಬಂದಿವೆ. ಕೋಟ್ಯಂತರ ರೂ. ಅಕ್ರಮ ಆಸ್ತಿಗೆ ಸಂಬಂಧಿಸಿದ ನೂರಾರು ಪ್ರಕರಣಗಳು ತನಿಖಾ ಹಂತದಲ್ಲಿವೆ. ಶೇ.30ರಷ್ಟು ಪ್ರಕರಣ ಬೆಂಗಳೂರು ಲೋಕಾಯುಕ್ತ ವಿಭಾಗಕ್ಕೆ ಸೇರಿದರೆ, ಉಳಿದ ಶೇ.70ರಷ್ಟು ಕೇಸ್‌ಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 24 ಎಫ್ಐಆರ್‌ ದಾಖಲಾಗಿವೆ.

ಲೋಕಾಯುಕ್ತ ಮೊಟಕುಗೊಳಿಸಿದ್ದ ಕಾಂಗ್ರೆಸ್‌: 2016ರಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಹ್ಯೂಬ್ಲೋಟ್‌ ವಾಚ್‌ ಪ್ರಕರಣ ಮುನ್ನೆಲೆಗೆ ಬಂದ ಕೆಲ ದಿನಗಳಲ್ಲಿ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕಿದ್ದ ಅಧಿಕಾರ ಮೊಟಕುಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಲಾಗಿತ್ತು. ಬಿಜೆಪಿ ಸರ್ಕಾರದ ಅಧಿಕಾರಾವಧಿಯ ಕೊನೆಯ ಹಂತದಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಮತ್ತೆ ಹಿಂದಿನ ಅಧಿಕಾರ ಕೊಟ್ಟು ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿತ್ತು.

ಸದ್ಯದಲ್ಲೇ ಲೋಕಾಯುಕ್ತದಿಂದ ದಾಳಿ?
ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಕೆಲ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವುದಕ್ಕೆ ಸಂಬಂಧಿಸಿ ಸಾಕ್ಷ್ಯ ಕಲೆ ಹಾಕುವಲ್ಲಿ ಲೋಕಾಯುಕ್ತ ಪೊಲೀಸರು ನಿರತರಾಗಿದ್ದಾರೆ. ಈ ಅಧಿಕಾರಿಗಳು ಈ ಹಿಂದಿನ ಬಿಜೆಪಿ ಸರ್ಕಾರದ ಸಚಿವರು, ಮುಖಂಡರಿಗೆ ಆಪ್ತರಾಗಿದ್ದರು ಎನ್ನಲಾಗಿದೆ. ಶೀಘ್ರದಲ್ಲೇ ಕೆಲ ಅಧಿಕಾರಿಗಳ ಕಚೇರಿ, ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಲಿರುವ ಬಗ್ಗೆ ನಂಬಲರ್ಹ ಉನ್ನತ ಮೂಲಗಳು “ಉದಯವಾಣಿ’ಗೆ ಸುಳಿವು ನೀಡಿದೆ.

ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದಿಂದ ಯಾವುದೇ ಒತ್ತಡಗಳು ಬಂದಿಲ್ಲ. ಭ್ರಷ್ಟರ ವಿರುದ್ಧ ನಿರಂತರವಾಗಿ ಸಮರ ಸಾರಲು ಲೋಕಾ ಪೊಲೀಸ್‌ ವಿಭಾಗ ಸಜ್ಜಾಗಿದೆ.
| ನ್ಯಾ.ಬಿ.ಎಸ್‌.ಪಾಟೀಲ್‌, ಲೋಕಾಯುಕ್ತರು

ಸರ್ಕಾರದಿಂದ ಮಾಹಿತಿ ಕೇಳಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಲೋಕಾಯುಕ್ತವು ಕಾನೂನು ಪ್ರಕಾರ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭ್ರಷ್ಟರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
| ಉಷಾರಾಣಿ, ರಿಜಿಸ್ಟ್ರಾರ್‌, ಲೋಕಾಯುಕ್ತ ಸಂಸ್ಥೆ.

ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

6-fusion-meals

UV Fusion: ಅನ್ನದ ಮಹತ್ವ

tdy-10

Gandhi Jayanti : ಕಡೆಗೂ ಗೆದ್ದ ಗಾಂಧಿಗಿರಿ!

wc-2011

2011 Cricket World Cup: ಧೋನಿ ಪಡೆಯ ದಿಗ್ವಿಜಯ; ಭಾರತಕ್ಕೆ ಒಲಿಯಿತು 2ನೇ ವಿಶ್ವಕಪ್‌

ICC World Cup 2023; ತಂಡ ಬಿಟ್ಟು ಮನೆಗೆ ತೆರಳಿದ ವಿರಾಟ್ ಕೊಹ್ಲಿ; ಆಗಿದ್ದೇನು?

ICC World Cup 2023; ತಂಡ ಬಿಟ್ಟು ಮನೆಗೆ ತೆರಳಿದ ವಿರಾಟ್ ಕೊಹ್ಲಿ; ಆಗಿದ್ದೇನು?

Gandhi Jayanti: ದೊಡ್ಡಬಳ್ಳಾಪುರದಲ್ಲಿ ಗಾಂಧೀಜಿ ಭೇಟಿಯ ನೆನಪು

Gandhi Jayanti: ದೊಡ್ಡಬಳ್ಳಾಪುರದಲ್ಲಿ ಗಾಂಧೀಜಿ ಭೇಟಿಯ ನೆನಪು

Delhi Police: ದೆಹಲಿ ಪೊಲೀಸರ ಕಾರ್ಯಾಚರಣೆ… ಐಸಿಸ್‌ ಉಗ್ರ ಶಾಹ್‌ನವಾಜ್‌ ಬಂಧನ

Delhi Police: ದೆಹಲಿ ಪೊಲೀಸರ ಕಾರ್ಯಾಚರಣೆ.. ಶಂಕಿತ ಐಸಿಸ್‌ ಉಗ್ರ ಶಾಹ್‌ನವಾಜ್‌ ಬಂಧನ

Miya Community: ಮುಂದಿನ 10ವರ್ಷ BJP ಗೆ ಮಿಯಾ ಸಮುದಾಯದ ಮತಗಳ ಅಗತ್ಯವಿಲ್ಲ: ಹಿಮಂತ ಶರ್ಮಾ

Miya Community: ಮುಂದಿನ 10ವರ್ಷ BJPಗೆ ಮಿಯಾ ಸಮುದಾಯದ ಮತಗಳ ಅಗತ್ಯವಿಲ್ಲ: ಅಸ್ಸಾಂ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jds

ದೇವೇಗೌಡ, ಕುಮಾರಸ್ವಾಮಿ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ- JDS ಶಾಸಕರು, ಮುಖಂಡರ ವಾಗ್ಧಾನ 

siddaramayya IMP

Politics: ನಮ್ಮದು ಜಾತ್ಯತೀತ ಸರಕಾರ: ಸಿದ್ದರಾಮಯ್ಯ

SHADAKSHARI

Karnataka: ನ.16ರೊಳಗೆ 7ನೇ ವೇತನ ಆಯೋಗ ವರದಿ ಸಲ್ಲಿಕೆ: ಷಡಕ್ಷರಿ

treking

Kumara Parvata: ಅ.3 ರಿಂದ ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

pramod madhwaraj

Muslim League ಕೋಮುವಾದಿಪಕ್ಷವಲ್ಲವೇ?: ಮಧ್ವರಾಜ್‌

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

6-fusion-meals

UV Fusion: ಅನ್ನದ ಮಹತ್ವ

tdy-10

Gandhi Jayanti : ಕಡೆಗೂ ಗೆದ್ದ ಗಾಂಧಿಗಿರಿ!

wc-2011

2011 Cricket World Cup: ಧೋನಿ ಪಡೆಯ ದಿಗ್ವಿಜಯ; ಭಾರತಕ್ಕೆ ಒಲಿಯಿತು 2ನೇ ವಿಶ್ವಕಪ್‌

5-sirsi

Sirsi: ಕೆ‌.ಪಿ.ಹೆಗಡೆ‌ ಅವರಿಗೆ ಅನಂತಶ್ರೀ ಪ್ರಶಸ್ತಿ ಪ್ರದಾನ

Helium balloon: ಸ್ಫೋಟ; ನಾಲ್ವರು ಮಕ್ಕಳು ಸೇರಿ ಐವರಿಗೆ ಗಾಯ

Helium balloon: ಸ್ಫೋಟ; ನಾಲ್ವರು ಮಕ್ಕಳು ಸೇರಿ ಐವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.