ಬ್ರಾಹ್ಮಣರ ವಿರುದ್ಧ ಕೀಳು ಹೇಳಿಕೆ: ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಮಾಂಝಿ
Team Udayavani, Dec 19, 2021, 7:44 PM IST
ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ, ಹಿಂದೂಸ್ಥಾನ್ ಅವಾಮ್ ಮೋರ್ಚಾದ ಸ್ಥಾಪಕ ಜಿತನ್ ರಾಮ್ ಮಾಂಝಿ ಅವರು ಬ್ರಾಹ್ಮಣರ ವಿರುದ್ಧ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಆಡಳಿತಾರೂಢ ಎನ್‌ಡಿಎಗೆ ತೀವ್ರ ಮುಜುಗರವನ್ನುಂಟು ಮಾಡಿದ್ದಾರೆ.
70 ರ ಹರೆಯದ ನಾಯಕ, ಶನಿವಾರ ರಾತ್ರಿ ದಲಿತರಲ್ಲಿ ಅತ್ಯಂತ ಹಿಂದುಳಿದಿರುವ “ಭುಯಾನ್-ಮುಸಾಹರ್” ಸಮುದಾಯದ ಸಮಾರಂಭದಲ್ಲಿ ಮಾತನಾಡುತ್ತ ಬ್ರಾಹ್ಮಣರ ವಿರುದ್ಧ ಅವಾಚ್ಯ ಶಬ್ದ ಬಳಸಿ ಅವರು ತಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆಂದು ಹೇಳಿ ವಿವಾದಕ್ಕೆ ಸಿಲುಕಿದ್ದಾರೆ.
ಕಾರ್ಯಕ್ರಮದ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಾಂಝಿ ಅವರು ಪುರೋಹಿತ ವರ್ಗಕ್ಕೆ ಅವಾಚ್ಯ ಪದವನ್ನು ಉಚ್ಚರಿಸುವುದನ್ನು ಕೇಳಬಹುದು. ದಲಿತ ಗ್ರಾಹಕರು ನೀಡುವ ಆಹಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ ಆದರೆ ಅವರಿಂದ ನಗದು ಸ್ವೀಕರಿಸಲು ಯಾವುದೇ ಹಿಂಜರಿಕೆಯಿಲ್ಲ ಎಂದಿದ್ದಾರೆ.
ನಿತೀಶ್ ಕುಮಾರ್ ಸರ್ಕಾರದಲ್ಲಿ ಮಾಂಝಿ ಅವರ ಮಗ ಮಂತ್ರಿಯಾಗಿದ್ದು, ಅವರನ್ನು ಈ ಹೇಳಿಕೆ ಇಕ್ಕಟ್ಟಿಗೆ ಸಿಲುಕಿಸಿದೆ.ಬಿಜೆಪಿಗೂ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.
ವಿವಾದದ ಬೆನ್ನಲ್ಲೇ ಮಾಂಝಿ, ಹೇಳಿಕೆಯಿಂದ ಹೊರಬಂದಿದ್ದು, ನಾನು ನನ್ನ ಸಹವರ್ತಿ ದಲಿತರಲ್ಲಿ ಸ್ವಲ್ಪ ಸ್ವಾಭಿಮಾನವನ್ನು ತುಂಬಲು ಆ ಪದವನ್ನು ಬಳಸಿದ್ದೇನೆ ಹೊರತು ಬ್ರಾಹ್ಮಣರಿಗೆ ಆ ಪದವನ್ನು ಬಳಸಲಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಂಶಾಡಳಿತ ದೇಶಕ್ಕೆ ಅಪಾಯಕಾರಿ: ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ರಾಹುಲ್ ನಕಾರ
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ, ಆರೋಪಿ ಮುಂಬೈ ಪೊಲೀಸ್ ವಶಕ್ಕೆ
ಸ್ವಾತಂತ್ರ್ಯೋತ್ಸವ- ಒಂದು ಲಕ್ಷ ಸಣ್ಣ ಪ್ರಕರಣಗಳನ್ನು ಹಿಂಪಡೆದ ಅಸ್ಸಾಂ ಸರ್ಕಾರ: ಸಿಎಂ ಶರ್ಮಾ
ಗೋವಾ: ಸರ್ಕಾರಿ ಶಾಲೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಲಾಗುವುದು ಸಿಎಂ ಸಾವಂತ್
ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ