
ಅರಬ್ಬೀ ಸಮುದ್ರದಲ್ಲಿ “ಮರ್ಸಿಡಿಸ್’ ಹಡಗಿನ ಅವಶೇಷ : ನೌಕಾಪಡೆಯಿಂದ ತೀವ್ರ ತಪಾಸಣೆ
ಕನ್ಯಾಕುಮಾರಿಯ ಸಾಗರದಾಳದ ಮೀನುಗಾರಿಕಾ ಹಡಗು ದುರಂತ ಶಂಕೆ
Team Udayavani, Apr 25, 2021, 9:47 PM IST

ಕನ್ಯಾಕುಮಾರಿ: ಮರ್ಸಿಡಿಸ್ ಎಂಬ ಮೀನುಗಾರಿಕಾ ಹಡಗೊಂದು (ನೋಂದಣಿ ಸಂಖ್ಯೆ ಐಎನ್‌ಡಿ- ಟಿಎನ್ 15 - ಎಂಎಂ – 4775) ಅರಬ್ಬೀ ಸಮುದ್ರದಲ್ಲಿ ಅಪಘಾತಕ್ಕೀಡಾಗಿದ್ದು ಅದರಲ್ಲಿದ್ದ ಕನ್ಯಾಕುಮಾರಿ ಮೂಲದ 11 ಮೀನುಗಾರರು ನಾಪತ್ತೆಯಾಗಿದ್ದಾರೆ. ಗೋವಾ ತೀರದಿಂದ ಸಮುದ್ರದಲ್ಲಿ ಸುಮಾರು 160 ನಾಟಿಕಲ್ ಮೈಲು ದೂರದಲ್ಲಿ (ಸುಮಾರು 1,100 ಕಿ.ಮೀ.) ದೋಣಿಯ ಅವಶೇಷಗಳು ಸಿಕ್ಕಿವೆ.
ಇದು ಬೇರೊಂದು ಹಡಗಿಗೆ ಡಿಕ್ಕಿ ಹೊಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದ್ದರೂ ಈ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಇದರಲ್ಲಿದ್ದ ಎಲ್ಲಾ ಮೀನುಗಾರರು ಕನ್ಯಾಕುಮಾರಿ ಬಳಿಯ ಕಡಲ ತೀರದ ಹಳ್ಳಿಯಾದ ವಲ್ಲವಿಲ್ಲೆ„ ಗ್ರಾಮಕ್ಕೆ ಸೇರಿದವರೆಂದು ಹೇಳಲಾಗಿದೆ. ಆದರೆ, ಅವರ ವಿವರಗಳು ಲಭ್ಯವಾಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ, ತೆಂಗಪಟ್ಟಣಂ ಎಂಬ ಪುಟ್ಟ ಬಂದರಿನಿಂದ ಏ. 6ರಂದು ಈ ಹಡಗು ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿದಿತ್ತೆಂಬ ವಿಚಾರಗಳು ತಿಳಿದುಬಂದಿವೆ.
ಇದನ್ನೂ ಓದಿ :ಕೋವಿಡ್ ತಡೆಗೆ ರಾಜ್ಯಕ್ಕೆ 800 ಮೆಟ್ರಿಕ್ ಟನ್ ಆಕ್ಸಿಜನ್: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಸಮುದ್ರದಲ್ಲಿ ಮುಳುಗಿರಬಹುದಾದ ಮರ್ಸಿಡಿಸ್‌ನ ಎಲ್ಲಾ ಅವಶೇಷಗಳನ್ನು ಪತ್ತೆ ಹಚ್ಚಲು ಇನ್ನೂ ನಾಲ್ಕೈದು ದಿನಗಳೇ ಬೇಕಾಗಬಹುದು ಎಂದು ಕರಾವಳಿ ಕಾವಲು ಪಡೆ ಹಾಗೂ ಭಾರತೀಯ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೂಂದೆಡೆ, ಕನ್ಯಾಕುಮಾರಿಯ ಮೀನುಗಾರಿಕಾ ಸಂಘಟನೆಗಳು, ನಾಪತ್ತೆಯಾದ ಮೀನುಗಾರರ ಬಗ್ಗೆ ಆದಷ್ಟೂ ಬೇಗನೇ ಮಾಹಿತಿ ಕಲೆ ಹಾಕುವಂತೆ ನೌಕಾಪಡೆಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
