2021ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ‘ಜಲ್ಲಿಕಟ್ಟು’ ಸಿನೆಮಾ ಅಧಿಕೃತ ಪ್ರವೇಶ
Team Udayavani, Nov 25, 2020, 5:28 PM IST
ನವದೆಹಲಿ: ಲಿಜೋ ಜೋಶ್ ಪೆಲ್ಲಿಶ್ಯೇರಿ ನಿರ್ದೇಶನದ ಮಲಯಾಳಂ ಸಿನಿಮಾ ‘ಜಲ್ಲಿಕಟ್ಟು’ ಭಾರತದಿಂದ ಆಧಿಕೃತವಾಗಿ ಪ್ರತಿಷ್ಠಿತ ಆಸ್ಕರ್ 2021 ಪ್ರಶಸ್ತಿಗೆ ಪ್ರವೇಶ ಗಿಟ್ಟಿಸಿದೆ.
ಲಿಜೋ ನಿರ್ದೇಶನದ ಈ ಸಿನಿಮಾದಲ್ಲಿ ಆ್ಯಂಟನಿ ವರ್ಗೀಸ್, ಚೆಂಬನ್ ವಿನೋದ್ ಜೋಶ್, ಸಬಮೊನ್ ಅಬ್ದುಸಮದ್ ಮುಂತಾದವರು ನಟಿಸಿದ್ದಾರೆ. ಹರೀಶ್ ಎಸ್ ಬರೆದ ಸಣ್ಣ ಕಥೆ ‘ಮಾವೋಯಿಸ್ಟ್’ ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ.
ಇದೊಂದು ಆ್ಯಕ್ಷನ್ ಡ್ರಾಮಾ ಸಿನಿಮಾವಾಗಿದ್ದು, ಕಸಾಯಿಖಾನೆಯಿಂದ ತಪ್ಪಿಸಿಕೊಂಡು ಓಡುವ ಗೂಳಿಯೊಂದನ್ನು ಊರಿನ ಜನರು ಬೇಟೆಯಾಡುವ ಕುರಿತು ಕಥೆಯನ್ನು ಹೆಣೆಯಲಾಗಿದೆ. ಅಂಗಮಾಲಿ ಡೈರೀಸ್ ಮತ್ತು ಇ ಮಾ ಯು ಲಿಜೋ ಜೋಶ್ ಈ ಹಿಂದೆ ನಿರ್ದೇಶಿಸಿದ ಪ್ರಮುಖ ಚಿತ್ರಗಳು.
ಸ್ಪರ್ಧೆಯಲ್ಲಿ ದಿ ಡಿಸೈಪಲ್, ಈಸ್ ಲವ್ ಇನಫ್, ಶಿಕಾರಾ, ಚಪ್ಪಕ್, ಗುಂಜನ್ ಸಕ್ಸೆನಾ, ದಿ ಕಾರ್ಗಿಲ್ ಗರ್ಲ್, ಬುಲ್ ಬುಲ್ ಆ್ಯಂಡ್ ಸೀರಿಯಸ್ ಮ್ಯಾನ್, ಶಕುಂತಲಾ ದೇವಿ, ಗುಲಾಬೋ ಸಿತಾಬೋ ಮತ್ತಿತರ 26 ಸಿನೆಮಾಗಳನ್ನು ಹಿಂದಿಕ್ಕಿ ‘ಜಲ್ಲಿಕಟ್ಟು’ ಆಸ್ಕರ್ ಗೆ ಆಯ್ಕೆಯಾಗಿದೆ.
ಇದನ್ನೂ ಓದಿ:ಅವಕಾಶ ಸಿಕ್ಕರಷ್ಟೇ ಅಭಿನಯಿಸುತ್ತೇನೆ, ಆದ್ರೆಯಾರ ಬಳಿಯೂ ಅಂಗಲಾಚಲಾರೆ…
ಜಲ್ಲಿಕಟ್ಟು ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ರಾವೇಲ್, 14 ಜನ ತೀರ್ಪುಗಾರರ ತಂಡದಲ್ಲಿ ಹೆಚ್ಚಿನವರು ಆರಿಸಿದ ಸಿನೆಮಾ ಇದೇ ಆಗಿದೆ. ಮಾನವರ ಪ್ರವೃತ್ತಿ ಪ್ರಾಣಿಗಳಿಗಿಂತಲೂ ಕೆಟ್ಟದಾಗಿದೆ ಎಂಬುದನ್ನು ಬಿಂಬಿಸುವ ಸಿನೆಮಾ ಇದಾಗಿದೆ ಎಂದು ತಿಳಿಸಿದ್ದಾರೆ
ಕೋವಿಡ್-19 ಕಾರಣದಿಂದಾಗಿ ಇದೇ ಮೊದಲ ಬಾರಿಗೆ ವರ್ಚುವಲ್ ಸಭೆಯ ಮೂಲಕ ಚಿತ್ರಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಕಳೆದ ಏಳು ತಿಂಗಳುಗಳಿಂದ ಚಿತ್ರಮಂದಿರಗಳು ತೆರಯದೇ ಇರುವುದರಿಂದ ಒಟಿಟಿಯಲ್ಲಿ ಬಿಡುಗಡೆ ಕಂಡ ಸಿನೆಮಾಗಳನ್ನು ಕೂಡ ಈ ಬಾರಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಆಸ್ಕರ್ ನೀಡುತ್ತಿರುವ 93ನೇ ಅಕಾಡೆಮಿ ಪ್ರಶಸ್ತಿ ಇದಾಗಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ಯುಪಿಎಸ್ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ
ಆಸ್ಟ್ರೇಲಿಯಾ ವಿರುದ್ಧದ ಟೀಂ ಇಂಡಿಯಾದ ಗೆಲುವು ಬದುಕಿಗೆ ದೊಡ್ಡ ಪಾಠ: ಮೋದಿ
ಕೋವಿಡ್ 19- ಯುಪಿಎಸ್ ಸಿ ಪರೀಕ್ಷೆ ಮತ್ತೊಂದು ಅವಕಾಶ ಸಾಧ್ಯವಿಲ್ಲ: ಸುಪ್ರೀಂಗೆ ಕೇಂದ್ರ
ಮಮತಾಗೆ ಮತ್ತೊಂದು ಹಿನ್ನಡೆ: ಪಶ್ಚಿಮಬಂಗಾಳ ಅರಣ್ಯ ಖಾತೆ ಸಚಿವ ಬ್ಯಾನರ್ಜಿ ರಾಜೀನಾಮೆ
ಭಾರತೀಯ Facebook ಬಳಕೆದಾರರ ಡಾಟಾಕ್ಕೆ ಕನ್ನ: ಕೇಂಬ್ರಿಡ್ಜ್ ಅನಾಲಿಟಿಕಾ ವಿರುದ್ಧ CBI ಕೇಸ್